Get Updates
Get notified of breaking news, exclusive insights, and must-see stories!

Govindraj Nagar Constituency: ಈ ಬಾರಿ ಪ್ರಿಯಾಕೃಷ್ಣರನ್ನ ಪ್ರೀತಿಸುವರೇ ಗೋವಿಂದರಾಜನಗರದ ಮತದಾರರು?

ಈ ಬಾರಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿ ಇದೆ. ಕಾಂಗ್ರೆಸ್‌ ಬಿಜೆಪಿ ಸೆಣಸಲಿವೆ. ಇದಕ್ಕೆ ಸಂಬಂಧಿಸಿದ ವರದಿ, ವಿಶ್ಲೇಷಣೆ ಓದಿ.

ಬೆಂಗಳೂರು ಫೆಬ್ರವರಿ 21: ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಗೋವಿಂದರಾಜ ನಗರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು. ಗೋವಿಂದರಾಜ ನಗರ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು ನಗರದ ಹೃದಯಭಾಗದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವಿದೆ. ಈ ಕ್ಷೇತ್ರವು ಪ್ರಶಾಂತ್‌ ನಗರ, ಬಿಎಂಪಿ ಕಾಲೋನಿ, ಕಾರ್ಪೋರೇಷನ್ ಕಾಲೋನಿ, ಗೋವಿಂದರಾಜ ನಗರ, ರಸ್ತೆ ಲೇಔಟ್, ಮಾಗಡಿ ಕಾರ್ಡ್, ಸಿಎಚ್‌ಬಿಎಸ್‌ ಲೇಔಟ್, ತಮ್ಮೇನಹಳ್ಳಿ, ವಿಜಯನಗರ ಒಂದನೇ ಹಂತ, ಬಿನ್ನಿ ಲೇಔಟ್ ಮತ್ತು ಇತರ ಕೆಲವು ಪ್ರದೇಶಗಳನ್ನು ಒಳಗೊಂಡಿದೆ.

ಗೋವಿಂದರಾಜನಗರ ಕ್ಷೇತ್ರವು ವಸತಿ ಸಚಿವ ವಿ ಸೋಮಣ್ಣ ಪ್ರತಿನಿಧಿಸುವ ಕ್ಷೇತ್ರವಾಗಿದೆ. 2008ರಲ್ಲಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಸೋಮಣ್ಣ ಅವರು ನಂತರ ಪಕ್ಷ ಬದಲಾವಣೆ ಮಾಡಿ ಬಿಜೆಪಿ ಸೇರಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ವಿರುದ್ಧ ಸೋತಿದ್ದರು. ಪ್ರಿಯಕೃಷ್ಣ ಅವರು 2013ರ ಚುನಾವಣೆಯಲ್ಲಿ 40000 ಮತಗಳ ಅಂತರದಿಂದ ಸೋಮಣ್ಣ ವಿರುದ್ಧ ಜಯಗಳಿಸಿದ್ದರು.

ಅದಾದ ಬಳಿಕ ಇಲ್ಲಿ 2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ವಿ ಸೋಮಣ್ಣ ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಪ್ರಿಯಕೃಷ್ಣ 11375 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು. ಇನ್ನೂ ಜೆಡಿಎಸ್‌ನ ನಾಗೇಂದ್ರ ಪ್ರಸಾದ್ 7090 ಮತಗಳನ್ನು ಜಯಿಸಿ ಮೂರನೇ ಸ್ಥಾನವನ್ನು ಪಡೆದುಕೊಂಡರು. ಈ ಬಾರಿಯೋ ಗೋವಿಂದರಾಜನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

ಪ್ರಿಯ ಕೃಷ್ಣ ಕಾಂಗ್ರೆಸ್‌ನ ಯುವ ನಾಯಕ

ಪ್ರಿಯ ಕೃಷ್ಣ ಕಾಂಗ್ರೆಸ್‌ನ ಯುವ ನಾಯಕ

ಕಾಂಗ್ರೆಸ್‌ನ ಯುವ ನಾಯಕ ಪ್ರಿಯ ಕೃಷ್ಣ ಅವರು ಶಾಸಕರಾಗಿ ರಾಜಕೀಯ ಅನುಭವ ಹೊಂದಿದ್ದಾರೆ. 2013ರಲ್ಲಿ ತಂದೆ ಎಂ ಕೃಷ್ಣಪ್ಪ ಪಕ್ಕದ ವಿಜಯನಗರ ಕ್ಷೇತ್ರದ ಶಾಸಕರಾಗಿದ್ದರೆ, ಪುತ್ರ ಪ್ರಿಯಕೃಷ್ಣ ಗೋವಿಂದನಗರ ಕ್ಷೇತ್ರದ ಶಾಸಕರಾಗಿದ್ದರು. ಕಾನೂನಿನಲ್ಲಿ ಸ್ನಾತಕೋತ್ತರ ಪದವಿಧರರಾಗಿರುವ ಪ್ರಿಯಾ ಕೃಷ್ಣ ಅವರು 2006ರಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ತಂದೆಯೊಂದಿಗೆ ಪ್ರಚಾರ ಕಾರ್ಯದಲ್ಲಿ ಸಹಾಯ ಮಾಡುವುದರೊಂದಿಗೆ ರಾಜಕೀಯ ಅನುಭವ ಪಡೆದರು. ಗೋವಿಂದರಾಜನಗರದ ಕಾಂಗ್ರೆಸ್‌fನ ಹಾಲಿ ಶಾಸಕ ಪ್ರಿಯಾಕೃಷ್ಣ ಅವರು 1020 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

ತ್ರಿಕೋನ ಪೈಪೋಟಿ ಸಾಧ್ಯತೆ?

ತ್ರಿಕೋನ ಪೈಪೋಟಿ ಸಾಧ್ಯತೆ?

ಈ ಬಾರಿ ಶತಾಯಗತಾಯ ಗೋವಿಂದರಾಜನಗರ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಬೇಕು ಅಂತ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಮಾಜಿ ಶಾಸಕ ಪ್ರಿಯಾಕೃಷ್ಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಮತ್ತೊಂದೆಡೆ ಹಾಲಿ ಸಚಿವ ವಿ ಸೋಮಣ್ಣ ಕೂಡ ಮತ್ತೊಂದು ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇವೆಲ್ಲದರ ನಡುವೆ ಜೆಡೆಎಸ್ ಕೂಡ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಜೆಡಿಎಸ್‌ನಿಂದ ಆರ್. ಪ್ರಕಾಶ್ ಸ್ಪರ್ಧೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌fನಿಂದ ಸ್ಪರ್ಧಿಸಿ ಗೆದ್ದಿದ್ದ ಸೋಮಣ್ಣ, ಕೆಲವೇ ತಿಂಗಳುಗಳಲ್ಲಿ ಬಿಜೆಪಿಗೆ ವಲಸೆ ಹೋಗಿದ್ದರು. 2009ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪಕ್ಕದ ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಅವರ ಮಗ ಪ್ರಿಯಾಕೃಷ್ಣ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸಿತ್ತು. ಅಲ್ಲಿಯವರೆಗೆಗೂ 'ಆಪ್ತ ಮಿತ್ರರಾಗಿದ್ದ ಕೃಷ್ಣಪ್ಪ ಮತ್ತು ಸೋಮಣ್ಣ ಚುನಾವಣೆಯಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಇಳಿದಿದ್ದರು.

ಬಿಎಸ್‌ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಸೋಮಣ್ಣ ಈ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2013 ರಲ್ಲಿ ಕ್ಷೇತ್ರ ಬದಲಿಸಿ ವಿಜಯನಗರದಲ್ಲಿ ಸ್ಪರ್ಧಿಸಿದ್ದ ಸೋಮಣ್ಣ ಅಲ್ಲಿಯೂ ಸೋಲು ಅನುಭವಿಸಿದ್ದರು. ಆಗ ಪ್ರಯಾಕೃಷ್ಣ ಗೋವಿಂದರಾಜನಗರ ಕ್ಷೇತ್ರದಲ್ಲಿ ಪುನರಾಯ್ಕೆ ಆಗಿದ್ದರು. 2018ರ ಚನಾವಣೆಯಲ್ಲಿ ಪುನ: ಗೋವಿಂದರಾಜನಗರಕ್ಕೆ ಬಂದು ಸ್ಪರ್ಧಿಸಿದ್ದ ಸೋಮಣ್ಣ, ಪ್ರಿಯಾಕೃಷ್ಣ ಅವರನ್ನು ಮಣಿಸಿದ್ದರು. 2023ರ ಚುನಾವಣೆಯಲ್ಲಿ ಮತ್ತೆ ಮುಖಾಮುಖಿ ಆಗಲು ಇಬ್ಬರೂ ಸಜ್ಜಾಗುತ್ತಿದ್ದಾರೆ. ಸೋಮಣ್ಣ ಕ್ಷೇತ್ರ ಬದಲಿಸುವ ವದಂತಿ ಪದೇ ಪದೇ ಹರಿದಾಡುತ್ತಿದೆ. ಆದರೆ, ಅವರು ಮೌನ ಮುರಿದಿಲ್ಲ.

ಒಂದು ವೇಳೆ ವಯಸ್ಸಿನ ಕಾರಣ ಅಥವಾ ಬೇರೆ ಕಾರಣಗಳಿಂದ ವಿ ಸೋಮಣ್ಣ ಹಿಂದೆ ಸರಿದರೆ ಅವರ ಪುತ್ರ ಅರುಣ್ಣ ಸೋಮಣ್ಣ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಇದರೊಂದಿಗೆ ಬಿಬಿಎಂಪಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಇನ್ನೂ ಬಿಬಿಎಂಪಿ ಮಾಜಿ ಸದಸ್ಯರೂ ಆಗಿರುವ ಜೆಡಿಎಸ್‌ನ ಬೆಂಗಲೂರು ಮಹಾನಗರ ಘಟಕದ ಅಧ್ಯಕ್ಷ ಆರ್. ಪ್ರಕಾಶ್ ಅವರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದೆ. ಬಿಜೆಪಿಯಲ್ಲಿ ಸೋಮಣ್ಣ ಹೊರತಾಗಿ ಆಕಾಂಕ್ಷಿಗಳಿಲ್ಲ. ಕಾಂಗ್ರೆಸ್‌ನಲ್ಲಿ ಪ್ರಿಯಾಕೃಷ್ಣ ಒಬ್ಬರೇ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಜಾತಿ ಲೆಕ್ಕಾಚಾರ ಹೇಗಿದೆ?

ಜಾತಿ ಲೆಕ್ಕಾಚಾರ ಹೇಗಿದೆ?

ಗೋವಿಂದರರಾಜನಗರ ಕ್ಷೇತ್ರದಲ್ಲಿ ಒಟ್ಟು 2,34,550 ಮತದಾರರು ಇದ್ದಾರೆ. ಈ ಪೈಕಿ ಒಕ್ಕಲಿಗರು-56,000, ಲಿಂಗಾಯತರು 18000, ಬ್ರಾಹ್ಮಣರು 13000, ಇನ್ನುಳಿದಂತೆ ಒಬಿಸಿ 58500, ಎಸ್ಸಿ ಎಸ್ಟಿ 46750, ಮುಸ್ಲಿಂ ಮತದಾರರು 24,000 ಮಂದಿ ಇದ್ದಾರೆ. ಜೊತೆಗೆ 15,600 ಮಂದಿ ಇತರೇ ವರ್ಗದ ಮತದಾರರು ಇದ್ದಾರೆ.

ಗೋವಿಂದರಾಜನಗರದಲ್ಲಿ ಐತಿಹಾಸಿಕ ಮಾರುತಿ ಮಂದಿರ ದೇವಸ್ಥಾನವಿದೆ. ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಮೆಟ್ರೋ ರೈಲು ಹಾದು ಹೋಗಿದ್ದು, ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರಗಳಿಗೆ ಬಹುತೇಕ ಕಡೆ ಗಡಿರೇಖೆಯಂತಿದೆ. ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಅವರ ಹೆಸರು ವಾರ್ಡ್‌ಗೆ ಇಟ್ಟಿರುವುದು ಕ್ಷೇತ್ರದ ಹಿರಿಮೆ ಹೆಚ್ಚಿಸಿದೆ.

ಗೋವಿಂದರಾಜನಗರದಲ್ಲಿ ಚುನಾವಣಾ ಕಾವು

ಗೋವಿಂದರಾಜನಗರದಲ್ಲಿ ಚುನಾವಣಾ ಕಾವು

ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಇವೆ. ಗೋವಿಂದರಾಜನಗರ, ಕಾವೇರಿಪುರ, ದಾಸರಹಳ್ಳಿ, ಗಂಗೊಂಡನಹಳ್ಳಿ ಇತರೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಕಸ ಸಮರ್ಪಕವಾಗಿ ವಿಲೇವಾರಿಯಾಗದ ಕಾರಣ ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ. ಮಾಗಡಿ ರಸ್ತೆ ಹೌಸಿಂಗ್ ಬೋರ್ಡ್ ಸಮೀಪ ಗ್ರೇಡ್ ಸೆಪರೇಟರ್ ಕಾಮಗಾರಿ ವಿಳಂಬವಾಗಿ ಸಾಗಿರುವುದರಿಂದ ವಾಹನ ದಟ್ಟಣೆ ತೀವ್ರವಾಗಿದೆ. ರಾಜಾಜಿನಗರ ಕೈಗಾರಿಕೆ ಪ್ರದೇಶದಲ್ಲಿನ ಕಲ್ಯಾಣಮಂಟಪಗಳಿಂದ ಪಾರ್ಕೀಂಗ್ ಸಮಸ್ಯೆ ಹೆಚ್ಚಾಗಿದೆ.

ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಜನರಿಗೆ ನೆರವಾದ ವಿಚಾರವೂ ಇಲ್ಲಿ ಈ ಬಾರಿ ಚುನಾವಣಾ ವಿಷಯವಾಗುವ ಸಾಧ್ಯತೆ ದಟ್ಟವಾಗಿದೆ. ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಮೇಲೆ ಹಕ್ಕು ಸಾಧಿಸುವ ಪಯತ್ನ ಹಾಲಿ-ಮಾಜಿ ಶಾಸಕರಿಂದ ನಡೆಯುತ್ತಿದೆ. ಹಲವು ತಿಂಗಳ ಹಿಂದೆಯೇ ಈ ಕ್ಷೇತ್ರದಲ್ಲಿ ಚುನಾವಣಾ ಕಾವು ಆವರಿಸಿಕೊಂಡಿದ್ದು ಪಕ್ಷಾಂತರ ಪರ್ವ ನಿರಂತರವಾಗಿ ನಡೆಯುತ್ತಿದೆ. ಹೀಗಾಗಿ ಈ ಎಲ್ಲಾ ಸಮಸ್ಯೆ ನೀಗಿಸುವ ಭರವಸೆಯೊಂದಿಗೆ ಯಾರೂ ಗೆದ್ದು ಬರುತ್ತಾರೆ ಎಂಬ ಕುತೂಹಲ ಇಲ್ಲೇ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+