'ಅಂದಿಗೂ ಇಂದಿಗೂ ಎಂದೆಂದಿಗೂ ಬಿಟ್ಟುಕೊಡುವುದಿಲ್ಲ': ದರ್ಶನ್ ಪರ ನಿಂತ ಖ್ಯಾತ ನಿರೂಪಕಿ
ಬೆಂಗಳೂರು, ಜೂನ್ 26: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಸದ್ಯ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಪರ ಚಿತ್ರರಂಗ ಹಾಗೂ ವಿವಿಧ ರಂಗದ ಸೆಲೆಬ್ರೆಟಿಗಳು ಮಾತನಾಡುತ್ತಿದ್ದಾರೆ.
ಇದೀಗ ಕನ್ನಡದ ಖ್ಯಾತ ನಿರೂಪಕಿ ಹೇಮಾಲತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡರು ಮೃತ ರೇಣುಕಾಸ್ವಾಮಿಯನ್ನು ಹೀರೋ ಮಾಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.

ಸಾವಿರ ಜನ ಸಾವಿರ ಮಾತನಾಡಲಿ ಒಮ್ಮೆ ಬೆಳೆದ ಸ್ನೇಹಕ್ಕೆ ಕಡಲಿನಸ್ಟಿರುವ ಪ್ರೀತಿಗೆ ನಾವೆಲ್ಲರೂ ಋಣಿಗಳೇ. ಸ್ನೇಹಾವೆಂಬ ಸಂಕೋಲೆಯಲಿ ಒಮ್ಮೆ ಸಿಕ್ಕಿಕೊಂಡರೆ ಕೊಂಡಿ ಕಳಚುವುದಿಲ್ಲ. ಅಂದಿಗೂ ಇಂದಿಗೂ ಎಂದೆಂದಿಗೂ ಮರೆಯುವುದಿಲ್ಲ, ಬಿಡುವುದಿಲ್ಲ, ಬಿಟ್ಟುಕೊಡುವುದಿಲ್ಲ.
ಈ ಘಟನೆಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ, ಕಾನೂನಿನ ಮುಖಾಂತರ ಅಂತ್ಯವನ್ನಾಡಿ ಎಲ್ಲಾ ಕಳಂಕವನ್ನು ತೊಳೆದುಕೊಂಡು ಹೊರಗೆ ಬನ್ನಿ. ನಿಮ್ಮ ಮೇಲಿರುವ ಪ್ರೀತಿ ಗೌರವ ಎಂದಿಗೂ ಕಮ್ಮಿ ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕೊಲೆಯಾಗಿರುವ ರೇಣುಕಾಸ್ವಾಮಿಯನ್ನು ಹೀರೋ ಎನ್ನುವಂತೆ ಬಿಂಬಿಸಬೇಡಿ ಎಂದು ನಿರೂಪಕಿ ಹೇಮಾಲತಾ ಮನವಿ ಮಾಡಿದ್ದಾರೆ.

ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ- ಇಶಾನಿ
ಇನ್ನು ಈ ಹಿಂದೆ ಬಿಗ್‌ಬಾಸ್ ಸ್ಪರ್ಧಿ ಇಶಾನಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು, ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಇಶಾನಿ, ನಿಜಕ್ಕೂ ಇದು ಅಘಾತಕಾರಿ ಸುದ್ದಿ. ಒಬ್ಬ ಅಣ್ಣನ ರೂಪದಲ್ಲಿ ನಾನು ಕಂಡ ದರ್ಶನ್ ಸರ್ ನಿಜಕ್ಕೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿದಾಗ ನಂಬಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತನ್ನನ್ನು ನಂಬಿದ ಒಂದು ಹೆಣ್ಣು ಜೀವದ ಶ್ರೇಯೋಭಿಲಾಷಿಯಾಗಿ ಅವರು ಮಾಡಿದ ಕೆಲಸ ಸೂಕ್ತವೇ ಎಂದು ಅನಿಸಿದರೂ ಸಹ, ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ ನಮಗಾರಿಗೂ ಸಹ ಅಧಿಕಾರವಿಲ್ಲ. ದರ್ಶನ್ ಸರ್ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ, ಆದರೆ ಅದುವರೆಗೂ ಇಲ್ಲ ಸಲ್ಲದ ಸುದ್ದಿಗಳನ್ನು ಹರಡಿ ಅವರ ತೇಜೋವಧೆ ಮಾಡುವುದು ಸರಿಯಲ್ಲ. ಕಾಲಾಯ ತಸ್ಮೈ ನಮಃ ಎಂದು ಇಶಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications