ಕನ್ನಡ... ಕನ್ನಡ ಅಂತ ಬೊಗಳಿದರೆ ನಿಮ್ಮ ಬೆಂಗಳೂರು ಸಮಸ್ಯೆ ಮಾಯ ಎಂದ ನಾರ್ಥಿ! ವೈರಲ್ ಪೋಸ್ಟ್
ಬೆಂಗಳೂರಿನ ಬಗ್ಗೆ ಪರಭಾಷಿಕರು ಹಾಗೂ ಕೆಲವು ನಾರ್ಥಿಗಳು ಬಾಯಿಗೆ ಬಂದಂತೆ ಮಾತನಾಡುವುದು ಹೊಸದಲ್ಲ. ಆದರೆ ಬೆಂಗಳೂರಿಗರು ತಮ್ಮ ಸಮಸ್ಯೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುವಾಗಲೂ ಕೆಲವು ನಾರ್ಥಿಗಳು ಮೂಗು ತೂರಿಸುತ್ತಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಬೆಂಗಳೂರಿನ ಬಗ್ಗೆ ಬೆಂಗಳೂರಿಗರು ಹಾಗೂ ಕನ್ನಡಿಗರು ಚರ್ಚೆ ಮಾಡುವಾಗ ನಾರ್ಥಿಯೊಬ್ಬಳು... ಕನ್ನಡ... ಕನ್ನಡ ಅಂತ ಬೊಗಳಿ ನಿಮ್ಮ ಸಮಸ್ಯೆ ಪರಿಹಾರವಾಗುತ್ತೆ ಅಂತ ಹೇಳಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ವಿಪರೀತವಾಗುತ್ತಿದೆ. ಈ ವಿಷಯವನ್ನು ಬೆಂಗಳೂರಿಗರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುವಾಗ ನಾರ್ಥಿ ಯುವತಿಯೊಬ್ಬರು, ಕನ್ನಡ... ಕನ್ನಡ ಎಂದು ಬೊಗಳುತ್ತಿರಿ ನಿಮ್ಮ ಸಮಸ್ಯೆಗಳು ಪರಿಹಾರವಾಗಲಿದೆ ಎಂದು ರಿಯಾಕ್ಟ್ ಮಾಡಿದ್ದಾಳೆ.

ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಗೂ ಕನ್ನಡ ಭಾಷೆಗೂ ಏನು ಸಂಬಂಧ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದು, ಆ ಯುವತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಮರನಾಥ್ ಶಿವಶಂಕರ್ ಅವರು, ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಚರ್ಚೆ ಮಾಡಿದ್ದರು. ಬೆಂಗಳೂರಿನ ಹಾಳಾದ ಮೂಲಸೌಕರ್ಯವನ್ನು ಸರಿಪಡಿಸಲು ಕೇವಲ ಆಮೂಲಾಗ್ರ ಬದಲಾವಣೆ ಮಾತ್ರ ಸಾಧ್ಯ. ನನ್ನ ಅಭಿಪ್ರಾಯ ಎಂದಿದ್ದರು. ಇದಕ್ಕೆ ರಾಗಿಣಿ ಎನ್ನುವ ಯುವತಿ "ಕನ್ನಡ.. ಕನ್ನಡ ಅಂತ ಬೊಗಳುತ್ತಲೇ ಇರಿ, ನಿಮ್ಮ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ 🐷" ಎಂದು ಪೋಸ್ಟ್ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆ ಅಮರನಾಥ್ ಶಿವಶಂಕರ್ ಅವರು, ಕನ್ನಡದಲ್ಲಿ ಮಾತನಾಡುವುದರಿಂದ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ಹೆಚ್ಚಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಕನ್ನಡ ಭಾಷೆಯನ್ನು 60 ಮಿಲಿಯನ್ ಮಾತನಾಡುತ್ತಾರೆ. ಆ ಭಾಷೆಯನ್ನು ಮಾತನಾಡದವರಿಂದ ಭಾಷೆಗೆ ಸಿಗುವ ಗೌರವ ಇಷ್ಟೇ ಆಗಿದ್ದರೆ, ನಮ್ಮ ಪಯಣ ಯಾವ ಹಾದಿಯಲ್ಲಿದೆ ಎನ್ನುವುದು ನಮಗೆ ತಿಳಿದಿದೆ ಎಂದಿದ್ದಾರೆ.
ಮತ್ತೇ ಈ ಟ್ವೀಟ್‌ಗೆ ರೀಟ್ವೀಟ್ ಮಾಡಿರುವ ಯುವತಿ, ಸುಮಾರು 305 ಮಿಲಿಯನ್ ಜನರು ಹಿಂದಿಯನ್ನು ಮಾತೃಭಾಷೆಯಾಗಿ ಮಾತನಾಡುತ್ತಾರೆ. ಅಲ್ಲದೇ 609 ಮಿಲಿಯನ್ ಜನರು ಹಿಂದಿಯನ್ನು ಚೆನ್ನಾಗಿ ಮಾತನಾಡುತ್ತಾರೆ ಸಹ. ಕನ್ನಡಿಗ ಭಾಷಾ ಭಯೋತ್ಪಾದಕರು ಭಾಷೆಯನ್ನು ಗೌರವಿಸುವ ಬಗ್ಗೆ ಮಾತನಾಡುವುದು ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಎಂದು ಘೋಷಿಸಿದಂತೆ. ಮತ್ತೊಂದು ವಿಚಾರ, ನಾನು ನೋಡುತ್ತೇನೆ ಕನ್ನಡಿಗರು ಸಮಸ್ಯೆಗಳಿಗಿಂತ ಹಿಂದಿಯ ಬಗ್ಗೆ ಹೆಚ್ಚು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ಯತೆಗಳು ಅಥವಾ ದ್ವೇಷವೇ ಎಂದು ಆಕೆ ಪ್ರಶ್ನೆ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications