• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಜೆ ನಗರ ಚಂದ್ರು ಕೊಲೆ; ಸಿಐಡಿ ಸಲ್ಲಿಸಿದ ಚಾರ್ಜ್‌ಶೀಟ್ ವಿವರ

|
Google Oneindia Kannada News

ಬೆಂಗಳೂರು, ಜುಲೈ15: ಜೆಜೆ ನಗರದಲ್ಲಿನ ಚಂದ್ರು ಕೊಲೆಗೆ ಕಾರಣವೇನು? ಎನ್ನುವುದು ಬಯಲಾಗಿದೆ. ಕೊಲೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಒಪ್ಪಿಸಿತ್ತು. ಸೂಕ್ಷ್ಮ ಪ್ರಕರಣದ ತನಿಖೆ ನಡೆಸಿ ಸಿಐಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.

ಜೈಭೀಮ್‌ ನಗರದ ನಿವಾಸಿ ಚಂದ್ರ ಕೊಲೆಯ ಆರೋಪಿಗಳನ್ನು ತಕ್ಷಣಕ್ಕೆ ಬಂಧಿಸಲಾಗಿತ್ತು. ಆದರೂ ಗೃಹ ಸಚಿವರ ಹೇಳಿಕೆ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ದ್ವಂದ್ವ ಹೇಳಿಕೆ ಗೊಂದಲಕ್ಕೆ ಕಾರಣವಾಗಿತ್ತು. ಈಗ ಸಿಐಡಿ ಚಾರ್ಜ್‌ಶೀಟ್‌ನಲ್ಲಿ ಕೊಲೆಗೆ ಕಾರಣ ತಿಳಿಸಿದೆ.

ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ 171 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ.
ಚಂದ್ರು ಕೊಲೆ ಸಂಬಂಧ 49 ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಂಡಿದ್ದರು. A1 ಆರೋಪಿ ಶಾಹೀದ್ ಪಾಷ ಅಲಿಯಸ್ ನ್ಯಾರೋ, A2 ಶಾಹೀದ್ ಪಾಷ ಅಲಿಯಾಸ್ ಗೇಣ, A4 ಮೊಹಮ್ಮದ್ ನಬಿಲ್ ಅಲಿಯಾಸ್ ನಬಿಲ್ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಐಪಿಸಿ 114, 212,302,307,504/34 ಹಾಗೂ 27 ಆರ್ಮ್ಸ್ ಆಕ್ಟ್ ಅಡಿಯಲ್ಲಿ ಚಾರ್ಜ್‌ಶೀಟ್‌ ದಾಖಲಿಸಲಾಗಿದೆ.

ಚಂದ್ರು ಹುಟ್ಟುಹಬ್ಬದ ಪ್ರಯುಕ್ತ ಏಪ್ರಿಲ್ 4ರಂದು ಸ್ನೇಹಿತ ಸೈಮನ್ ರಾಜು ಜೊತೆ ಚಿಕನ್ ರೋಲ್ ತಿನ್ನಲು ಮೈಸೂರು ರಸ್ತೆಗೆ ಹೋಗಿದ್ದ. ವಾಪಸ್ ಆಗುವಾಗ ಜೆಜೆ ನಗರದಲ್ಲಿ ಚಂದ್ರು ಮತ್ತು ಶಾಹೀದ್ ಪಾಷ ನಡುವೆ ನಡೆದ ಗಲಾಟೆಯಲ್ಲಿ ಚಾಕುವಿನಿಂದ ಚಂದ್ರು ತೊಡೆಗೆ ಇರಿಯಲಾಗಿತ್ತು. ಚಂದ್ರುವನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 ಆ ಒಂದು ಮಾತು ಕೊಲೆಯಲ್ಲಿ ಅಂತ್ಯ

ಆ ಒಂದು ಮಾತು ಕೊಲೆಯಲ್ಲಿ ಅಂತ್ಯ

ಚಂದ್ರು ಕೊಲೆಗೆ ಕಾರಣವಾಗಿದ್ದು ಆ ಒಂದು ಮಾತು ಎಂದು ತಿಳಿದುಬಂದಿದೆ. ಆರೋಪಿ ಶಾಹೀದ್ ಪಾಷ ಅಲಿಯಾಸ್ ನ್ಯಾರೋ
"ಕನ್ನಡ ನಹೀ ಆತಾ ಉರ್ದು ಮೇ ಬೋಲೋ" ಹೇಳಿ ಜಗಳಕ್ಕೆ ಬಂದಿದ್ದ. ಶಾಹೀದ್ ಪಾಷನನ್ನು ತಡೆಯಲು ಮುಂದಾಗಿದ್ದ ಚಂದ್ರು ಇದೇ ವೇಳೆ ತಪ್ಪಿಸಿಕೊಳ್ಳಕೆ ಪ್ರಯತ್ನವನ್ನು ಮಾಡಿದ್ದ. ಆರೋಪಿ ತನ್ನ ಬಳಿಯಿದ್ದ ಚಾಕು ತೆಗೆದು ಹೊಡೆಯಲು ಮುಂದಾಗಿದ್ದ ಈ ವೇಳೆ ಆರೋಪಿ ಕೈಯನ್ನು ಹಿಡಿದುಕೊಂಡಿದ್ದ ಸೈಮನ್ ರಾಜ್. ಇದೇ ಸಮಯದಲ್ಲಿ ಸೈಮನ್ ಕೈ ಹಿಡಿಯುತ್ತಿದ್ದಂತೆ ಕೂಗಾಡಿದ ಶಾಹೀದ್ ಪಾಷ ಇನ್ನೊಬ್ಬ ಆರೋಪಿ "ಶಾಹೀದ್ ಗೇಣಾ ಆರೆ ಮುಜೆ ಮಾರ್" ರಹಹೈ ಎಂದು ಉರ್ದುವಿನಲ್ಲಿ ಕೂಗಿ ಕರೆದಿದ್ದ.

 ಗಲಾಟೆಯಲ್ಲಿ ತೊಡೆಗೆ ಇರಿದ ಆರೋಪಿ

ಗಲಾಟೆಯಲ್ಲಿ ತೊಡೆಗೆ ಇರಿದ ಆರೋಪಿ

ಶಾಹಿದ್ ಪಾಷ ಕರೆಯುತ್ತಿದ್ದಂತೆ ಸ್ಥಳಕ್ಕೆ ಓಡಿ ಬಂದ ಆರೋಪಿ ಮತ್ತೋರ್ವ ಬಾಲಾಪರಧಿ ಕೈಯಲ್ಲಿ ಲಾಂಗ್ ಹಿಡಿದು ಬಂದಿದ್ದ A2 ಆರೋಪಿ ಶಾಹೀದ್@ ಗೇಣಾ ಇಬ್ಬರು ಸಹ "ಛೋಡೋ ನಹಿ, ಮಾರ್ ಡಾಲೋ" ಅಂತ ಉರ್ದುವಿನಲ್ಲಿ ಕೂಗುತ್ತಾ ಪ್ರಾಣ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ಎ2 ಶಾಹೀದ್ ಪಾಷ ಸೈಮನ್ ರಾಜ್ ಮೇಲೆ ಲಾಂಗ್ ಬೀಸಿದ್ದಾನೆ. ಇನ್ನೊಂದೆಡೆ ತನ್ನ ಬಳಿಯಿದ್ದ ಚಾಕುವಿನಿಂದ ಚಂದ್ರು ಬಲತೊಡೆಗೆ ಚುಚ್ಚಿದ ಎ1 ಆರೋಪಿ ಶಾಹೀದ್ ಪಾಷ ಪರಾರಿ ಆಗಿದ್ದರು.

 ಗೃಹಸಚಿವರ ಹೇಳಿಕೆಯ ಗೊಂದಲ ಸತ್ಯತೆ

ಗೃಹಸಚಿವರ ಹೇಳಿಕೆಯ ಗೊಂದಲ ಸತ್ಯತೆ

ಕೊಲೆ ನಡೆಯುವ ವೇಳೆ ಸ್ಥಳದಲ್ಲಿದ್ದ ನಬಿಲ್ ಎಂಬಾತ ಎ2 ಶಾಹೀದ್ ಪಾಷ ಮತ್ತು ಬಾಲಕನನ್ನು ತನ್ನ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯಲ್ಲಿರುವ ಲಾಡ್ಜ್‌ನಲ್ಲಿ ರೂಮ್ ಮಾಡಿ ಆರೋಪಿಗಳು ಉಳಿಯಲು ನಬಿಲ್ ಸಹಾಯವನ್ನು ಮಾಡಿದ್ದ. ಈತ್ತ ಚಂದ್ರು ತೊಡೆಗೆ ಇರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಂದ್ರು ಸಾವನ್ನಪ್ಪಿದ್ದ. ಚಂದ್ರುವಿನ ಸಾವಿನ ಬಳಿಕ ಸೈಮನ್ ರಾಜ್ ಕೊಟ್ಟ ಹೇಳಿಕೆ ಮತ್ತು ಗೃಹಸಚಿವರು ತನಿಖೆಯ ಹಂತದಲ್ಲಿರುವಾಗಲೇ ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಕೊಲೆಯಾಗಿರುವುದನ್ನು ರಿವೀಲ್ ಮಾಡಿದ್ದರು. ಇದು ರಾಜ್ಯಾದ್ಯಂತ ಚರ್ಚೆ ನಡೆಯಲು ಕಾರಣವಾಗಿತ್ತು.

 ಅವನಿಗೆ ಕನ್ನಡ , ಇವನಿಗೆ ಉರ್ದು ಬರುತ್ತಿರಲಿಲ್ಲ

ಅವನಿಗೆ ಕನ್ನಡ , ಇವನಿಗೆ ಉರ್ದು ಬರುತ್ತಿರಲಿಲ್ಲ

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದ ವಿಚಾರವೇ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಭಾಷೆಯ ಸಮಸ್ಯೆಯೇ ಜಗಳಕ್ಕೆ ನಾಂದಿಯನ್ನು ಹಾಡಿದೆ. ಇದರೊಂದಿದೆ ಮಾತಿಗೆ ಮಾತು ಬೆಳೆದು ಕೊಲೆಯಾಗಿರುವುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಸದ್ಯ ಸಿಐಡಿ ಓರ್ವ ಬಾಲಕ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ದಾಖಲಿಸಿದ್ದಾರೆ. ಸಿಐಡಿ ಡಿವೈಎಸ್ಪಿ ಡಿ‌. ಸಿ. ನಂದಕುಮಾರ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ವಾದ, ಪ್ರತಿವಾದ ಮತ್ತು ಸಾಕ್ಷ್ಯಾಧಾರದ ಆಧಾರದಲ್ಲಿ ನ್ಯಾಯಾಲಯ ತೀರ್ಪು ನೀಡಲಿದೆ.

Recommended Video

   Virat ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಿಡುಕಿದ Rohit Sharma | *Cricket | OneIndia Kannada
   English summary
   JJ Nagar Chandru murder on April 4th. Criminal investigation Department (CID) completed probe and charge sheet filed against four accused. Know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X