ಕನ್ನಡ ಕಿರುತೆರೆ ನಟಿಯ ಮೇಲೆ ಅತ್ಯಾಚಾರ; ನಟ ಮನು ವಿರುದ್ಧ ಎಫ್ಐಆರ್
ಬೆಂಗಳೂರು, ಮೇ 22: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಖ್ಯಾತಿ ಪಡೆದ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಕಾಮಿಡಿ ಕಿಲಾಡಿಗಳು ಸೀಸನ್ 2ರ ವಿನ್ನರ್ ಕೂಡ ಆಗಿದ್ದರು ಮಡೆನೂರು ಮನು ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಿರುತೆರೆ ನಟಿಯೊಬ್ಬರು ಮಡೆನೂರು ಮನು ವಿರುದ್ಧ ಈ ರೀತಿಯ ಆರೋಪ ಮಾಡಿದ್ದು, ಸದ್ಯ ಈ ವಿಚಾರ ಸೆನ್ಸೇಷನ್ ಸೃಷ್ಟಿ ಮಾಡಿದೆ. ಮಡೆನೂರು ಮನು ಅವರಿಗೆ ಈಗ ಬಂಧನ ಭೀತಿ ಶುರವಾಗಿದ್ದು, ಅವರ ನಟನೆಯ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾ ರಿಲೀಸ್ ಸಂದರ್ಭದಲ್ಲಿಯೇ ಈ ರೀತಿ ಆಗಿರೋದು ತಂಡಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಇನ್ನೂ, ನಿರ್ದೇಶಕ ಯೋಗರಾಜ್ ಭಟ್ ಅವರ ಬ್ಯಾನರ್‌ನಲ್ಲಿ ಮೂಡಿಬಂದ ಸಿನಿಮಾದಲ್ಲಿ ನಟ ಮಡೆನೂರು ಮನು ನಟಿಸಿದ್ದಾರೆ.

ಇನ್ನೂ ಈ ಕುಲದಲ್ಲಿ ಕೀಳ್ಯಾವೋದು ಸಿನಿಮಾ ನಾಳೆ ರಿಲೀಸ್(ಮೇ 23) ಆಗಬೇಕಿದೆ. ಆದರೆ, ಇದರ ಮಧ್ಯೆ ನಟ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ನಟ ಮನುಗಾಗಿ ಹುಡಕಾಟ ಶುರು ಮಾಡಿದ್ದಾರೆ. ಆದರೆ, ಕಿರುತೆರೆ ನಟಿ ಮಡೆನೂರು ಮನು ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸಹ ಕಲಾವಿದೆ, ಸಂತ್ರಸ್ತೆ ದೂರಿನಲ್ಲಿ ಮಾಹಿತಿ ಅತ್ಯಾಚಾರದ ಕುರಿತು ಮಾಹಿತಿ ನೀಡಿದ್ದು, 2018ರಲ್ಲಿ ಮನು ಹಾಗೂ ಯುವತಿ ಮಧ್ಯೆ ಪರಿಚಯವಾಗಿದೆ. ಯುವತಿಗೆ ಬಾಡಿಗೆ ಮನೆ ಹುಡುಕೊಟ್ಟಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ಕಾಮಿಡಿ ಕಿಲಾಡಿ ಶೋನಲ್ಲಿ ಮನು ಹಾಗೂ ಸಂತ್ರಸ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾಗಿ ಹೇಳಿದ್ದಾರೆ. ಯುವತಿಯ ಜೊತೆಗೆ ಆಪ್ತನಾದಂತ ಕಿರುತೆರೆ ಕಲಾವಿದ ಮನು, ಮದುವೆಯಾಗಿ ಒಂದು ಮಗುವಿದ್ದರೂ ಕಾರ್ಯಕ್ರಮ ಒಂದಕ್ಕೆ ತೆರಳಿದ್ದಾಗ ಸಂತ್ರಸ್ತ ಯುವತಿಯ ಮೇಲೆ ಅತ್ಯಾಚಾರ ನಡೆಸಿರೋದಾಗಿ ಆರೋಪಿಸಿದ್ದಾರೆ.
ಇನ್ನೂ ನವೆಂಬರ್ 29, 2022ರಂದು ಶಿವಮೊಗ್ಗದ ಶಿಕಾರಿಪುರದಲ್ಲಿನ ಕಾರ್ಯಕ್ರಮಕ್ಕೆ ಮನು ಹಾಗೂ ಯುವತಿ ಒಟ್ಟಾಗಿ ತೆರಳಿದ್ದಾರೆ. ಆ ಕಾರ್ಯಕ್ರಮ ಮುಗಿಸಿ ಸಂಭಾವನೆ ನೀಡೋದಕ್ಕೆ ಸಂತ್ರಸ್ತೆಯನ್ನು ರೂಂಗೆ ಮನು ಕರೆಸಿಕೊಂಡಿದ್ದಾನೆ. ಅಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿರೋದಾಗಿ ಎಫ್ಐಆರ್ ನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ. ಇದಾದ ಬಳಿಕ ಗುಟ್ಟಾಗಿ ಯುವತಿಯನ್ನು ಕಿರುತೆರೆ ಕಲಾವಿದ ಮನು ಮದುವೆಯಾಗಿದ್ದಾನೆ. ಡಿಸೆಂಬರ್.3, 2022ರಂದು ಬಲವಂತವಾಗಿ ತಾಳಿ ಕಟ್ಟಿದ್ದರಂತೆ. ಆ ಬಳಿಕ ಯುವತಿಯ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ಸಂತ್ರಸ್ತ ಯುವತಿ ಎರಡು ಬಾರಿ ಪ್ರಗ್ನೆಂಟ್ ಆದಾಗಲೂ ಮನು ಗರ್ಭಪಾತ ಮಾತ್ರೆ ತಂದುಕೊಟ್ಟು ಅಬಾಷನ್ ಮಾಡಿಸಿದ್ದ ಎಂದು ದೂರಿನಲ್ಲಿ ಬಿಚ್ಚಿಟ್ಟಿದ್ದಾರೆ.












Click it and Unblock the Notifications