Property Tax Fine: ಬೆಂಗಳೂರು ತೆರಿಗೆದಾರರ ಸ್ನೇಹಿ ಮಸೂದೆ ಅಂಗೀಕಾರ
ಬೆಂಗಳೂರು, ಫೆಬ್ರವರಿ 21: ಬೆಂಗಳೂರು ನಗರ ವ್ಯಾಪ್ತಿಯ ತೆರಿಗೆದಾರರಿಗೆ ಮಂಗಳವಾರ ವಿಧಾನಸಭೆಯಲ್ಲಿ ಮಂಡನೆಯಾದ ಮತ್ತು ಅಂಗೀಕಾರವಾದ ಮಸೂದೆಯು ಶುಭ ಸುದ್ದಿ ನೀಡಿದೆ. ಏಕೆಂದ್ರ ಆಸ್ತಿ ತೆರಿಗೆ ಮೇಲಿನ ದಂಡವನ್ನು ಶೇಕಡಾ 50 ರಷ್ಟು ಕಡಿತಗೊಳಿಸುವ ಮಸೂದೆಯನ್ನು ಸರ್ಕಾರ ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಅಂಗೀಕರಿಸಿತು. ಈ ಮೂಲಕ ತೆರಿಗೆ ಅರ್ಧ ಕಡಿತ ಅಧಿಕೃತವಾಯಿತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿದ್ದುಪಡಿ ಮಸೂದೆ 2024 ಎಂದು ಈ ಮಸೂದೆಗೆ ಎಂದು ಕರೆಯಲಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ನಿರ್ವಹಿಸುತ್ತಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಮಂಗಳವಾರ ಮಸೂದೆ ಮಂಡಿಸಿದರು. ಬಳಿಕ ಇದಕ್ಕ ಅಂಗೀಕಾರ ದೊರೆಯಿತು. ತೆರಿಗೆ ದಂಡದ ಮೊತ್ತ ಅರ್ಧಕ್ಕೆ ಇಳಿಸಲಾಯಿತು.

2,700 ಕೋಟಿ ರೂ. ಉಳಿತಾಯ
ಮಸೂದೆ ಅಂಗೀಕಾರ ಮೂಲಕ ಬೆಂಗಳೂರಿಗರು ಸರ್ಕಾರಕ್ಕೆ ಪಾವತಿಸಬೇಕಿದ್ದ ಸುಮಾರು 2,700 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ಹಣವನ್ನು ಸರ್ಕಾರ ಕೈಬಿಟ್ಟಿದೆ. ಅರ್ಧಕ್ಕೆ ದಂಡದ ಮೊತ್ತಿ ಇಳಿಕೆ ಮಾಡಿದ್ದರಿಂದ ಇಷ್ಟು ಹಣ ತೆರಿಗೆದಾರರಿಗೆ ಉಳಿಯಲಿದೆ.
ಇನ್ನೂ ಬಿಬಿಎಂಪಿಯು 1000 ಕೋಟಿ ರೂಪಾಯಿ ಮೌಲ್ಯದ ದಂಡವನ್ನು ಸಂಗ್ರಹಿಸಲು ಈ ಮಸೂದೆ ದಾರಿ ಮಾಡಿಕೊಡುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರ ಕಚೇರಿ ಹೊರಡಿಸಿದ ಹೇಳಿಕೆಯು ತಿಳಿಸಿದೆ.

ಮಸೂದೆ: 15 ಲಕ್ಷ ಜನರಿಗೆ ಪ್ರಯೋಜನ
ಸರ್ಕಾರ ಕೈಗೊಂಡ ಈ ದಂಡ ಮೊತ್ತವನ್ನು ಅರ್ಧಕ್ಕೆ ಇಳಿಸುವ ನಿರ್ಧಾರದಿಂದ ಬೆಂಗಳೂರು ನಗರವೊಂದರಲ್ಲಿಯೇ 5.51 ಲಕ್ಷ ತೆರಿಗೆ ಪಾವತಿದಾರರು, ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಐದರಿಂದ ಏಳು ಲಕ್ಷ ಜನರು ಮತ್ತು ಮೂರು ಲಕ್ಷ ಭಾಗಶಃ ಆಸ್ತಿ ತೆರಿಗೆದಾರರು ಸೇರಿದಂತೆ ಒಟ್ಟು 13 ರಿಂದ 15 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಇವರೆಲ್ಲ ಈ ಮಸೂದೆ ವ್ಯಾಪ್ತಿಗೆ ಬರಲಿದ್ದಾರೆ ಎಂದರು.
ಮಸೂದೆ ಮಂಡನೆ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರು ಬಿಜೆಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈ ಮಸೂದೆ ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡಲಿದೆ. ಇದಕ್ಕೆ ಬಿಜೆಪಿಯ ವಿರೋಧವಿದೆ ಎಂದು ಅವರು ತಿಳಿಸಿದರು.
ತೆರಿಗೆ ದಂಡದಿಂದ ವಿನಾಯಿತಿ
ಈ ತಿದ್ದುಪಡಿ ಮಸೂದೆಯಿಂದ ಬಡವರಿಗೆ ವಿಶೇಷ ರಿಯಾಯಿತಿ ಅವಕಾಶ ಸಿಗುತ್ತದೆ. ಸರ್ಕಾರಿ ವಸತಿ ಕಟ್ಟಡ ಹಾಗೂ ಸ್ಲಂಗಳಲ್ಲಿನ (ಕೊಳೆಗೇರಿ) ಕಟ್ಟಡಗಳಿಗೆ ಆಸ್ತಿ ತೆರಿಗೆಯ ದಂಡದಿಂದ ವಿನಾಯಿತೆ ಕೊಡಲಾಗಿದೆ. ಸ್ವಂತ ಬಳಕೆಗಾಗಿ ಇರುವ 1,000 ಚದರ ಅಡಿವರೆಗಿನ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಳಂಬಕ್ಕೆ ಪಾವತಿಸಬೇಕಿದ್ದ ದಂಡದಿಂದ ಮುಕ್ತ ನೀಡಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ತೆರಿಗೆದಾರರ ಸ್ನೇಹಿ ತಿದ್ದುಪಡಿ ಮಸೂದೆ: ಡಿಕೆಶಿ
ಇನ್ನೂ ಈ ಮಸೂದೆಯು, ನಗರದಲ್ಲಿನ ವಸತಿ ಮತ್ತು ಮಿಶ್ರ-ಬಳಕೆಯ ಆಸ್ತಿ ಮಾಲೀಕರು ಡೀಫಾಲ್ಟ್ ಅವಧಿಯನ್ನು ಲೆಕ್ಕಿಸದೆ ಗರಿಷ್ಠ ಐದು ವರ್ಷಗಳ ಅವಧಿಗೆ ಮಾತ್ರ ಆಸ್ತಿ ತೆರಿಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಐದು ವರ್ಷ ಮೀರಿದ ಬಾಕಿ ಪಾವತಿಗಳಿಗೆ ಸರ್ಕಾರ ಬಡ್ಡಿ ಮನ್ನ ಮಾಡಿದೆ. ಆದ್ದರಿಂದ ಇದನ್ನು ತೆರಿಗೆದಾರರ ಸ್ನೇಹಿ ತಿದ್ದುಪಡಿ ಮಸೂದೆ ಎನ್ನಬಹುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಧಿವೇಶನದಲ್ಲಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಹಿಂದೆ ಅಧಿಕಾರಲ್ಲಿದ್ದ ಬಿಜೆಪಿ ಸರ್ಕಾರ ದಂಡವನ್ನು ದ್ವಿಗುಣಗೊಳಿಸಿತ್ತು. ಇದರಿಂದ ಬೆಂಗಳೂರಿನ ಆಸ್ತಿ ಮಾಲೀಕರು ಅಧಿಕ ದಂಡವನ್ನು ಪಾವತಿಸಬೇಕಾಯಿತು. ಇದು ಅವರಿಗೆಲ್ಲ ಹೊರಯಾಗಿತ್ತು ಎಂದು ಬಿಜೆಪಿ ವಿರುದ್ಧ ಆರೋಪಿಸಿ, ತಮ್ಮ ಮಸೂದೆ ತಿದ್ದುಪಡಿಯನ್ನು ಅವರು ಸಮರ್ಥಿಸಿಕೊಂಡರು.












Click it and Unblock the Notifications