• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೀರಮಹಾದೇವಿ ಚಿತ್ರದಲ್ಲಿ ಸನ್ನಿಲಿಯೋನ್ ಪಾತ್ರ ಕೈಬಿಡುವಂತೆ ಪ್ರತಿಭಟನೆ

|

ಬೆಂಗಳೂರು, ಅಕ್ಟೋಬರ್ 8: ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಅಭಿನಯಿಸಿರುವ ವೀರಮಹಾದೇವಿಚಿತ್ರ ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ಸನ್ನಿ ಲಿಯೋನ್ ಪಾತ್ರವನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದರು.

ಸನ್ನಿ ಲಿಯೋನ್ ಅಭಿನಯಿಸಿರುವ ವೀರಮಹಾದೇವಿ ಚಿತ್ರ ಇನ್ನೇನು ಬಿಡುಗಡೆಯಾಗುತ್ತಿದೆ, ಕನ್ನಡ ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆ ಕಾಣುತ್ತಿದೆ. ಚಿತ್ರದಲ್ಲಿ ಅವರ ಪಾತ್ರ ಕೈಬಿಡುವಂತೆ ಒತ್ತಾಯಿಸಿ, ಸನ್ನಿ ಲಿಯೋನ್ ಚಿತ್ರ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ಸನ್ನಿ ಲಿಯೋನ್ ಬಂದ್ರೆ ಸುಮ್ನಿರಲ್ಲ ಅಂತಿದಾರೆ ರಕ್ಷಣಾ ವೇದಿಕೆ ಹುಡುಗರು!

ಬಾಲಿವುಡ್ ಹಾಟ್ ನಟಿ ಸನ್ನಿಲಿಯೋನ್ ಈ ಬಾರಿ ಬೆಂಗಳೂರಿಗೆ ಬರುವುದು ಪಕ್ಕಾ ಎನ್ನುವ ಖುಷಿಯಲ್ಲಿ ಕೆಲವು ಮಂದಿ ಇದ್ದರೆ, ಇನ್ನೊಂದು ಕಡೆ ಅವರು ಬರುವುದು ಬೇಡ ಜತೆಗೆ ಅವರ ಪಾತ್ರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

ಬೆಂಗಳೂರಿನಲ್ಲಿ ನವೆಂಬರ್ 3ರಂದು ಸನ್ನಿ ಲಿಯೋನ್ ನೃತ್ಯ ಕಾರ್ಯಕ್ರಮ ನಡೆಯಲಿದೆ.ಸತತ ಎರಡನೇ ಬಾರಿಯೂ ಸಲ್ಲಿ ಲಿಯೋನ್ ಕಾರ್ಯಕ್ರಮಕ್ಕೆ ವಿಘ್ನ ಎದುರಾಗುವ ಸಾಧ್ಯತೆ ಇದೆ. ನವೆಂಬರ್ 3ರಂದು ಬೆಂಗಳೂರಿನ ಔಟರ್ ರಿಂಗ್ ರಸ್ತೆಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ಬಳಿಯ ವೈಟ್ ಆರ್ಕಿಡ್ ಹೋಟೆಲ್ ನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ನಡೆಯಲಿದ್ದು, ಆ ಕಾರ್ಯಕ್ರಮಕ್ಕೂ ತನ್ನ ವಿರೋಧ ವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಹೇಳಿದೆ.

ಸನ್ನಿ ಲಿಯೋನ್ ಕುಣಿತಕ್ಕೆ ಓಕೆ ಎಂದ ಬೆಂಗಳೂರು ಪೊಲೀಸರು

ಕಳೆದ 2017ರ ಡಿಸೆಂಬರ್ ನಲ್ಲಿ ಇದೇ ಹೋಟೆಲ್ ನಲ್ಲಿ ಇದೇ ಹೋಟೆಲ್ ನಲ್ಲಿ ಸನ್ನಿ ಲಿಯೋನ್ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತಾದರೂ, ಕನ್ನಡ ಪರ ಸಂಘಟನೆಗಳು ನಗರಾದ್ಯಂತ ಭಾರಿ ಹೋರಾಟ ನಡೆದಿದ್ದರಿಂದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು.

ಈಜುಕೊಳ ಉದ್ಘಾಟನೆಗೆ ಚಿಕ್ಕಮಗಳೂರಿಗೆ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ!

ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜಿಸುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಎಂಬ ಗುಪ್ತದಳದ ಮಾಹಿತಿ ಆಧರಿಸಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದರು. ಈ ಬಾರಿ ಹಲವು ಷರತ್ತುಗಳನ್ನು ವಿಧಿಸಿದ ಬಳಿಕ ಅನುಮತಿ ನೀಡಲಾಗಿದೆ.

 ಸನ್ನಿ ಲಿಯೋನ್ ಬೆಂಗಳೂರಿಗೆ ಬಂದ್ರೆ ಅಡ್ಡಿ ಇಲ್ಲ: ಟಿಎ ನಾರಾಯಣ ಗೌಡ

ಸನ್ನಿ ಲಿಯೋನ್ ಬೆಂಗಳೂರಿಗೆ ಬಂದ್ರೆ ಅಡ್ಡಿ ಇಲ್ಲ: ಟಿಎ ನಾರಾಯಣ ಗೌಡ

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ ಹೇಳಿಕೆ ನೀಡಿದ್ದು, ಸನ್ನಿ ಲಿಯೋನ್ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ, ಕನ್ನಡ ಹಾಡುಗಳನ್ನು ಬಳಸುವುದಾದರೆ ನಮ್ಮ ಅಭ್ಯಂತರವಿಲ್ಲ ಕನ್ನಡವನ್ನು ನಿರ್ಲಕ್ಷ್ಯ ಮಾಡಿದರೆ ಮಾತ್ರ ಅದನ್ನು ವಿರೋಧಿಸುತ್ತೇವೆ ಎಂದಿದ್ದಾರೆ.

ಅಲ್ಲದೆ ಸನ್ನಿ ಲಿಯೋನ್ ಕಾರ್ಯಕ್ರಮದಲ್ಲಿ ಗಾಯಕ ರಘು ಧೀಕ್ಷಿತ್ ಅವರು ಕನ್ನಡ ಹಾಡುಗಳನ್ನು ಹಾಡುತ್ತಾರೆ ಎಂಬ ಮಾಹಿತಿ ಇದೆ, ಈ ಬಾರಿ ವಿರೋಧ ವ್ಯಕ್ತಪಡಿಸಲ್ಲ ಬದಲಾಗಿ ಕನ್ನಡಕ್ಕೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದ್ದೇವೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಸನ್ನಿ ನಿಯೋನ್ ನೃತ್ಯಕ್ಕೆ ಪೊಲೀಸರ ಒಪ್ಪಿಗೆ

ಸನ್ನಿ ನಿಯೋನ್ ನೃತ್ಯಕ್ಕೆ ಪೊಲೀಸರ ಒಪ್ಪಿಗೆ

ನವೆಂಬರ್ 3ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸನ್ನಿ ಲಿಯೋನ್ ನೃತ್ಯ ಕಾರ್ಯಕ್ರಮಕ್ಕೆ ಪೊಲೀಸರು ಹಲವು ಷರತ್ತುಗಳನ್ನು ವಿಧಿಸಿ ಓಕೆ ಎಂದಿದ್ದಾರೆ. ಸನ್ನಿ ಲಿಯೋನ್​ ಅವರಿಗೆ ಅನುಮತಿ ನೀಡಲಾಗಿದೆ. ಕಾರ್ಯಕ್ರಮದ ಟಿಕೆಟ್​ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಭದ್ರತೆ ಒದಗಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತ ಮದ್ಯ ಮಾರಾಟವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.

ಕನ್ನಡ ಚಿತ್ರದಲ್ಲಿ ಸನ್ನಿ ಕೈಬಿಡುವಂತೆ ಆಗ್ರಹ

ಕನ್ನಡ ಚಿತ್ರದಲ್ಲಿ ಸನ್ನಿ ಕೈಬಿಡುವಂತೆ ಆಗ್ರಹ

ಸನ್ನಿ ಲಿಯೋನ್ ಅಭಿನಯದ ವೀರಮಹಾದೇವಿ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಸನ್ನಿ ಲಿಯೋನ್ ನಟನೆ ಕೈ ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ಯುವ ವೇದಿಕೆ ಕಾರ್ಯಕರ್ತರು ಚಿತ್ರ ಪೋಸ್ಟರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

2017ರಲ್ಲೂ ಸನ್ನಿ ಭೇಟಿ ನಿಗದಿಯಾಗಿತ್ತು

2017ರಲ್ಲೂ ಸನ್ನಿ ಭೇಟಿ ನಿಗದಿಯಾಗಿತ್ತು

2017ರ ಡಿಸೆಂಬರ್ 31ರಂದು ರಾತ್ರಿ ಸನ್ನಿ ಲಿಯೋನ್ ನೃತ್ಯ ಕಾರ್ಯಕ್ರಮ ನಿಗದಿಯಾಗಿತ್ತು ಆದರೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ತೀವ್ರ ವಿರೋಧಿಸಿದ ಕಾರಣ ಭೇಟಿಯನ್ನು ರದ್ದುಗೊಳಿಸಲಾಗಿತ್ತು.

English summary
Members of Karnataka Rakshana Vedike, a Karnataka-based Hindu organisation, on Monday morning burnt posters of Sunny Leone’s upcoming movie 'Veeramadevi' to protest the actor’s presence in the film.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X