ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಮಫಲಕದಲ್ಲಿ ಕನ್ನಡವೇ ಪ್ರಧಾನ, ಸುತ್ತೋಲೆ ಹಿಂದಕ್ಕೆ?

|
Google Oneindia Kannada News

Recommended Video

ಕನ್ನಡ ನಾಮಫಲಕಗಳು ಪ್ರಧಾನ ಎಂಬ ಸುತ್ತೋಲೆ ಹಿಂದಕ್ಕೆ | Oneindia Kannada

ಬೆಂಗಳೂರು, ಅಕ್ಟೋಬರ್ 9: ಬೆಂಗಳೂರಲ್ಲಿ ಎಲ್ಲಾ ಅಂಗಡಿಗಳು, ಮಾಲ್ ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಸಂಸ್ಥೆಗಳು ಅಳವಡಿಸುವ ನಾಮಫಲಕಗಳು ಪ್ರಧಾನವಾಗಿ ಕನ್ನಡ ಭಾಷೆಯಲ್ಲೇ ಇರಬೇಕು ಎನ್ನುವ ನಿಯಮದಿಂದ ಹಿಂದೆ ಅರಿಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಸುತ್ತೋಲೆಯನ್ನು ರದ್ದುಪಡಿಸುವಂತೆ ಕೋರಿ ಹಲವು ವಾಣಿಜ್ಯ ಸಂಸ್ಥೆಗಳು ಹೈಕೋರ್ಟ್ ಗೆ ತಕರಾರು ಅರ್ಜಿ ಅಲ್ಲಿಸಿದ್ದವು. ಅದಕ್ಕೆ ನ್ಯಾಯಾಲಯ ನಾಮಫಲಕಗಳು ಕನ್ನಡದಲ್ಲಿರಬೇಕು ಎನ್ನುವ ನಿಯಮ ಯಾವ ಕಾಯ್ದೆಯಲ್ಲಿದೆ ಎಂದು ಪ್ರಶ್ನಿಸಿತ್ತು.

ಕನ್ನಡ ನಾಮಫಲಕ ಕಾಯಿದೆಗಾಗಿ ಆನ್ ಲೈನ್ ನಲ್ಲಿ ಅರ್ಜಿ, ಸಹಿ ಹಾಕಿ ಕನ್ನಡ ನಾಮಫಲಕ ಕಾಯಿದೆಗಾಗಿ ಆನ್ ಲೈನ್ ನಲ್ಲಿ ಅರ್ಜಿ, ಸಹಿ ಹಾಕಿ

ಯಾವ ಕಾನೂನಿನ ಆಧಾರದ ಮೇಲೆ ಇಂತಹ ಸುತ್ತೋಲೆಯನ್ನು ಹೊರಡಿಸಿದ್ದೀರಿ ವಿವರಣೆ ನೀಡುವಂತೆ ನಿರ್ದೇಶನ ನೀಡಿತ್ತು. ಭಾಷೆಯನ್ನು ಬೆಳೆಸಲು ವಾಣಿಜ್ಯ ಸಂಸ್ಥೆಗಳ ಮೇಲೆ ಒತ್ತಡ ಹೇರುವುದು ಹಾಗೂ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡುವುದು ಸರಿಯಾದ ವಿಧಾನ ಅಲ್ಲ ಎಂದು ಟೀಕಿಸಿತ್ತು.

ಜು. 27ರಂದು ನಾಮಫಲಕದಲ್ಲಿ ಕನ್ನಡ ಕಡ್ಡಾಯ ಸುತ್ತೋಲೆ ಹೊರಡಿಸಿತ್ತು

ಜು. 27ರಂದು ನಾಮಫಲಕದಲ್ಲಿ ಕನ್ನಡ ಕಡ್ಡಾಯ ಸುತ್ತೋಲೆ ಹೊರಡಿಸಿತ್ತು

ಜುಲೈ 27ರಂದು ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸುವುದನ್ನು ಕಡ್ಡಾಯಗೊಳಿಸಿ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ಪಾಲಿಕೆ ಸಭೆಯಲ್ಲಿ ನಿರ್ಣಯ

ಪಾಲಿಕೆ ಸಭೆಯಲ್ಲಿ ನಿರ್ಣಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರು ಬಿಬಿಎಂಪಿಗೆ ನಾಮಫಲಕದಲ್ಲಿ ಕನ್ನಡ ಬಳಕೆ ಸಂಬಂಧಿಸಿದಂತೆ ಕೆಲವು ಸಲಹೆ ಸೂಚನೆ ನೀಡಿತ್ತು. ಅದರಂತೆ ಬಿಬಿಎಂಪಿಯ ಪಾಲಿಕೆ ಸಭೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಿ ಶೇ.40ರಷ್ಟು ಅನ್ಯ ಭಾಷೆ ಹಾಗೂ ಶೇ.60 ಕನ್ನಡ ಭಾಷೆಯನ್ನು ನಾಮಫಲಕದಲ್ಲಿ ಬಳಕೆ ಮಾಡಬೇಕು. ತಪ್ಪಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ನಾಮಫಲಕದಲ್ಲಿ ಕನ್ನಡ ಕಡ್ಡಾಯ ಯಾವ ಕಾಯ್ದೆಯೆಲ್ಲಿದೆ? ಹೈಕೋರ್ಟ್ನಾಮಫಲಕದಲ್ಲಿ ಕನ್ನಡ ಕಡ್ಡಾಯ ಯಾವ ಕಾಯ್ದೆಯೆಲ್ಲಿದೆ? ಹೈಕೋರ್ಟ್

ಬಿಬಿಎಂಪಿ ಅಡ್ಡಕತ್ತರಿಯಲ್ಲಿ

ಬಿಬಿಎಂಪಿ ಅಡ್ಡಕತ್ತರಿಯಲ್ಲಿ

ಪ್ರಧಾನವಾಗಿ ಕನ್ನಡ ಭಾಷೆ ಬಳಕೆ ಸುತ್ತೋಲೆಯನ್ನು ಯಾವ ಕಾನೂನಿನ ಅಡಿಯಲ್ಲಿ ಹೊರಡಿಸಲಾಗಿದೆ. ಸುತ್ತೋಲೆಗೆ ಕಾನೂನಿನ ಮಾನ್ಯತೆ ಇದೆಯಾ ಎಂದು ನ್ಯಾಯಪೀಠ ಬಿಬಿಎಂಪಿಗೆ ಪ್ರಶ್ನೆ ಮಾಡಿದೆ. ಆದರೆ ಸುತ್ತೋಲೆ ಕಾನೂನಿನ ಅಡಿಯಲ್ಲಿ ಇಲ್ಲ ಎನ್ನುವುದು ಮನದಟ್ಟಾಗಿದೆ. ಸುತ್ತೋಲೆ ವಾಪಸ್ ಪಡೆದರೆ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರ ವಿರೋಧ ಎದುರಿಸಬೇಕಾಗುತ್ತದೆ, ಇಲ್ಲವಾದರೆ, ನ್ಯಾಯಾಲಯದಲ್ಲಿ ಮುಜುಗರ ಅನುಭವಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದೆ.

ನಾಮಫಲಕದಲ್ಲಿ ಕನ್ನಡ ಪ್ರಧಾನವಾಗಿರದಿದ್ದರೆ ಪರವಾನಗಿ ರದ್ದು

ನಾಮಫಲಕದಲ್ಲಿ ಕನ್ನಡ ಪ್ರಧಾನವಾಗಿರದಿದ್ದರೆ ಪರವಾನಗಿ ರದ್ದು

ವಾಣಿಜ್ಯ ಸಂಸ್ಥೆಗಳು, ಅಂಗಡಿಗಳಲ್ಲಿ ಅಳವಡಿಸಲಾಗುವ ನಾಮಫಲಕಗಳಲ್ಲಿ ಪ್ರಧಾನವಾಗಿ ಕನ್ನಡ ಭಾಷೆ ಇರದಿದ್ದರೆ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿತ್ತು. ಹೀಗಾಗಿಯೇ ಅನೇಕ ಸಂಸ್ಥೆಗಳು ಹೈಕೋರ್ಟ್ ಮೊರೆ ಹೋಗಿದ್ದವು.

ಗ್ರಂಥಾಲಯ ಇಲಾಖೆಗೆ ಕಟ್ಟಬೇಕಾದ 350 ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ ಗ್ರಂಥಾಲಯ ಇಲಾಖೆಗೆ ಕಟ್ಟಬೇಕಾದ 350 ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ

English summary
Business organisation approched the high court to quash kannada nameplate order of bbmp. So now bbmp thinking on to cance,l this order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X