ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಮತದಾರರ ಭರ್ಜರಿ ಎಂಟ್ರಿ!
ಬೆಂಗಳೂರು, ಮೇ 10: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನ ಆರಂಭವಾಗಿದೆ. ರಾಜ್ಯದ 224 ವಿಧಾನಸಭೆ ಸ್ಥಾನಗಳಿಗೆ ಬೆಳಗ್ಗೆ 7ಕ್ಕೆ ಮತದಾನ ಆರಂಭವಾಗಿದೆ. ಬೆಂಗಳೂರಲ್ಲೂ ಮತದಾರರು ಮತ ಚಲಾಯಿಸುತ್ತಿದ್ದು, ಬೆಳಗ್ಗೆ 9 ಗಂಟೆ ತನಕ ಬೆಂಗಳೂರು ನಗರದಲ್ಲಿ ಶೇ.8ರಷ್ಟು ಮತದಾನ ಆಗಿದೆ. ಹಾಗಾದ್ರೆ ರಾಜ್ಯದ ಇತರೆಡೆ ಎಷ್ಟು ಮತದಾನವಾಗಿದೆ? ತಿಳಿಯೋಣ ಬನ್ನಿ.
ದೇಶದ ಗಮನ ಸೆಳೆದಿರುವ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಮತದಾನ ಭರ್ಜರಿಯಾಗಿದೆ. ಒಟ್ಟು 224 ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಅಧಿಕಾರಿಗಳು ಹಲವು ಕ್ರಮ ಕೈಗೊಂಡಿದ್ದರು. ಅದೆಲ್ಲಾ ಈಗ ವರ್ಕೌಟ್ ಆಗುತ್ತಿದೆ. ಹೀಗೆ ರಾಜ್ಯದ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ವೋಟಿಂಗ್ ಆಗಿದೆ ಎಂಬುದನ್ನ ಇಲ್ಲಿ ಸಂಪೂರ್ಣವಾಗಿ ತಿಳಿಯೋಣ.

ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನ?
ಅಂದಹಾಗೆ ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಯಾವುದೇ ಅಡೆತಡೆ ಇಲ್ಲದೆ ಸಾಗಿದೆ. ಬೆಳಗ್ಗೆ 9 ಗಂಟೆ ತನಕ ಶೇಕಡಾ 8.15ರಷ್ಟು ಮತದಾನವಾಗಿದೆ. ಈ ಪೈಕಿ ಬೆಂಗಳೂರು ಕೇಂದ್ರ ಭಾಗದಲ್ಲಿ ಶೇಕಡಾ 8ರಷ್ಟು & ಬೆಂಗಳೂರು ಉತ್ತರ ಶೇಕಡಾ 8ರಷ್ಟು, ಬೆಂಗಳೂರು ದಕ್ಷಿಣ ಶೇಕಡಾ 7ರಷ್ಟು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 8ರಷ್ಟು ಮತದಾನವಾಗಿದೆ. ಇಷ್ಟೂ ರಾಜಧಾನಿ ಬೆಂಗಳೂರಿನ ಮತದಾನದ ಪ್ರಮಾಣ. ಇನ್ನುಳಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮತದಾನ ಯಾವ ರೀತಿ ಇದೆ ನೋಡೋಣ.
ವಿಜಯಪುರ ಜಿಲ್ಲೆಯಲ್ಲಿ ಶೇ.8ರಷ್ಟು, ಬೆಳಗಾವಿ ಜಿಲ್ಲೆಯಲ್ಲಿ ಶೇ.8ರಷ್ಟು, ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 9ರಷ್ಟು, ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 9, ಬೀದರ್ ಶೇ.8ರಷ್ಟು, ವಿಜಯಪುರ ಶೇ.8, ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 6ರಷ್ಟು, ಚಿಕ್ಕಬಳ್ಳಾಪುರ ಶೇ.10ರಷ್ಟು, ಚಿಕ್ಕಮಗಳೂರು ಶೇಕಡಾ 9ರಷ್ಟು, ಚಿತ್ರದುರ್ಗದಲ್ಲಿ ಶೇ.6, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 12ರಷ್ಟು, ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಶೇಕಡಾ 7ರಷ್ಟು ವೋಟಿಂಗ್ ಕಂಪ್ಲೀಟ್ ಆಗಿದೆ.
ಹಾಗೇ ಧಾರವಾಡದಲ್ಲಿ ಶೇಕಡಾ 8ರಷ್ಟು, ಗದಗ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಕಲಬುರಗಿ ಶೇಕಡಾ 7, ಹಾಸನ ಶೇಕಡಾ 9, ಹಾವೇರಿ ಶೇ.8, ಕೊಡಗು ಜಿಲ್ಲೆಯಲ್ಲಿ ಶೇಕಡಾ 11ರಷ್ಟು, ಕೋಲಾರ ಜಿಲ್ಲೆಯಲ್ಲಿ ಶೇಕಡಾ 7ರಷ್ಟು, ಕೊಪ್ಪಳದಲ್ಲಿ ಶೇ.8ರಷ್ಟು, ಮಂಡ್ಯ ಜಿಲ್ಲೆಯಲ್ಲಿ ಶೇ.7ರಷ್ಟು, ಮೈಸೂರಿನಲ್ಲಿ ಶೇ.6, ರಾಯಚೂರು ಶೇ.7, ರಾಮನಗರ ಜಿಲ್ಲೆಯಲ್ಲಿ ಶೇಕಡಾ 8, ಶಿವಮೊಗ್ಗದಲ್ಲಿ ಶೇಕಡಾ 9, ತುಮಕೂರು ಜಿಲ್ಲೆಯಲ್ಲಿ ಶೇಕಡಾ 8ರಷ್ಟು, ಉಡುಪಿಯಲ್ಲಿ ಶೇಕಡಾ 13ರಷ್ಟು, ಉತ್ತರ ಕನ್ನಡ ಶೇಕಡಾ 10ರಷ್ಟು, ವಿಜನಗರ ಶೇಕಡಾ 7ರಷ್ಟು, ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ಶೇಕಡಾ 7ರಷ್ಟು ಮತದಾನವಾಗಿದೆ.
ಮತದಾನದ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶಾಂತಿಯುತ ಮತದಾನಕ್ಕೆ ಅಗತ್ಯವಿದ್ದ ಎಲ್ಲಾ ಕ್ರಮಗಳನ್ನ ಜರುಗಿಸಲಾಗಿದ್ದು, ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಗಳಿಂದ ಮತದಾನದ ಪ್ರಮಾಣ ಕೂಡ ಏರಿಕೆಯಾಗುವ ನಿರೀಕ್ಷೆ ಇದೆ.












Click it and Unblock the Notifications