• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂಗ್ಲೀಷ್ ಸಿನಿಮಾ ನೋಡಿ ದರೋಡೆಗೆ ಸ್ಕೆಚ್ ಹಾಕುತ್ತಿದವರು ಅಂದರ್‌

By Manjunatha
|

ಬೆಂಗಳೂರು, ಮಾರ್ಚ್‌ 23: ಇಂಗ್ಲೀಷ್ ಸಿನಿಮಾಗಳನ್ನು ನೋಡಿ ಅದರಿಂದ ಸ್ಪೂರ್ತಿ ಪಡೆದು ಕಳ್ಳತನಕ್ಕೆ ಇಳಿಯುತ್ತಿದ್ದ ಖತರ್ನಾಕ್ ದರೋಡೆಕೋರರ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

ಶಿವಮೂರ್ತಿ, ಅಶೋಕ್ ಕುಮಾರ್, ಕುಮಾರ್, ಜಗದೀಶ್ ಮೋಹನ್ ಬಂಧಿತರು, ಇವರು ಕಳೆದ ತಿಂಗಳು ಸುಬ್ರಹ್ಮಣ್ಯಪುರ ಆಭರಣ ಅಂಗಡಿಯಲ್ಲಿ ಕಳ್ಳತನ ಮಾಡಿದ್ದರು. ಇದಷ್ಟೆ ಅಲ್ಲದೆ ಇನ್ನೂ ಸಾಕಷ್ಟು ದರೋಡೆ ಪ್ರಕರಣದಲ್ಲಿ ಇವರು ಭಾಗಿ ಆಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್

ಈ ಆರೋಪಿಗಳು ಕದ್ದ ಚಿನ್ನಾಭರಣವನ್ನು ಶ್ರೀಲಂಕಾದಲ್ಲಿ ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಐಡಿಯಾ ಅವರಿಗೆ ಹೊಳೆದಿದ್ದು, ಇಂಗ್ಲಿಷ್ ಸಿನಿಮಾ ಒಂದರಿಂದ ಅಂತೆ. ಇಂಗ್ಲೀಷ್ ಸಿನಿಮಾಗಳನ್ನು ನೋಡಿ ಈ ದರೋಡೆಕೋರರು ಐಡಿಯಾಗಳನ್ನು ಪಡೆದುಕೊಳ್ಳುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಹಿಂದೆ ಇದೇ ತಂಡದ ಸದಸ್ಯರು ಜಾಲಹಳ್ಳಿ ಕೊತ್ತನೂರಿನ ಜ್ಯೂವೆಲ್ಲರಿ ಶಾಪ್​ನಲ್ಲೂ ಈ ಆರೋಪಿಗಳು ಹಿಂದೊಮ್ಮೆ ಕೈಚಳಕ ತೋರಿಸಿದ್ದರು. ಅಲ್ಲಿ ಸೆಕ್ಯುರಿಟಿ ಗಾರ್ಡ್‌ ಮೇಲೆ ಹಲ್ಲೆ ಮಾಡಿ ಆತನಿಂದ ಪಿಸ್ತೂಲು ಕಸಿದು ಪರಾರಿ ಆಗಿದ್ದರು, ಸುಬ್ರಹ್ಮಣ್ಯಪುರ ಆಭರಣದ ಅಂಗಡಿ ದರೋಡೆ ಮಾಡಿದಾಗಲೂ ಇದೇ ರೀತಿ ಮಾಡಿದ್ದರು. ಪೊಲೀಸರು ಇವರಿಂದ 1 ಕೋಟಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಮತ್ತು ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ.

English summary
Jewellery shop robbers who took inspiration from watching English movies has been arrested by Subramanyapura Police station. police seize 1 crore worth gold the robbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X