ದುಬೈನಲ್ಲಿ 'ವಿಶ್ವ ಕನ್ನಡಿಗ' ಪ್ರಶಸ್ತಿಗೆ ಭಾಜನರಾದ ಟಿ.ಎ.ಶರವಣ
ಬೆಂಗಳೂರು, ಡಿಸೆಂಬರ್ 9: ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಡಾ.ಟಿ.ಎ.ಶರವಣ ಅವರು ವಿಶ್ವ ಕನ್ನಡ ನುಡಿ ಸಿರಿ ನೀಡುವ 2017ನೇ ಸಾಲಿನ 'ವಿಶ್ವ ಕನ್ನಡಿಗ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವಿಶ್ವ ಕನ್ನಡ ನುಡಿ ಸಿರಿ ವತಿಯಿಂದ ದುಬೈನಲ್ಲಿ ಶುಕ್ರವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಟಿ.ಎ.ಶರವಣ ಅವರಿಗೆ 'ವಿಶ್ವ ಕನ್ನಡಿಗ 2017' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಪರ ಪ್ರೇಮ ಹಾಗು ಸಧಾ ಕನ್ನಡಿಗರ ಏಳಿಗೆಗಾಗಿ ಶರವಣ ಅವರು ಶ್ರಮಿಸುತ್ತಿರುವುದನ್ನು ಗಮನಿಸಿ ಈ 'ವಿಶ್ವ ಕನ್ನಡಿಗ 2017' ಪ್ರಶಸ್ತಿಯನ್ನು ನೀಡಲಾಯಿತು.
ಚಿನ್ನದ ವ್ಯಾಪಾರಿಯಾಗಿ, ಸಮಾಜಸೇವಕನಾಗಿ, ಜೆಡಿಎಸ್ ವಕ್ತಾರನಾಗಿ, ದೇವೇಗೌಡರ ಆತ್ಮೀಯರಾಗಿ ಶರವಣ ಅವರು ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶರವಣ ಅವರು ಬೆಂಗಳೂರಿನ ಹನುಂತ ನಗರದಲ್ಲಿ ಪ್ಪಾಜಿ ಕ್ಯಾಂಟಿನ್ ಹೆಸರಲ್ಲಿ ಕಡಿಮೆ ಬೆಲೆಯಲ್ಲಿ ಬಡವರಿಗೆ ಊಟ, ತಿಂಡಿ ನೀಡುತ್ತಿದ್ದಾರೆ.












Click it and Unblock the Notifications