ಪಕ್ಷದ ಕೆಲಸಕ್ಕೆ ಸರ್ಕಾರದ ಕಾರು ಬೇಡವೆಂದ ವೇಣುಗೋಪಾಲ್

'ನಾನು ಬಂದಿರುವುದು ಪಕ್ಷದ ಕೆಲಸಕ್ಕೆ, ಸರ್ಕಾರದ ಕೆಲಸಕ್ಕಲ್ಲ. ಪಕ್ಷದ ಕೆಲಸಕ್ಕಾಗಿ, ಸರ್ಕಾರದ ಕಾರನ್ನು ಬಳಸುವುದು ಸರಿಯಲ್ಲ' ಎಂದು ಕರ್ನಾಟಕ ಸರ್ಕಾರ ನೀಡಿದ್ದ ಐಷಾರಾಮಿ ಕಾರನ್ನು, ಕೆ.ಸಿ.ವೇಣುಗೋಪಾಲ್ ಹಿಂದಿರುಗಿಸಿದ್ದಾರೆ.

ಬೆಂಗಳೂರು, ಮೇ 24: ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (ಎಐಸಿಸಿ)ಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ, ಪಕ್ಷದ ಚಟುವಣೆಕೆಗೆ ಅಗತ್ಯವಿದೆಯೆಂದು ಕರ್ನಾಟಕ ಸರ್ಕಾರ ನೀಡಿದ್ದ ಐಷಾರಾಮಿ ಕಾರನ್ನು ಅವರು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.

ನಾನು ಬಂದಿರುವುದು ಪಕ್ಷದ ಕೆಲಸಕ್ಕೆ, ಸರ್ಕಾರದ ಕೆಲಸಕ್ಕಲ್ಲ. ಪಕ್ಷದ ಕೆಲಸಕ್ಕಾಗಿ, ಸರ್ಕಾರದ ಕಾರನ್ನು ಬಳಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.[ಕರ್ನಾಟಕ ಕಾಂಗ್ರೆಸಿನ ಹೊಸ ಉಸ್ತುವಾರಿ, ಇವರೇ ಕೆ.ಸಿ ವೇಣುಗೋಪಾಲ್!]

K C Venugopal returns car given by Karnataka government

2018ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿರುವ ವೇಣುಗೋಪಾಲ್, ಪ್ರಸ್ತುತ ಕಾಂಗ್ರೆಸ್ ಅಧಿಕಾರದಲ್ಲಿರುವ ಅತಿ ದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲೂ ಅಧಿಕಾರವನ್ನು ಉಳಿಸಿಕೊಳ್ಳುವ ಸವಾಲು ಕಾಂಗ್ರೆಸ್ಸಿಗಿದೆ. ಸದ್ಯಕ್ಕೆ ಕೇಂದ್ರ ಕಾಂಗ್ರೆಸ್ ನಾಯಕರಿಗೂ ಭರವಸೆ ಇರುವ ರಾಜ್ಯವೆಂದರೆ ಕರ್ನಾಟಕವೇ. ಆದ್ದರಿಂದ ಕೆ.ಸಿ.ವೇಣುಗೋಪಾಲ್ ರಂಥ ಸಮರ್ಥರಿಗೆ ಕರ್ನಾಟಕದ ಉಸ್ತುವಾರಿಯನ್ನು ಪಕ್ಷ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+