ರಾಕೇಶ್ ಫ್ಲಾಟ್‌ನ ಬಾಡಿಗೆದಾರರಲ್ಲ: ನಕಲಿ ವೋಟರ್ ಐಡಿ ಸಿಕ್ಕ ಮನೆ ಮಾಲಕಿ ಸ್ಪಷ್ಟನೆ

ಬೆಂಗಳೂರು, ಮೇ 9: ಜಾಲಹಳ್ಳಿಯ ಫ್ಲಾಟ್‌ ಒಂದರಲ್ಲಿ ದೊರೆತ ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಫ್ಲಾಟ್ ಮಾಲೀಕರಾದ ಮಂಜುಳಾ ನಂಜಾಮರಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನಕಲಿ ಗುರುತಿನ ಚೀಟಿ ದೊರೆತ ಫ್ಲಾಟ್‌ನಲ್ಲಿ ರಂಗರಾಜು ಮತ್ತು ರೇಖಾ ಎಂಬುವವರು ಬಾಡಿಗೆದಾರರಾಗಿದ್ದರು. ಕಾಂಗ್ರೆಸ್ ಆರೋಪಿಸಿರುವಂತೆ ಬಿಜೆಪಿ ಬೆಂಬಲಿಗ ರಾಕೇಶ್ ಇಲ್ಲಿ ಬಾಡಿಗೆಗೆ ಇರಲಿಲ್ಲ ಎಂದು ತಿಳಿಸಿದರು.

ಆಫೀಸಿನ ಕೆಲವು ಬೇಡದ ಸಾಮಾಗ್ರಿಗಳನ್ನು ಹಾಕಲು ಈ ಜಾಗ ಬೇಕು ಎಂದು ಹೇಳಿ ರಂಗರಾಜನ್ ಮತ್ತು ರೇಖಾ ಅವರು ಏಪ್ರಿಲ್ 5 ರಂದು ಫ್ಲಾಟ್‌ಅನ್ನು ಬಾಡಿಗೆಗೆ ತೆಗೆದುಕೊಂಡಿದ್ದರು.

1997-2002ರ ಅವಧಿಯಲ್ಲಿ ನಾನು ಕಾರ್ಪೊರೇಟರ್ ಆಗಿದ್ದೆ. ಕೇವಲ ಸಾಮಾನ್ಯ ಗೃಹಿಣಿಯಾಗಿದ್ದ ನನಗೆ ಗೆಲುವು ಸಿಗಲು ಬಿಜೆಪಿ ನೆರವು ನೀಡಿತ್ತು. ಅವರಿಗೆ ನಾನು ಎಂದಿಗೂ ಕೃತಜ್ಞಳಾಗಿರುತ್ತೇನೆ. ನಾನು ಕಾಂಗ್ರೆಸ್ ಬೆಂಬಲಿಗಳಲ್ಲ. ಎಂದಿಗೂ ಅದನ್ನು ಬೆಂಬಲಿಸುವುದೂ ಇಲ್ಲ ಎಂದು ಮಂಜುಳಾ ಹೇಳಿದರು.

karnataka assembly elections 2018 fake voter id flat owner manjula-speak

ರಾಕೇಶ್ ಅವರು ನನ್ನ ಸಂಬಂಧಿ ನಿಜ. ಆದರೆ ಅವರಿಗೂ ಫ್ಲಾಟ್‌ಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಕಾಂಗ್ರೆಸ್ ಜೊತೆ ನಮಗೆ ನಂಟು ಇದೆ ಎಂಬ ವರದಿಯೂ ಸುಳ್ಳು ಎಂದು ಮಂಜುಳಾ ನಂಜಾಮರಿ ಅವರ ಮಗ ಶ್ರೀಧರ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+