ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ರಿತುರಾಜ್ ಅವಸ್ಥಿ ನೇಮಕ

ಬೆಂಗಳೂರು, ಅಕ್ಟೋಬರ್ 9: ಕಾನೂನು ಮತ್ತು ನ್ಯಾಯಿಕ ಸಚಿವಾಲಯವು ಅಲಹಾಬಾದ್ ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ರಿತುರಾಜ್ ಅವಸ್ಥಿಯವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಶನಿವಾರ ಸೂಚನೆ ನೀಡಿದೆ.

ಭಾರತದ ಸಂವಿಧಾನದ ಪರಿಚ್ಛೇದ 217ರ ಷರತ್ತು (1) ಮೂಲಕ ನೀಡಲಾದ ಅಧಿಕಾರಗಳನ್ನು ಚಲಾಯಿಸುವಾಗ, ರಾಷ್ಟ್ರಪತಿಗಳು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ರಿತುರಾಜ್ ಅವಸ್ಥಿಯವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಕುರಿತು ಮಾಹಿತಿ
ನ್ಯಾಯಮೂರ್ತಿ ರಿತುರಾಜ್ ಅವಸ್ಥಿ 1986ರಲ್ಲಿ ಲಕ್ನೋ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಗಳಿಸಿದರು. ಫೆಬ್ರವರಿ 1, 1987ರಂದು ಅವರು ವಕೀಲಿ ವೃತ್ತಿಗೆ ಸೇರ್ಪಡೆಗೊಂಡರು. ನ್ಯಾಯಮೂರ್ತಿ ಅವಸ್ಥಿಯವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಬೆಂಚ್‌ನಲ್ಲಿ ನಾಗರಿಕ, ಸೇವೆ ಮತ್ತು ಶೈಕ್ಷಣಿಕ ವಿಷಯಗಳಲ್ಲಿ ಅಭ್ಯಾಸ ಮಾಡಿದ್ದಾರೆ.

Justice Ritu Raj Awasthi Is Appointed To New Chief Justice of Karnataka High Court

ರಿತುರಾಜ್ ಅವಸ್ಥಿ ಈ ಮೊದಲು ಲಕ್ನೋದಲ್ಲಿ ಸಹಾಯಕ ಭಾರತದ ಸಾಲಿಸಿಟರ್ ಜನರಲ್ ಆಗಿದ್ದರು. ಏಪ್ರಿಲ್ 13, 2009 ರಂದು ಅವರನ್ನು ಅಲಹಾಬಾದ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರ ಸ್ಥಾನಕ್ಕೆ ನೇಮಿಸಲಾಯಿತು. ಡಿಸೆಂಬರ್ 24, 2010ರಂದು ರಿತುರಾಜ್ ಅವಸ್ಥಿ ಖಾಯಂ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.

Recommended Video

      Dan Christian ಅವರ ಪತ್ನಿಗೆ ಹಿಂಸೆ ಕೊಡುತ್ತಿರುವ RCB ಅಭಿಮಾನಿಗಳು | Oneindia Kannada

      ರಿತುರಾಜ್ ಅವಸ್ಥಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರುವ ಮೊದಲು, ಲಕ್ನೋದ ಅಲಹಾಬಾದ್ ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+