ಬಿಜೆಪಿಯ ವಿಸ್ತಾರಕ್ ಅಭಿಯಾನಕ್ಕೆ ಪ್ರತಿ ತಂತ್ರ ಹೆಣೆದ ಕಾಂಗ್ರೆಸ್
ಮುಂದಿನ ವರ್ಷದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆರಂಭಿಸಿರುವ ವಿಸ್ತಾರಕ್ ಅಭಿಯಾನಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರತಿತಂತ್ರ ಹೂಡಲು ನಿರ್ಧಾರ. ಸೋಮವಾರ (ಜುಲೈ 3) ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯಲ್ಲ
ಬೆಂಗಳೂರು, ಜುಲೈ 4: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜುಲೈ 3ರಂದು ರಾಜ್ಯ ಬಿಜೆಪಿಯು 3500 ಸ್ವಯಂ ಕಾರ್ಯಕರ್ತರ 'ವಿಸ್ತಾರಕ್' ಪಡೆಯನ್ನು ಪಕ್ಷದ ಅಭಿಯಾನಕ್ಕಾಗಿ ನಿಯೋಜಿಸಿದ್ದು, ಇದರಿಂದ ಎಚ್ಚೆತ್ತಿರುವ ರಾಜ್ಯ ಕಾಂಗ್ರೆಸ್ ಇದಕ್ಕೆ ಪ್ರತಿತಂತ್ರ ರೂಪಿಸಿದೆ.
ಸೋಮವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಭೆ ಸೇರಿದ ಕಾಂಗ್ರೆಸ್ ಪಕ್ಷದ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.

ಸಭೆಯಲ್ಲಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಕೆ.ಸಿ. ವೇಣುಗೋಪಾಲ್ ರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್, ಎಸ್ ಎಸ್ ಪಾಟೀಲ್, ದಿನೇಶ್ ಗುಂಡೂರಾವ್ ಮುಂತಾದವರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಐದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು ಅವು ಇಂತಿವೆ.
- ಬೂತ್ ಮಟ್ಟದಲ್ಲಿ ಕಮಿಟಿಗಳನ್ನು ಪುನಾರಚಿಸುವುದು.
- ಕ್ರಿಯಾಶೀಲರಲ್ಲದ 10 ಜಿಲ್ಲಾಧ್ಯಕ್ಷರ ಬದಲಾವಣೆ.
- ಆಗಸ್ಟ್ ತಿಂಗಳೊಳಗೆ ಜಿಲ್ಲಾ ಮಟ್ಟದಲ್ಲಿ ಸಮಾವೇಶ.
- ರಾಜ್ಯ ಮಟ್ಟದಲ್ಲಿರುವ ಪಕ್ಷದ ನಾಲ್ವರು ಸಹ ಉಸ್ತುವಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮನೆ
- ಬಿಜೆಪಿ ಪಕ್ಷದ ಸಂಘಟನಾ ಚಟುವಟಿಕೆ ಮೇಲೆ ಕಣ್ಣು ಹಾಗೂ 'ವಿಸ್ತಾರಕ್' ಬಗ್ಗೆ ವಿಶೇಷ ಗಮನ.












Click it and Unblock the Notifications