ಕೆ.ಆರ್.ಪುರಂನಲ್ಲಿ ಜೆಡಿಎಸ್ಸಿಗೆ ಈ ರೀತಿಯ ಮುಖಭಂಗ ನ್ಯಾಯವೇ?

Recommended Video

      ಬೆಂಗಳೂರಿನ K R ಪುರಂ ನಲ್ಲಿ ಕುಮಾರಸ್ವಾಮಿಗೆ ತೀವ್ರ ಮುಖಭಂಗ | Oneindia Kannada

      ಬೆಂಗಳೂರು, ಡಿ 9: ರಾಜ್ಯದ ಜನತೆಯನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಹನ್ನೆರಡು, ಕಾಂಗ್ರೆಸ್ ಎರಡು ಮತ್ತು ಒಬ್ಬರು ಪಕ್ಷೇತರರು ಜಯಸಾಧಿಸಿದ್ದಾರೆ.

      ತೀರಾ ನಿರಾಸಾದಾಯಕ ಪ್ರದರ್ಶನ ನೀಡಿರುವ ಜೆಡಿಎಸ್, ಯಾವುದೇ ಕ್ಷೇತ್ರವನ್ನು ಗೆಲ್ಲಲು ಸಫಲವಾಗಲಿಲ್ಲ. ಯಶವಂತಪುರ ಮತ್ತು ಕೆ.ಆರ್.ಪೇಟೆಯಲ್ಲಿ ಆರಂಭಿಕ ಮುನ್ನಡೆಯನ್ನು ಜೆಡಿಎಸ್ ಅಭ್ಯರ್ಥಿಗಳು ಪಡೆದಿದ್ದರೂ, ಕೊನೆಗೆ, ಭಾರೀ ಅಂತರದಿಂದ ಸೋಲು ಅನುಭವಿಸಿದರು.

      ಬೆಂಗಳೂರು ನಗರ ವ್ಯಾಪ್ತಿಯ ಕೆ.ಆರ್.ಪುರಂ ಕ್ಷೇತ್ರದಲ್ಲಂತೂ ಜೆಡಿಎಸ್ ಇನ್ನಿಲ್ಲದಂತೇ ಮುಖಭಂಗ ಅನುಭವಿಸಿದೆ. ಬಿಜೆಪಿಯ ಬೈರತಿ ಬಸವರಾಜು, ಈ ಕ್ಷೇತ್ರದಿಂದ ಜಯಶೀಲರಾಗಿದ್ದಾರೆ.

      Karnataka Assembly By Elections 2019: In K R Puram, NOTA Overtakes JDS

      ಬಿಜೆಪಿ ಅಭ್ಯರ್ಥಿ ಬೈರತಿ, ತಮ್ಮ ಸಮೀಪದ ಕಾಂಗ್ರೆಸ್ಸಿನ ಎಂ.ನಾರಾಯಣಸ್ವಾಮಿ ಅವರನ್ನು 63,405 ಮತಗಳ ಭಾರೀ ಅಂತರದಿಂದ ಸೋಲಿಸಿ, ಮತ್ತೆ, ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

      ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ನೋಟಾಗೆ 5,181 ಮತಗಳು ಬಿದ್ದಿರುವುದು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಕೃಷ್ಣಮೂರ್ತಿ ಕೇವಲ 2,048 ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ಹಾಗಾಗಿ, ನೋಟಾ, ಈ ಕ್ಷೇತ್ರದಲ್ಲಿ, ಜೆಡಿಎಸ್ಸಿಗಿಂತಲೂ ಹೆಚ್ಚಿನ ಮತವನ್ನು ಪಡೆದಿದೆ.

      ಪಕ್ಷಗಳು ಪಡೆದ ಮತಗಳು ಇಂತಿವೆ:

      ಬಿಜೆಪಿ - 1,39,833
      ಕಾಂಗ್ರೆಸ್ - 76,428
      ನೋಟಾ -5,181
      ಜೆಡಿಎಸ್ - 2,048

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+