ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ
ಬೆಂಗಳೂರು, ಅಕ್ಟೋಬರ್ 27: ಬೆಂಗಳೂರಿನ ಚಿಕ್ಕಬಾಣಾವರ ಕೆರೆಯ ಒತ್ತುವರಿಗೆ ಸಂಬಂಧಿಸಿದಂತೆ ಭೂದಾಖಲೆಗಳ ಜಂಟಿ ನಿರ್ದೇಶಕರು, ಜಲಮಂಡಳಿ ಅಧಿಕಾರಿಗಳ ಸಂಯೋಗದಲ್ಲಿ ಶನಿವಾರ ಕೆರೆಯ ಸಮೀಕ್ಷೆ ನಡೆಸಿದರು.
ಈ ವೇಳೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಗೈರು ಹಾಜರಾಗಿದ್ದರು.ಬೆಂಗಳೂರಿನ ಕೆರೆಗಳ ಒತ್ತುವರಿ ಕುರಿತಂತೆ ಜಂಟಿ ಸಮೀಕ್ಷೆಗೆ ಸೂಚನೆ ನೀಡಬೇಕೆಂದು ಕೋರಿ ಯುನೈಟೆಡ್ ಬೆಂಗಳೂರು ಫೋರಂನ ಸದಸ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಲೋಕಾಯುಕ್ತರು, ಭೂದಾಖಲೆಗಳ ಜಂಟಿ ನಿರ್ದೇಶಕರಿಗೆ ಸಮೀಕ್ಷೆ ನಡೆಸುವಂತೆ ಆದೇಶ ನೀಡಿದ್ದರು.

ಯುನೈಟೆಡ್ ಬೆಂಗಳೂರು ತಂಡ, ಗ್ರಾಮ ಪಂಚಾಯತ್ ಸದಸ್ಯರು & #BWSSB ಅಧಿಕಾರಿಗಳ ಜೊತೆಯಲ್ಲಿ #JDLR ಚಿಕ್ಕಬಾಣಾವರ ಕೆರೆ ಒತ್ತುವರಿಯನ್ನು ಜಂಟಿ ಸರ್ವೇ ಮಾಡಿದರು
— United Bengaluru (@unitedbengaluru) October 27, 2018
ಮತ್ತೆ KSPCB & BDA ಅಧಿಕಾರಿಗಳು ಸರ್ವೇ ಕಾರ್ಯದಲ್ಲಿ ಗೈರು
ಈ ಒತ್ತುವರಿಯನ್ನು ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಲಾಗುವುದು#BengaluruDemands pic.twitter.com/N1znGKpsOh
ಈ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರಿನ ಅರಕೆರೆ ಸೇರಿದಂತೆ ಹಲವಾರು ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ ಸಮೀಕ್ಷೆ ಕೈಗೊಳ್ಳಲಾಗಿತ್ತು. ಶನಿವಾರ ಚಿಕ್ಕಬಾಣಾವಾರ ಕೆರೆಯ ಸಮೀಕ್ಷೆ ನಡೆಸಲಾಗಿದ್ದು, ಈ ಹಿಂದಿನಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಗೈರಾಗಿರುವುದು ಕಂಡುಬಂತು. ಸಮೀಕ್ಷೆ ನಡೆಸುವ ವೇಳೆ ಯುನೈಟೆಡ್ ಬೆಂಗಳೂರು ತಂಡದ ಸದಸ್ಯರು ಹಾಜರಿದ್ದರು.












Click it and Unblock the Notifications