ಬಸವನಗುಡಿಯಲ್ಲಿ 2 ದಿನಗಳ ವಿಪ್ರರ ಬೃಹತ್ ಸಮಾವೇಶ

ಬೆಂಗಳೂರು, ಫೆಬ್ರವರಿ 05 : ಬೆಂಗಳೂರು ಮಹಾನಗರ ವಿಪ್ರರ ಬೃಹತ್ ಸಮಾವೇಶ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫೆಬ್ರವರಿ 24ರ ಶನಿವಾರ ಮತ್ತು 25ರ ಭಾನುವಾರದಂದು ನಡೆಯಲಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆ ಸಮಾವೇಶವನ್ನು ಆಯೋಜಿಸುತ್ತಿದೆ.

ಬ್ರಾಹ್ಮಣ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡುರಾವ್ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಕೆ.ಎನ್ ವೆಂಕಟನಾರಾಯಣ್ ಅವರು ಆಹ್ವಾನಿಸಿದರು.

ಸಹಸ್ರಾರು ವಿಪ್ರವರ್ಯರು ಭಾಗವಹಿಸುತ್ತಿರುವ ಎರಡು ದಿನಗಳ ಈ ಸಮಾವೇಶದಲ್ಲಿ ಮಹಾ ಗಣಪತಿ ಹೋಮ, ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ, ಗುರುವಂದನಾ ಕಾರ್ಯಕ್ರಮ, ಅಭಿನಂದನಾ ಕಾರ್ಯಕ್ರಮ, ಹಾಸ್ಯ ಸಂಜೆ, ಸಂಗೀತ ಸಂಜೆವನ್ನು ಆಯೋಜಿಸಲಾಗಿದೆ.

Karnataka Brahmins conference in Bengaluru

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳ್ ರವರ ಸಾನ್ನಿಧ್ಯದಲ್ಲಿ 24ರಂದು ಉದ್ಘಾಟನೆ ಜರುಗಲಿದೆ. ಗುರುವಂದನೆ ಪೇಜಾವರ ಮಠದ ಶ್ರೀಗಳ ಸಾನ್ನಿಧ್ಯದಲ್ಲಿ 10 ಗಂಟೆಗೆ ನಡೆಯಲಿದ್ದು, ಸಂಜೆ 7.30ಕ್ಕೆ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಹಾಸ್ಯ ಸಂಜೆ ಇರಲಿದೆ. 25ರ ಸಂಜೆ ಅರ್ಜುನ್ ಜನ್ಯ ಮತ್ತು ವಿಜಯ್ ಪ್ರಕಾಶ್ ಅವರಿಂದ ಸಂಗೀತ ಸಂಜೆ ರಂಜಿಸಲಿದೆ.

ಭಾನುವಾರ, ಫೆಬ್ರವರಿ 25ರಂದು ಮಧ್ಯಾಹ್ನ 3 ಗಂಟೆಗೆ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಭಜನೆ, ಚಂಡೆ ವಾದ್ಯ, ಜಾನಪದ ನೃತ್ಯ, ಡೊಳ್ಳು ಕುಣಿತ, ಕೋಲಾಟ, ಕಂಸಾಳೆ, ಸ್ತಬ್ಧ ಚಿತ್ರಗಳ ಪ್ರದರ್ಶನಗಳು ಶೋಭಾಯಾತ್ರೆಯಲ್ಲಿ ನೋಡುಗರನ್ನು ರಂಚಿಸಲಿವೆ.

ಈ ಬೃಹತ್ ಶೋಭಾಯಾತ್ರೆಯಲ್ಲಿ, ಸ್ಥಳೀಯ ನಾಯಕರು ಸೇರಿದಂತೆ ಹಲವಾರು ರಾಜಕಾರಣಿಗಳು, ವಿಪ್ರ ಮುಖಂಡರು, ಅರ್ಚಕ ವೃಂದ, ಖ್ಯಾತ ಚಲನಚಿತ್ರ ನಟನಟಿಯರು, ಕಿರುತೆರೆ ಕಲಾವಿದರು, ಹಲವಾರು ಕ್ರೀಡಾಪಟುಗಳು ಕೂಡ ಭಾಗವಹಿಸುತ್ತಿರುವುದು ವಿಶೇಷ.

ಸಿದ್ದರಾಮಯ್ಯನವರನ್ನು ಆಹ್ವಾನಿಸಿದ್ದಕ್ಕೆ ಆಕ್ರೋಶ : ಯಾವಾಗಲೂ ಬ್ರಾಹ್ಮಣರನ್ನು ವಿರೋಧಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಈ ಸಮ್ಮೇಳನಕ್ಕೆ ಆಹ್ವಾನಿಸುವ ಅಗತ್ಯವೇನಿತ್ತು ಎಂದು ಕೆಲ ಬ್ರಾಹ್ಮಣರು ತಕರಾರು ತೆಗೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+