Charnadrayaan 3: ಮಹಾನ್ ಸಾಹಸ ಪೂರೈಸಿದ ಇಸ್ರೋ: HDK
ಬೆಂಗಳೂರು, ಆಗಸ್ಟ್ 23: ಭಾರತ ಬಾಹ್ಯಾಕಾಶ ವಲಯದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಈ ಸಂಬಂಧ ಪ್ರಧಾನಿಮಂತ್ರಿ ಆದಿಯಾಗಿ ಇಡಿ ಭಾರತವೇ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಹರ್ಷ ವ್ಯಕ್ತಪಡಿಸಿದ್ದಾರೆ. ಇದೀಗ ಜೆಡಿಎಸ್ ಪಕ್ಷ ನಾಯಕ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಸಹ
ಭಾರತ ವಿಕ್ರಮ ಸಾಧಿಸಿದೆ. ನಮೆಲ್ಲರ ಕನಸು ನನಸಾಗಿದೆ, ನೂರಾ ಇಪ್ಪತ್ತೈದು ಕೋಟಿ ಭಾರತೀಯರ ನಿರೀಕ್ಷೆ ನಿಜವಾಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಮ್ಮ ಹೆಮ್ಮೆ. ಜಗತ್ತಿನಲ್ಲಿಯೇ ಪ್ರಥಮವಾಗಿ ರೋವರ್ (ವಿಕ್ರಮ ಲ್ಯಾಂಡರ್)ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರಯಾನ-3 ಮಹಾನ್ ಸಾಹಸವನ್ನು ಇಸ್ರೋ ಪೂರೈಸಿದೆ ಎಂದು ತಿಳಿಸಿದರು.
ಆ ಮೂಲಕ ಖಗೋಳ ಸಂಶೋಧನೆಗೆ ನಿರ್ಣಾಯಕ ತಿರುವು ಕೊಟ್ಟಿದೆ. ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ಕೇವಲ ಪದಗಳಿಂದ ಬಣ್ಣಿಸಿದರೆ ಸಾಲದು. ಹಗಲಿರುಳು ಶ್ರಮಿಸಿದ ಅವರ ಯಶಸ್ಸನ್ನು, ಅರ್ಪಣಾ ಮನೋಭಾವವನ್ನು ಹೃದಯಪೂರ್ವಕವಾಗಿ ಕೊಂಡಾಡಿ ಗೌರವಿಸೋಣ ಎಂದು ಹೇಳಿದರು.
ಭಾರತ ವಿಕ್ರಮ ಸಾಧಿಸಿದೆ. ನಮೆಲ್ಲರ ಕನಸು ನನಸಾಗಿದೆ, ನೂರಾ ಇಪ್ಪತ್ತೈದು ಕೋಟಿ ಭಾರತೀಯರ ನಿರೀಕ್ಷೆ ನಿಜವಾಗಿದೆ.@ISRO ನಮ್ಮ ಹೆಮ್ಮೆ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 23, 2023
ಜಗತ್ತಿನಲ್ಲಿಯೇ ಪ್ರಥಮವಾಗಿ ರೋವರ್ (ವಿಕ್ರಮ ಲ್ಯಾಂಡರ್)ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರಯಾನ-3 ಮಹಾನ್ ಸಾಹಸವನ್ನು ಇಸ್ರೋ ಪೂರೈಸಿದೆ.1/3#Chandrayan3 #ISRO pic.twitter.com/ziJTa6Zako
ಅಮೆರಿಕ, ರಷ್ಯಾ, ಚೀನಾ ನಂತರ ಚಂದ್ರನ ಮೇಲೆ ರೋವರ್ ಇಳಿಸಿದ ಈ ಸಾಧನೆ ಐತಿಹಾಸಿಕವಾದದ್ದು, ಇಸ್ರೋದ ಈ ಪಯಣ ನನಗೆ ರೋಮಾಂಚನ ಉಂಟು ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷರಾದ ಡಾ.ಸೋಮನಾಥ್ ಸೇರಿದಂತೆ ಅವರ ತಂಡದ ಎಲ್ಲಾ ವಿಜ್ಞಾನಿಗಳು, ತಾಂತ್ರಿಕ ನಿಪುಣರು, ಮತ್ತಿತರರಿಗೆ ನನ್ನ ಅಭಿನಂದನೆಗಳು ಎಂದು ಎಚ್‌ಡಿ ಕುಮಾರಸ್ವಾಮಿ ಪ್ರಶಂಶಿಸಿದರು.
ಕಳೆದ ತಿಂಗಳು ಜುಲೈ 14ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಮಧ್ಯಾಹ್ನ ಚಂದ್ರಯಾನ 3 ಬಾಹ್ಯಾಕಾಶ ನೌಕೆ ನಭಕ್ಕೆ ಚಿಮ್ಮಿತು. ಅಲ್ಲಿಂದ ಹಂತ ಹಂತವಾಗಿ ಚಂದ್ರನೂರಿಗೆ ಪ್ರಯಾಣ ಬೆಳೆಸಿದ ವಿಕ್ರಮ್ ಲ್ಯಾಂಡರ್ ಇಂದು ಆಗಸ್ಟ್ 23ರಂದು ಬುಧವಾರ ಚಂದ್ರನ ಧಕ್ಷಿಣ ಧ್ರುವದ ಮೇಲೆ ಮೃಧುವಾಗಿ ಲ್ಯಾಂಡ್ ಆಗುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications