Get Updates
Get notified of breaking news, exclusive insights, and must-see stories!

Bengaluru Karaga : ದರ್ಗಾ ಪ್ರವೇಶ ಗೊಂದಲ ಇಲ್ಲ; ಹಿಂದು-ಮುಸ್ಲಿಮ್ ಭಾವೈಕ್ಯ ಸಂಕೇತವಾದ ಕರಗ

ಬೆಂಗಳೂರು, ಏಪ್ರಿಲ್ 8: ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಕಳೆದ ಎರಡು ವರ್ಷಗಳ ಕಾಲ ಸರಳವಾಗಿ ನಡೆದಿದ್ದ ಬೆಂಗಳೂರು ಕರಗ, ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಏಪ್ರಿಲ್ 8ರ ಶುಕ್ರವಾರದಿಂದ ಏಪ್ರಿಲ್‌ 18ರ ಸೋಮವಾರದ ತನಕ ಕರಗ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ನಿಗದಿಯಾಗಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಹಿಜಾಬ್, ಹಲಾಲ್, ಅಜಾನ್ ವಿವಾದದಿಂದಾಗಿ ಅನೇಕ ಜಾತ್ರೆ, ಉತ್ಸವಗಳಲ್ಲಿನ ಭಾವೈಕ್ಯ ಸಂಬಂಧಕ್ಕೆ ಧಕ್ಕೆ ಉಂಟಾಗುವ ಆತಂಕ ಮೂಡಿತ್ತು. ಆದರೆ, ಅನೇಕ ಕಡೆಗಳಲ್ಲಿ ಈ ಹಿಂದಿನ ರೂಢಿಯಂತೆ ಹಿಂದು-ಮುಸ್ಲಿಮರು ಹಳೆ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ.

Recommended Video

      ಕರಗ ಉತ್ಸವದ ಮೂರ್ತಿ ದರ್ಗಾ ಒಳಗೆ ಹೋಗೋದು ಬೇಡ | Oneindia Kannada

      ಉದ್ಯಾನನಗರಿ, ಕಲ್ಯಾಣ ನಗರಿ, ಅಂದದೂರು ಎನಿಸಿಕೊಂಡಿರುವ ಬೆಂಗಳೂರಿನ ವಿಶಿಷ್ಟ ಉತ್ಸವ ಕರಗಕ್ಕೆ ತನ್ನದೇ ಆದ ಐತಿಹ್ಯ ಹೊಂದಿದ್ದು, ಕೋಮು ದ್ವೇಷಕ್ಕೆ ವಿರುದ್ಧವಾಗಿ ಭಾವೈಕ್ಯ ಭಾವನೆ ಎತ್ತಿ ಹಿಡಿಯುವಲ್ಲಿ ಹಲವು ವರ್ಷಗಳಿಂದ ಯಶಸ್ವಿಯಾಗಿದೆ.

      ಗೊಂದಲ ನಿವಾರಣೆ:
      ''ಕರಗ ಮಹೋತ್ಸವವು ಶುಭಕೃತು ನಾಮ ಸಂವತ್ಸರದ ಚೈತ್ರ ಶುದ್ಧ ಸಪ್ತಮಿ ಶುಕ್ರವಾರ ಏ.8 ರಿಂದ ಅರಂಭವಾಗಲಿದ್ದು, ಏ.16ರಂದು ಪ್ರತಿವರ್ಷದಂತೆ ಈ ವರ್ಷವು ಕರಗ ಮೆರವಣಿಗೆ ತವಕ್ಕಲ್ ಮಸ್ತಾನ್ ದರ್ಗಾವನ್ನು ಪ್ರವೇಶಿಸಲಿದೆ. ಈ ಸಾಲಿನ ಕರಗವನ್ನು ಪೂಜಾರಿ ಎ. ಜ್ಞಾನೇಂದ್ರ ಅವರು ಹೊರಲಿದ್ದಾರೆ,'' ಎಂದು ಬೆಂಗಳೂರು ಕರಗ ಉತ್ಸವದ ಸಮಿತಿ ತಿಳಿಸಿದೆ.

      Karaga to kicks off from the Dharmarayaswamy temple visit to visit Hazrat Tawakkal Mastan Dargah

      ''ಪ್ರತಿ ವರ್ಷದಂತೆ ಈ ವರ್ಷವೂ ಕರಗ ಉತ್ಸವ ಮುಸ್ಲಿಮರ ಸಹಭಾಗಿತ್ವದೊಂದಿಗೆ ನಡೆಯಲಿದೆ. ಎ.16ರಂದು ನಡೆಯಲಿರುವ ಬೆಂಗಳೂರಿನ ಕರಗದಂದು ಕರಗವು ಮಸ್ತಾನ್ ಸಾಬ್ ದರ್ಗಾ ಪ್ರವೇಶಿಸಿ, ದರ್ಗಾವನ್ನು ಒಂದು ಸುತ್ತು ಹಾಕಿ, ನಂತರ ವಾಪಸಾಗಲಿದೆ. ಪ್ರತಿ ವರ್ಷದಂತೆ ದರ್ಗಾದಿಂದ ಬಂದು ಕರಗ ಹೊರುವವರನ್ನು ಆಹ್ವಾನಿಸಲಾಗುತ್ತದೆ. ಹಾಗಾಗಿ ಕರಗ ಉತ್ಸವಕ್ಕೆ ಈ ವರ್ಷವೂ ಮುಸ್ಲಿಂ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ದರ್ಗಾ ಪ್ರವೇಶಕ್ಕೆ ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ,'' ಎಂದು ಬೆಂಗಳೂರು ಕರಗ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ತಿಳಿಸಿದ್ದಾರೆ.

      ಏಪ್ರಿಲ್16ರಂದು ಕರಗ ಉತ್ಸವದಂದು ಧರ್ಮರಾಯ ದೇಗುಲ ಪ್ರದಕ್ಷಿಣೆ ಹಾಕಲಿರುವ ತಾಯಿಯ ಕರಗ ಮೆರವಣಿಗೆ, ದೇಗುಲದ ರಸ್ತೆ ಮೂಲಕ ಕುಂಬಾರಪೇಟೆ ರಸ್ತೆ, ಆನಂತರ ರಾಜ ಮಾರ್ಕೆಟ್ ಸರ್ಕಲ್, ಅಲ್ಲಿಂದ ಸಿಟಿ ಮಾರ್ಕೆಟ್ ಸರ್ಕಲ್ ಕಡೆ ಮೆರವಣಿಗೆ ಸಾಗಲಿದೆ.

      Karaga to kicks off from the Dharmarayaswamy temple visit to visit Hazrat Tawakkal Mastan Dargah

      ಬಳಿಕ ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಲಿದ್ದು, ನಂತರ ಮರಳಿ ಸಿಟಿ ಮಾರ್ಕೆಟ್ ಸರ್ಕಲ್ ಮೂಲಕ ಪೊಲೀಸ್ ರೋಡ್ ಕಡೆಗೆ ಬಂದು, ಕಾಟನ್ ಪೇಟ್ ಪೊಲೀಸ್ ಸ್ಟೇಷನ್ ರಸ್ತೆಯಿಂದ ತವಕ್ಕಲ್ ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ತೆರಳಲಿದೆ.

      ಮಸ್ತಾನ್ ಸಾಬ್ ದರ್ಗಾದಲ್ಲಿ ಕರಗ ಹೊತ್ತವರು ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತಾರೆ. ಅಲ್ಲಿನ ಮುಜಾವರ್ ಹಾಗೂ ದರ್ಗಾ ಸಮಿತಿಯ ಗೌರವ ವಂದನೆ ಸ್ವೀಕರಿಸಿ, ಬಳೇಪೇಟೆ ಸರ್ಕಲ್‍ಗೆ ಆಗಮಿಸಿ, ಅಣ್ಣಮ್ಮ ದೇವಿಯ ದೇವಸ್ಥಾನದತ್ತ ಸಾಗಿ, ಕಬ್ಬನ್ ಪೇಟೆ ಮುಖ್ಯ ರಸ್ತೆಯ ಮೂಲಕ ಪುನಃ ಶ್ರೀ ಧರ್ಮರಾಯಸ್ವಾಮಿ ದೇಗುಲವನ್ನು ಕರಗ ಪ್ರವೇಶ ಮಾಡಲಿದೆ.

      'ಬೆಂಗಳೂರು ಕರಗ ಬಹುಪ್ರಸಿದ್ಧ. ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ 'ಕರಗ' ಉತ್ಸವಗಳು ನಡೆಯುತ್ತವೆ. ಅನೇಕಲ್, ಹೊಸಕೋಟೆ, ಮಾಲೂರು, ಚಿಕ್ಕಬಳ್ಳಾಪುರ, ಕೈವಾರ, ವೇಮಗಲ್, ನರಸಾಪುರ-ಹೀಗೆ ಹಳ್ಳಿ ಪಟ್ಟಣಗಳಲ್ಲಿ 'ಕರಗ' ಹಬ್ಬ ಪ್ರತಿ ವರ್ಷದ ರೂಢಿ. ಸಾಮರಸ್ಯದ ಹಬ್ಬವೆಂದೇ ಹೆಸರಾದ ಕರಗ 'ಶಕ್ತ್ಯತ್ಸವ'ವೂ ಹೌದು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+