ಭಾನುವಾರ ಗೋಕುಲಂನಿಂದ ಸಂಗೀತ ಕಾರ್ಯಕ್ರಮ
ಬೆಂಗಳೂರು, ಜೂ.14 : ಗೋಕುಲಂ ಸಂಗೀತ ವಿದ್ಯಾಲಯ ಜೂನ್ 15ರ ಭಾನುವಾರ ಒಂದು ದಿನದ ಸಂಗೀತ ಹಬ್ಬ ಕಲಾರ್ಣವ 2014ಅನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಣವ ಮತ್ತು ಕಲಾವತಂಸ ಪ್ರಶಸ್ತಿಗಳನ್ನು ಸಾಧಕರಿಗೆ ನೀಡಿ ಗೌರವಿಸಲಾಗುತ್ತದೆ.
ವಿದ್ವಾಂಸ ಎಚ್.ಎಸ್.ವೇಣುಗೋಪಾಲ್ ಅವರ ನೇತೃತ್ವದ ಸಂಗೀತ ವಿದ್ಯಾಲಯವಾದ ಗೋಕುಲಂ 2007ರಿಂದ ಕಲಾರ್ಣವ ಎಂಬ ಒಂದು ದಿನ ಸಂಗೀತ ಕಾರ್ಯಕ್ರಮವನ್ನು ಜೂನ್ ತಿಂಗಳಿನಲ್ಲಿ ಆಯೋಜಿಸುತ್ತಾ ಬಂದಿದೆ. ಈ ಬಾರಿಯ ಸಂಗೀತ ಕಾರ್ಯಕ್ರಮ ಜೂ.15ರಂದು ನಡೆಯಲಿದೆ.

ಕಲಾರ್ಣವ 2014 ಜೂ.15ರ ಭಾನುವಾರ ಜಯನಗರ 8ನೇ ಬ್ಲಾಕ್ ನಲ್ಲಿರುವ ಜೆಎಸ್ಎಸ್ ಆಡಿಟೋರಿಯಂನಲ್ಲಿ ದಿನಪೂರ್ತಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಣವ ಮತ್ತು ಕಲಾವತಂಸ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತದೆ.
ಒಂದು ದಿನದ ಸಂಗೀತ ಕಾರ್ಯಕ್ರಮದಲ್ಲಿ ಗೋಕುಲಂ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕೊಳಲು ವಾದನ, ಲಯತರಂಗ, ಸುಶಿರ ಸಮ್ಮೇಳ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ದಿನ ಪೂರ್ತಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ವಿದ್ವಾನ್ ಆರ್ಯನ್ ವಿವೇಕ್, ರೋಹಿಣಿ ಪ್ರಭಾತ್, ರಾಧಿಕಾ ರಾಮಾನುಜಂ, ಜಯಚಂದ್ರ ರಾವ್, ಪ್ರವೀಣ್ ಡಿ.ರಾವ್, ಶತಾವಧಾನಿ ಗಣೇಶ್, ಎಚ್.ಎಸ್.ವೆಂಕಟೇಶ ಮೂರ್ತಿ, ಸುಪ್ರಿಯಾ ಆಚಾರ್ಯ, ಗುರುಮೂರ್ತಿ ವಿದ್ಯಾ, ನವೀನ್ ಕುಮಾರ್, ಮಂಜುನಾಥ್ ಎನ್.ಎಸ್. ಮುಂತಾದವರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : ಪ್ರಶಾಂತ್ - 9845824725.












Click it and Unblock the Notifications