'ಅಪಾರ ಕೀರ್ತಿ ಗಳಿಸಿ ಮೆರೆದ' ನಟ ಸುದರ್ಶನ್ ವಿಧಿವಶ
Recommended Video

ಅಪಾರ ಕೀರ್ತಿ ಗಳಿಸಿ ಮೆರೆದ' ನಟ ಸುದರ್ಶನ್ ವಿಧಿವಶ | Oneindia Kannada
ಬೆಂಗಳೂರು, ಸೆಪ್ಟೆಂಬರ್ 8: ಕನ್ನಡ ಚಿತ್ರರಂಗದ ಹಿರಿಯ ನಟ ಸುದರ್ಶನ್ (78) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಶುಕ್ರವಾರ ಬೆಂಗಳೂರಿನ ತಿಲಕ್ ನಗರದ ಸಾಗರ್ ಆಸ್ಪತ್ರೆಯಲ್ಲಿ ವಿಧಿವಶರಾದರು.
ಎರಡು ದಿನಗಳ ಹಿಂದಷ್ಟೇ ಅವರು ತಮ್ಮ ಮನೆಯ ಶೌಚಾಲಯದಲ್ಲಿ ಕಾಲು ಜಾರಿಬಿದ್ದು ಕಾಲಿನ ಮೂಳೆ ಮುರಿದುಕೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರಾದ ದಿವಂಗತ ಆರ್. ನಾಗೇಂದ್ರ ರಾಯರ ದ್ವಿತೀಯ ಪುತ್ರರಾದ ಇವರು, ಹಿರಿಯ ಹಾಗೂ ಜನಪ್ರಿಯ ಚಿತ್ರ ಸಾಹಿತಿ ದಿವಂಗತ ಆರ್.ಎನ್. ಜಯಗೋಪಾಲ್ ಅವರ ಸಹೋದರರೂ ಹೌದು.
ಕನ್ನಡ ಮಾತ್ರವಲ್ಲ, ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲೂ ಅವರು ನಟಿಸಿದ್ದರು. ಕನ್ನಡದಲ್ಲಿ ಅವರು ನಾಯಕನಟರಾಗಿ ನಟಿಸಿದ್ದ ವಿಜಯ ನಗರದ ವೀರಪುತ್ರ ಚಿತ್ರದ 'ಅಪಾರ ಕೀರ್ತಿ ಮೆರೆಸಿ ಮೆರೆದ ಭವ್ಯ ನಾಡಿದು...' ಹಾಡು ಇಂದಿಗೂ ಜನಪ್ರಿಯ ಗೀತೆಯಾಗಿದೆ.











Click it and Unblock the Notifications