ಕರ್ನಾಟಕ ಬಜೆಟ್ 2019: ಬೆಂಗಳೂರಿಗೆ ಸಿಕ್ಕಿದ್ದೇನು?
ಬೆಂಗಳೂರು, ಫೆಬ್ರವರಿ 8: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ 2019-20ನೇ ಸಾಲಿನ ಬಜೆಟ್‌ನ್ನು ಮಂಡಿಸಿದ್ದು, ಅದರಲ್ಲಿ ಬೆಂಗಳೂರಿಗೆ ಸಾಕಷ್ಟು ಅನುಕೂಲಗಳಿವೆ ಅದನ್ನು ಮುಂದೆ ನೋಡೋಣ. ಬ್ರ್ಯಾಂಡ್ ಬೆಂಗಳೂರು ಉತ್ತಮಪಡಿಸಲು ಸಿಎಂ ನವನಿರ್ಮಾಣ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 8 ಸಾವಿರ ಕೋಟಿ ರೂ. ಅನುದಾನ ಒದಗಿಸುವುದಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕ ಬಜೆಟ್ ಅಧಿವೇಶನ, ಎಚ್ಡಿಕೆ ಬಜೆಟ್ ಮಂಡನೆ, ಬಿಜೆಪಿ ಪ್ರತಿಭಟನೆ : ಚಿತ್ರಗಳು
2019-2020ನೇ ಸಾಲಿನ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ ಅವರು, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ಎಲಿವೇಟೆಡ್ ಕಾರಿಡಾರ್ ಯೋಜನೆ ಅನುಷ್ಠಾನಗೊಳಿಸುವುದಾಗಿ ಹೇಳಿದರು. ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ತಿಪ್ಪಗೊಂಡನಹಳ್ಳಿ ಕೆರೆ ಅಭಿವೃದ್ಧಿಗೆ ಚಾಲನೆ ನೀಡುವುದಾಗಿ ತಿಳಿಸಿದರು.

ಅಷ್ಟೇ ಅಲ್ಲದೆ 1700 ಎಂಎಲ್‌ಡಿ ತ್ಯಾಜ್ಯ ನೀರು ಸಂಸ್ಕರಣ ಸಾಮರ್ಥ್ಯ ಹೊಂದುವ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಅಂತೆಯೇ ಗ್ರಿಡ್ ಸಪರೇಟರ್‌ಗಳು,104.02 ಕಿ.ಮೀ ಉದ್ದದ ನಮ್ಮ ಮೆಟ್ರೋ ಮಾರ್ಗ, 65 ಕೋಟಿ ರೂ ಅನುದಾನದಲ್ಲಿ ಫೆರಿಪೆರಲ್ ರಿಂಗ್ ರಸ್ತೆ ನಿರ್ಮಾಣ,ಬಿಬಿಎಂಪಿಗೆ 2,300 ಕೋಟಿ ರೂ ಅನುದಾನ ಸೇರಿ ಒಟ್ಟು ಬೆಂಗಳೂರು ಅಭಿವೃದ್ಧಿಗಾಗಿ 8015 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕುಮಾರಣ್ಣನ ಬಜೆಟ್ ನಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು
ಬೆಂಗಳೂರಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆ, 195 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ, 5 ಲಕ್ಷ ಬೀದಿದೀಪಗಳು ಎಲ್‌ಇಡಿ, ಗುರಗುಂಟೆಪಾಳ್ಯ ಅಂಡರ್ ಪಾಸ್ ನಿರ್ಮಾಣ.











Click it and Unblock the Notifications