Yuva Nidhi Scheme: ಕಾಂಗ್ರೆಸ್ ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದ ಬಿಜೆಪಿ

ಬೆಂಗಳೂರು,ಜೂನ್‌ 02:ಕಾಂಗ್ರೆಸ್‌ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ರಾಜ್ಯದಲ್ಲಿ ಜಾರಿ ಮಾಡಲಾಗಿದೆ. ಅದರಲ್ಲಿ ನಿರುದ್ಯೋಗಿ ಯುವಕರಿಗೆ 3000 ರೂ. ನೀಡುವ ಯುವನಿಧಿ ಯೋಜನೆ ಒಂದು. ಇದೀಗ ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಪಕ್ಷವು ಕಾಂಗ್ರೆಸ್‌ ನುಡಿದಂತೆ ನಡೆದಿಲ್ಲ ಎಂದು ವಾಗ್ದಾಳಿ ನಡೆಸಿದೆ.

ಈ ಸಂಬಂಧ ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ. ರಾಜ್ಯ ಕಾಂಗ್ರೆಸ್ ಪಕ್ಷ ಹೇಳುವುದು ಒಂದು, ಮಾಡುವುದು ಮತ್ತೊಂದು ಎಂಬ ಮಾತನ್ನು ಚಾಲ್ತಿಯಲ್ಲಿಟ್ಟಿದೆ. ಚುನಾವಣೆಯ ಮುನ್ನ 'ಎಲ್ಲಾ ಪದವೀಧರರಿಗೆ' ₹ 3000 ಎಂದು ಬೊಬ್ಬಿರಿದು, ಇದೀಗ ತನ್ನ ಬಣ್ಣ ಬದಲಿಸಿದೆ ಎಂದು ಕಿಡಿ ಕಾರಿದೆ.

Yuva Nidhi Scheme

2023ರ ವಿಧಾನಸಭಾ ಚುನಾವಣೆ ಮೊದಲು ಎಲ್ಲ ನಿರುದ್ಯೋಗಿ ಯುವಕರಿಗೆ ಭತ್ಯೆ ಎಂದು ಹೇಳಿತ್ತು. ಈ ಕುರಿತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಸರ್ಕಾರ ರಚನೆಯಾಗಿ ಗ್ಯಾರಂಟಿಗಳನ್ನು ಜಾರಿ ಮಾಡುವಾಗ 2022-23 ನೇ ಸಾಲಿನ ಉತ್ತೀರ್ಣರಾಗಿ ಕೆಲಸ ಸಿಗದ ಪದವೀಧರ ನಿರುದ್ಯೋಗಿಗಳಿಗೆ ಮಾತ್ರ ಎಂದು ಸರ್ಕಾರ ಘೋಷಿಸಿದೆ ಎಂದು ಬಿಜೆಪಿ ತಕರಾರು ತೆಗಿದಿದೆ.

ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯದ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯಡಿ ಮಾಸಿಕ ರೂ. 3000 ಮತ್ತು 1500 ರೂ. ಭತ್ಯೆ ನೀಡುವಾಗಿ ಹೇಳಿತ್ತು. ಆದರೆ ಇದೀಗ ಕಳೆದ ಸಾಲಿನಲ್ಲಿ ಉತ್ತೀರ್ಣರಾಗಿ ಕೆಲಸ ಸಿಗದ ಪದವಿಪಡೆದ ನಿರುದ್ಯೋಗಿಗಳಿಗೆ ಎಂದು ಹೇಳಿ ಷರತ್ತು ವಿಧಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಮೂಲಕ ಯುವಕರಿಗೆ ಚೊಂಬು ನೀಡಿದೆ ಎಂದು ಬಿಜೆಪಿ ದೂರಿದೆ.

ಕಾಂಗ್ರೆಸ್ ಸರ್ಕಾರ ಹೇಳಿದ್ದೇನು?

2022-23ರ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಉತ್ತೀರ್ಣರಾಗಿ ನಿರುದ್ಯೋಗಿಗಳಾಗಿದ್ದರೆ ಅಂತವರಿಗೆ ಯುವನಿಧಿ ಯೋಜನೆ ಅಡಿಯಲ್ಲಿ ತಿಂಗಳಿಗೆ 3,000 ರೂಪಾಯಿ ನೀಡಲಾಗುವುದು. ಅಂದರೆ BA, BSC, B com ಪದವೀಧರ ನಿರುದ್ಯೋಗಿಗಳಿಗೆ ಇದರ ಲಾಭ ಸಿಗಲಿದೆ. 2022-23 ರಲ್ಲಿ ಪದವಿ ಮುಗಿಸಿ ಕೆಲಸ ಸಿಗದೆ ನಿರುದ್ಯೋಗಿಗಳಾದ ಎಲ್ಲ ಪದವೀಧರರಿಗೆ ಮುಂದಿನ24 ತಿಂಗಳವರೆಗೆ ಪ್ರತಿ ತಿಂಗಳು 3000 ರೂಪಾಯಿ ನೀಡಲಾಗುವುದು. ಜೊತೆಗೆ ಡಿಪ್ಲೋಮಾ ಪದವಿ ಪಡೆದವರಿಗೆ 1,500 ರೂಪಾಯಿ ಸರ್ಕಾರದಿಂದ ಪಾವತಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಬಳಿಕ ಘೋಷಿಸಿದರು.

Yuva Nidhi Scheme

ಪದವೀಧರರು 24 ತಿಂಗಳ ಒಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಸೇರಿದ್ದರೆ ಅವರಿಗೆ ಹಣ ಯುವನಿಧಿಯ ಹಣ ದೊರಕುವುದಿಲ್ಲ. ಯೋಜನೆ ಲಾಭ ಪಡೆಯಲು ಅರ್ಹರು ನಿರುದ್ಯೋಗಿಗಳು ಅರ್ಜಿ ಹಾಕಿ ನೋಂದಣಿ ಸಲ್ಲಿಸುವ ಪ್ರಕ್ರಿಯೆ ಇನ್ನೇನು ಆರಂಭವಾಗಲಿದೆ. ಈ ಯುವನಿಧಿ ಯೋಜನೆ ಲೈಂಗಿಕ ಅಲ್ಪ ಸಂಖ್ಯಾತರಿಗೂ ಅನ್ವಯವಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಯುವನಿಧಿ ಯೋಜನೆಯೊಂದಿಗೆ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಮಹಿಳೆಯರಿಗೆ ಉಚಿತ ಬಸ್​ ಯೋಜನೆ ಜಾರಿಯನ್ನು ಅಧಿಕೃತಗೊಳಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+