ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಜೆಟ್‌: ಬೆಂಗಳೂರಿಗೆ ಏನೇನು ಸಿಕ್ಕಿದೆ?

By Nayana
|
Google Oneindia Kannada News

Recommended Video

Karnataka Budget 2018 : ಯಾವುದು ಏರಿಕೆ? ಯಾವುದು ಇಳಿಕೆ? | Oneindia Kannada

ಬೆಂಗಳೂರು, ಜು.5: ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಮಂಡಿಸಿದ್ದಾರೆ. ಹಾಗಾದರೆ ಬೆಂಗಳೂರಿಗೆ ಈ ಬಜೆಟ್‌ನಿಂದ ಏನೇನು ದೊರೆತಿದೆ ಎನ್ನುವುದನ್ನು ಗಮನಿಸೋಣ.

ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಬೋನ್‌ ಮ್ಯಾರೋ, ಟ್ರಾನ್ಸ್‌ಪ್ಲಾಂಟ್‌ ಘಟಕ ಆರಂಭಿಸಲಾಗುತ್ತಿದೆ. ನಗರದ 6 ಕಡೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಮಾಡಲಾಗುತ್ತಿದ್ದು ಕೆಆರ್‌ಡಿಸಿಎಲ್‌ ಇದರ ಹೊಣೆ ಹೊತ್ತಿದೆ ಅದಕ್ಕೆ 15,285 ಕೋಟಿ ರೂ, ವೆಚ್ಚಮಾಡಲಾಗುತ್ತಿದೆ.

ಕರ್ನಾಟಕ ಬಜೆಟ್ 2018: ರೈತರ 2 ಲಕ್ಷ ರೂ.ವರೆಗಿನ ಸಾಲಮನ್ನಾ ಕರ್ನಾಟಕ ಬಜೆಟ್ 2018: ರೈತರ 2 ಲಕ್ಷ ರೂ.ವರೆಗಿನ ಸಾಲಮನ್ನಾ

ಇನ್ನು ಬಿಎಂಟಿಸಿಗೆ 150 ಕೋಟಿ ರೂ ಮೀಸಲಿಡಲಾಗಿದ್ದು, 80 ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದೆ. ಬೆಳ್ಳಂದೂರು ಕೆರೆ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ರಾಸಾಯನಿಕ ಯುಕ್ತ ನೀರಿನಿಂದ ಸಂಪೂರ್ಣವಾಗಿ ಕಲುಷಿತಗೊಂಡಿದೆ ಅದರ ಪುನಶ್ಚೇತನಕ್ಕೆ 50 ಕೋಟಿಯನ್ನು ರಾಜ್ಯ ಬಜೆಟ್‌ ಮೀಸಲಿಟ್ಟಿದೆ. ಬೆಂಗಳೂರಿನ ಹಲವು ಕಡೆ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುತ್ತದೆ, ಬೆಂಗಳೂರಿನ ಬಾರ್ ಕೌನ್ಸಿಲ್‌ಗೆ ಐದು ಕೋಟಿ ಮೀಸಲಿಡಲಾಗಿದೆ.

ಬೆಂಗಳೂರು ನಮ್ಮ ಮೆಟ್ರೋಗೆ 95 ಕಿ.ಮೀ ವಿಸ್ತರಣೆಗೆ ಬಜೆಟ್‌ನಲ್ಲಿ ಅನುಮತಿ ನೀಡಲಾಗಿದೆ. ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬೆಂಗಳೂರು ಹೊರ ವಲಯದಲ್ಲಿ ಫೆರಿಫೆರಲ್‌ ರಿಂಗ್ ರಸ್ತೆ ನಿರ್ಮಾಣ , ಪೀಣ್ಯದಲ್ಲಿ 10 ಕೋಟಿ ವೆಚ್ಚದಲ್ಲಿ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುತ್ತದೆ.

ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ? ಕುಮಾರಸ್ವಾಮಿ ಬಜೆಟ್ 2018: ಯಾವುದು ಏರಿಕೆ? ಯಾವ್ದು ಇಳಿಕೆ?

ಡಾ. ರಾಜ್‌ಕುಮಾರ್‌ ಸ್ಮರಣಾರ್ಥ ಕಂಠೀರವ ಸ್ಟುಡಿಯೋದಲ್ಲಿ ಯೋಗ ಕೇಂದ್ರ ಸ್ಥಾಪನೆ, ಕೆಂಪೇಗೌಡ ಬಡಾವಣೆಯಲ್ಲಿ 5 ಸಾವಿರ ಅರ್ಜಿ ವಿತರಣೆ,

ನಮ್ಮ ಮೆಟ್ರೋ ವಿಸ್ತರಣೆಗೆ ಸಾವಿರ ಕೋಟಿ

ನಮ್ಮ ಮೆಟ್ರೋ ವಿಸ್ತರಣೆಗೆ ಸಾವಿರ ಕೋಟಿ

ರಾಜ್ಯ ಬಜೆಟ್‌ನಲ್ಲಿ ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಸಾವಿರ ಕೋಟಿ ಮೀಸಲಿಟ್ಟಿದ್ದಾರೆ.ಟೋಲ್‌ಗೇಟ್‌-ಕಡಬಗೆರೆ 12.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ, 3 ಕಿ.ಮೀ ಮಾರ್ಗದ ಗೊಟ್ಟಿಗೆರೆ- ಬಸವಪುರ, 18.95 ಕೋಗಿಲು ಕ್ರಾಸ್‌ನಿಂದ ರಾಜಾನುಕುಂಟೆ 10.6 ಕಿ.ಮೀ ಮಾರ್ಗ, ಇಬ್ಲೂರಿನಿಂದ ಒಟ್ಟು 6.67 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ.

ಬಿಎಂಟಿಸಿಗೆ ರಾಜ್ಯ ಬಜೆಟ್‌ ಕೊಟ್ಟಿದ್ದೇನು

ಬಿಎಂಟಿಸಿಗೆ ರಾಜ್ಯ ಬಜೆಟ್‌ ಕೊಟ್ಟಿದ್ದೇನು

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಮಂಡನೆ ಮಾಡಿದ್ದು, ಅದರಲ್ಲಿ ಬಿಎಂಟಿಸಿಗೆ 100 ಕೋಟಿ ಮೀಸಲಿಟ್ಟಿದ್ದು, 80 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ ಮಾಡಲಾಗುತ್ತದೆ.

ರಾಜ್ಯ ಬಜೆಟ್‌ನಲ್ಲಿ ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ

ರಾಜ್ಯ ಬಜೆಟ್‌ನಲ್ಲಿ ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ

ಸಮ್ಮಿಶ್ರ ಸರ್ಕಾರ ಮೊದಲ ಬಜೆಟ್‌ನಲ್ಲಿ ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 50 ಕೋಟಿ ಮೀಸಲಿರಿಸಲಾಗಿದೆ. ಬೆಳ್ಳಂದೂರು ಕೆರೆ ಕಾರ್ಖಾನೆಗಳಿಂದ ಬರುವ ರಾಸಾಯನಿಕ ಯುಕ್ತ ನೀರುಗಳು ಸೇರಿ ಸಂಪೂರ್ಣ ಮಲಿನವಾಗಿದೆ, ಹಾಗಾಗಿ ಅದರ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ 50 ಕೋಟಿ ಮೀಸಲಿಟ್ಟಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್‌ನಿಂದ ಏನು ದೊರೆತಿದೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್‌ನಿಂದ ಏನು ದೊರೆತಿದೆ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 500 ಸಾವಿರ ನಿವೇಶನ ಹಂಚಲಾಗಿದ್ದು, ಇನ್ನೂ 5 ಸಾವಿರ ನಿವೇಶನ ಹಂಚಿಕೆ ಕಾರ್ಯಕ್ರಮ ಬಾಕಿ ಇದೆ. ಭೂಮಾಲೀಕರಿಗೆ ಮೊದಲನೇ ಹಂತದಲ್ಲಿ 2157 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 3 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.

ಬಜೆಟ್‌ ಬೆಂಗಳೂರು ಜಲಮಂಡಳಿಗೆ ನೀಡಿದ್ದೇನು

ಬಜೆಟ್‌ ಬೆಂಗಳೂರು ಜಲಮಂಡಳಿಗೆ ನೀಡಿದ್ದೇನು

ಕೊಳಚೆ ನೀರಿನಲ್ಲಿ ಕಾಣಿಸುತ್ತಿರುವ ರಾಸಾಯನಿಕ ಅಂಶಗಳು ಕೊಳಚೆ ನೀರಿಗೆ ಸೇರಿದಾಗ ನೀರು ನದಿಗೆ ಸೇರಿ ಕಲುಷಿತವಾಗುತ್ತದೆ ಹಾಗಾಗಿ ನಗರದ ಹಲವೆಡೆ ರಾಸಾಯನಿಕ ರಾಜ್ಯ ವಸ್ತುಗಳ ಶುದ್ಧೀಕರಣ ಘಟಕಗಳನ್ನು ನಿರ್ಮಿಸಲಾಗುತ್ತದೆ.ಪೀಣ್ಯ ಕೈಗಾರಿಕಾ ವಲಯದಲ್ಲಿ 10 ಕೋಟಿ ವೆಚ್ಚದಲ್ಲಿ ಘಟಕ ತೆರೆಯಲಾಗುತ್ತದೆ.

ರಾಜ್‌ ಸ್ಮರಣಾರ್ಥ ಕಂಠೀರವ ಸ್ಟುಡಿಯೋದಲ್ಲಿ ಯೋಗಕೇಂದ್ರ ಸ್ಥಾಪನೆ

ರಾಜ್‌ ಸ್ಮರಣಾರ್ಥ ಕಂಠೀರವ ಸ್ಟುಡಿಯೋದಲ್ಲಿ ಯೋಗಕೇಂದ್ರ ಸ್ಥಾಪನೆ

ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಮಂಡನೆಯಾಗಿದೆ, ಡಾ. ರಾಜ್‌ಕುಮಾರ್‌ ಸ್ಮರಣಾರ್ಥ ಕಂಠೀರವ ಸ್ಟುಡಿಯೋದಲ್ಲಿ ಯೋಗ ಕೇಂದ್ರ ಸ್ಥಾಪನೆ, ಮಾಡಲಾಗುತ್ತದೆ ಎಂದು ಬಜೆಟ್‌ನಲಲ್ಲಿ ತಿಳಿಸಲಾಗಿದೆ.

ಬೆಂಗಳೂರಿನ ಆರು ಕಡೆ ಪೆರಿಫೆರಲ್‌ ರಸ್ತೆ

ಬೆಂಗಳೂರಿನ ಆರು ಕಡೆ ಪೆರಿಫೆರಲ್‌ ರಸ್ತೆ

ನಗರದ 6 ಕಡೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ ಮಾಡಲಾಗುತ್ತಿದ್ದು ಕೆಆರ್‌ಡಿಸಿಎಲ್‌ ಇದರ ಹೊಣೆ ಹೊತ್ತಿದೆ ಅದಕ್ಕೆ 15,285 ಕೋಟಿ ರೂ, ವೆಚ್ಚಮಾಡಲಾಗುತ್ತಿದೆ.

English summary
Ahead of Karnataka Assembly Election 2018, Karnataka Chief Minister HD Kumaraswamy presented his first budget. 12crore has been allocated for Bone marrow transplant centre in Kidwai cancer hospital. allocated 100 crores for BMTC
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X