ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್-19 ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದ ಕನ್ನಡ ನಟ ಪುನೀತ್ ರಾಜ್‌ಕುಮಾರ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 29: ಸ್ಯಾಂಡಲ್‌ವುಡ್ ನಟ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣಕ್ಕೆ ಇಡೀ ಕರುನಾಡೇ ಕಂಬನಿ ಮಿಡಿದಿದೆ. ಶುಕ್ರವಾರದಂದು (ಅಕ್ಟೋಬರ್ 29) 46ನೇ ವಯಸ್ಸಿನಲ್ಲಿ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತಿಮ ದರ್ಶನಕ್ಕೆ ಇಡೀ ಚಿತ್ರರಂಗವೇ ಆಗಮಿಸಿದೆ. ಚಂದನವನದ ದೊಡ್ಮನೆಯಲ್ಲಿ ಹುಟ್ಟಿದ ಪುನೀತ್ ತಂದೆಯಂತೇ ದಾನಶೂರ ಕರ್ಣ, ಜನ ಸಾಮಾನ್ಯರಿಗೆ ಮಾಡಿದ ಸೇವೆ ಅಪಾರವಾದದ್ದು. ಅವರಿಗಿರುವ ಉದಾರವಾದ ಮನಸ್ಸು ನೆನೆಯುವಂತಹ ಸಂದರ್ಭವಿದು. ಅವರು ವಿಶಾಲವಾದ ಹೃದಯ ಹೊಂದಿರುವ ವ್ಯಕ್ತಿ ಅನ್ನೋದಕ್ಕೆ ಇಂದು ಅವರನ್ನು ನೋಡಲು ಸೇರಿದ ಜನ ಸಾಗರವೇ ಸಾಕ್ಷಿ. ಅಂದ ಹಾಗೆ ಪುನೀತ್ ತಾವು ಮಾಡುವ ಜನ ಸೇವೆಯ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಎಡಗೈಯಿಂದ ಕೊಟ್ಟದ್ದನ್ನು ಬಲಗೈಗೂ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದ ವ್ಯಕ್ತಿ. 2020 ಮತ್ತು 2021ರ ಉದ್ದಕ್ಕೂ ಕೋವಿಡ್ -19 ವಿರುದ್ಧದ ರಾಷ್ಟ್ರದ ಹೋರಾಟಕ್ಕೆ ಜಾಗೃತಿ ಮತ್ತು ಹಣವನ್ನು ದೇಣಿಗೆ ನೀಡುವ ಮೂಲಕ ಕೊಡುಗೆ ನೀಡಿದ್ದಾರೆ.

Recommended Video

ಹಬ್ಬಕ್ಕೆ ದೀಪ ಹಚ್ಚುವ ಮುನ್ನವೇ ಆರಿದ ದೊಡ್ಮನೆಯ ದೀಪ | Oneindia Kannada

ಲೋಕೋಪಕಾರಿ, ಗಾಯಕ, ಖಾಸಗಿ ವಾಹಿನಿಯ ರಿಯಾಲಿಟಿ ಶೋ ನಿರೂಪಕ ಮತ್ತು ನಿರ್ಮಾಪಕರೂ ಆಗಿದ್ದ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಸಾಂಕ್ರಾಮಿಕ ರೋಗದ ಬಗ್ಗೆ ಸಂದೇಶಗಳನ್ನು ಕಳುಹಿಸಲು ಮತ್ತು ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಅವರ ಅಭಿಮಾನಿಗಳಿಗೆ ಸಲಹೆ ನೀಡಲು ತಮ್ಮ ಸ್ಟಾರ್ ಸ್ಥಾನಮಾನವನ್ನು ಬಳಸಿಕೊಂಡರು. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ಸಹಾಯ ಮಾಡಲು ಅವರು ಕಳೆದ ವರ್ಷ ಕರ್ನಾಟಕ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಕೋವಿಡ್-19 ವಿರುದ್ಧದ ಹೋರಾಟಕ್ಕೆ ಅವರ ಎಲ್ಲಾ ಕೊಡುಗೆಗಳ ನೋಟ ಇಲ್ಲಿದೆ.

ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ಸಹಾಯ ಮಾಡಲು ಪುನೀತ್ ರಾಜ್‌ಕುಮಾರ್ ಕಳೆದ ವರ್ಷ ಕರ್ನಾಟಕ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಮೂಲಕ ಜನಸಾಮಾನ್ಯರ ನೆರವಿಗೆ ಕೈಜೋಡಿಸಿದ್ದರು. ಕೊರೊನಾ ಸಂಕಷ್ಟ ಕಾಲದಲ್ಲಿ ಸಜಸಾಮನ್ಯರಿಗೆ ನೆರವಿಗೆ ನಿಂತಿದ್ದರು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ಅವರು ಕಾನ್ಕ್ಲೇವ್‌ನಲ್ಲಿ ಹೇಳಿದ್ದಾರೆ. "ನಾವು ಜನರಿಗೆ ಆಹಾರವನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ಪಡಿತರವನ್ನು ನೀಡುತ್ತೇವೆ. ಅವರು ಸುರಕ್ಷತೆಯಿಂದ ಮುಂದೆ ಕೆಲಸಕ್ಕೆ ಮರಳಬೇಕು. ಏಕೆಂದರೆ ಅವರು ಅವರ ಜೀವನವನ್ನು ಉಳಿಸಿಕೊಳ್ಳಬೇಕು. ಆದ್ದರಿಂದ ಶೀಘ್ರದಲ್ಲೇ ಎಲ್ಲವೂ ಸಹಜ ಸ್ಥಿತಿಗೆ ಮರಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಜನರು, ವಿಶೇಷವಾಗಿ ಪೊಲೀಸರು, ವೈದ್ಯರು, ನರ್ಸ್‌ಗಳು ನಮಗಾಗಿ ಹೋರಾಡುತ್ತಿದ್ದಾರೆ. ನಾವೆಲ್ಲರೂ ಮನೆಯಲ್ಲೇ ಇರಿ ಮತ್ತು ಸುರಕ್ಷಿತವಾಗಿರಬೇಕು" ಎಂದಿದ್ದರು.

Kannada Actor Puneeth Rajkumars contributions to fight against Covid-19

ಜಾಗೃತಿ ಮೂಡಿಸಿದ ಅಪ್ಪು

ಬೆಂಗಳೂರು ನಗರ ಪೊಲೀಸರ ಸಹಯೋಗದಲ್ಲಿ, ಪುನೀತ್ ರಾಜ್‌ಕುಮಾರ್ ಅವರು 2021 ರಲ್ಲಿ ಕೋವಿಡ್ -19 ರ ಎರಡನೇ ಅಲೆಯಲ್ಲಿ ಪ್ರಮುಖ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದರು. ಈ ವಿಡಿಯೋದಲ್ಲಿ ಅವರು "ಸೂಕ್ತ ನಡವಳಿಕೆಯನ್ನು ಅನುಸರಿಸಿ, ಭಯಪಡಬೇಡಿ ಮತ್ತು ಆತ್ಮವಿಶ್ವಾಸದಿಂದಿರಿ" ಎಂದು ಹೇಳಿದರು. ಇದಕ್ಕೆ ನಾವು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ, ಅದಕ್ಕಾಗಿ ನಾವೆಲ್ಲರೂ ಮೊದಲು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು. ಜೊತೆಗೆ ಪುನೀತ್ ರಾಜ್‌ಕುಮಾರ್ ತಮ್ಮ ಅಭಿಮಾನಿಗಳಿಗೆ ಮುಖವಾಡಗಳನ್ನು ಧರಿಸುವಂತೆ ಸಲಹೆ ನೀಡಿದ್ದರು.

ಕನ್ನಡ ಚಲನಚಿತ್ರೋದ್ಯಮಕ್ಕೆ ಬೆಂಬಲ

2020 ರಲ್ಲಿ ಇಂಡಿಯಾ ಟುಡೆ ಇ-ಕಾನ್‌ಕ್ಲೇವ್ ಕೊರೋನಾ ಸರಣಿಯಲ್ಲಿ ಮಾತನಾಡಿದ ಪುನೀತ್ ರಾಜ್‌ಕುಮಾರ್, ಸಾಂಕ್ರಾಮಿಕ ರೋಗದಿಂದ ಉದ್ಯೋಗ ನಷ್ಟ ಅನುಭವಿಸುತ್ತಿರುವವರ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳಲು ಕನ್ನಡ ಚಿತ್ರರಂಗವು ಒಗ್ಗೂಡಿದೆ ಎಂದು ಹೇಳಿದರು.

"ನಮ್ಮದು ದೊಡ್ಡ ಉದ್ಯಮ ಮತ್ತು ನಾವು ವರ್ಷಕ್ಕೆ ಸುಮಾರು 140 ಯೋಜನೆಗಳನ್ನು ಮಾಡುತ್ತೇವೆ. ಸಾಕಷ್ಟು ಯೋಜನೆಗಳು ನಡೆಯುತ್ತಿವೆ. ಕೆಲವರು ದಿನಗೂಲಿಯನ್ನು ಅವಲಂಬಿಸಿದ್ದಾರೆ ಮತ್ತು ವಿವಿಧ ಹಂತಗಳಲ್ಲಿ ವಿವಿಧ ಸಂಘಗಳಿವೆ. ಅವರಲ್ಲಿ ಬಹಳಷ್ಟು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಈ ಸಮಯದಲ್ಲಿ ನಾವು ಒಂದೇ ಉದ್ಯಮದವರಾಗಿ ಜನರಿಗೆ ಸಹಾಯ ಮಾಡಲು ಒಟ್ಟಿಗೆ ಸೇರಿದ್ದೇವೆ. ನಾವು ಅವರ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಎಲ್ಲವನ್ನೂ ಟ್ರ್ಯಾಕ್ ಮಾಡಲು ಕೆಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ಇದೀಗ ನಾವು ಅದನ್ನು ಅರ್ಥಮಾಡಿಕೊಂಡಿದ್ದೇವೆ. ನೀವು ಮನೆಯಲ್ಲಿಯೇ ಇರಬೇಕು ಮತ್ತು ಉಳಿದದ್ದನ್ನು ನಂತರ ನೋಡಿಕೊಳ್ಳಬೇಕು" ಎಂದು ಜಾಗೃತಿ ಮೂಡಿಸಿದ್ದರು ಪುನೀತ್. ತಮ್ಮ ಸ್ವಂತ ಜೀವನದ ಮೇಲೆ ಲಾಕ್‌ಡೌನ್‌ನ ಪ್ರಭಾವದ ಕುರಿತು ಮಾತನಾಡಿದ್ದ ಅವರು, "ನಮಗೆ ಮನೆಯಿಂದ ಕೆಲಸ ಎಂದು ಏನೂ ಇಲ್ಲ. ನಾವೆಲ್ಲರೂ ಜಾಗರೂಕರಾಗಿರಬೇಕು ಮತ್ತು ನಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು. ಇದು ಕಷ್ಟಕರವಾಗಿದೆ" ಎಂದು ಅವರು ಹೇಳಿದ್ದರು. ಒಟ್ಟಿನಲ್ಲಿ ಪುನೀತ್ ರಾಜ್‌ಕುಮಾರ್ ಇಂದು ಕನ್ನಡಿಗರನ್ನು ಅಗಲಿರಬಹುದು. ಆದರೆ ಅವರು ಕನ್ನಡ ಚಿತ್ರರಂಗಕ್ಕೆ ಮಾಡಿದ ಸೇವೆ, ಜನ ಸಾಮಾನ್ಯರಿಗೆ ಮಾಡಿದ ಕೊಡುಗೆಗಳು ಮಾತ್ರ ಎಂದಿಗೂ ಸಾವಿಲ್ಲ.

English summary
Complete story of Power Star Puneeth Rajkumar's contributions to fight against Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X