ಜೆಡಿಎಸ್ ಕೋರ್ ಕಮಿಟಿ ಪಟ್ಟಿ ಬಹಿರಂಗ
ಬೆಂಗಳೂರು, ಅ.16: ಕಳೆದ ಎರಡು ತಿಂಗಳುಗಳ ಆಂತರಿಕ ಭಿನ್ನಮತದಿಂದ ಬಳಲಿದ್ದ ಜಾತ್ಯಾತೀತ ಜನತಾದಳ ಪಕ್ಷ ಅಸಮಾಧಾನಗಳನ್ನು ಬಗೆ ಹರಿಸಲು ಕೋರ್ ಕಮಿಟಿ ರಚಿಸಲಾಗಿದೆ. ಭಿನ್ನಮತೀಯರು, ಎಚ್ ಡಿ ದೇವೇಗೌಡರ ಕುಟುಂಬಸ್ಥರಿಗೆ ಈ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ. ಗುರುವಾರ ಸಂಜೆ ಹಂಗಾಮಿ ರಾಜ್ಯಾಧ್ಯಕ್ಷ ನಾರಾಯಣ ರಾವ್ ಅವರು ಅಧಿಕೃತವಾಗಿ ಪಟ್ಟಿಯನ್ನು ಪ್ರಕಟಿಸಲಿದ್ದಾರೆ.
ಸೆಪ್ಟೆಂಬರ್‌ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಕೋರ್ ಕಮಿಟಿ ರಚನೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಪಕ್ಷಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೋರ್ ಕಮಿಟಿಯಲ್ಲಿ ತಗೆದುಕೊಳ್ಳಲಾಗುತ್ತದೆ. ವಿಧಾನಪರಿಷತ್ ಮತ್ತು ವಿಧಾನಸಭೆಯ ಸದಸ್ಯರು ಕೋರ್ ಕಮಿಟಿಯಲ್ಲಿರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. [ಶಾಸಕಾಂಗ ಸಭೆಯ ಮುಖ್ಯಾಂಶಗಳು]

ಸಮಿತಿಯ ಸದಸ್ಯರು(ಇದು ಸಂಭವನೀಯ ಪಟ್ಟಿ, ಅಧಿಕೃತ ಪಟ್ಟಿ ನಂತರ ಪುಟ ಅಪ್ಡೇಟ್ ಆಗಲಿದೆ)
* ಬಂಡೆಪ್ಪ ಕಾಶೆಂಪುರ್
* ಚಿಕ್ಕ ಮಾದು
* ಸಿರಿವಂತ ಪಾಟೀಲ್
* ಬಸವರಾಜ್ ಹೊರಟ್ಟಿ
* ಸಿ.ಎಸ್ ಪುಟ್ಟರಾಜು
* ಎಚ್ ಕೆ ಕುಮಾರಸ್ವಾಮಿ
* ಮಧು ಬಂಗಾರಪ್ಪ
* ವೆಂಕಟ ಶಿವಾರೆಡ್ಡಿ
* ಅಖ್ತರ್ ಆಗಾ
* ವೆಂಕಟ್ ನಾಡಗೌಡ
* ಎಚ್ ಡಿ ಕುಮಾರಸ್ವಾಮಿ(ಕಾರ್ಯಕರ್ತರ ಒತ್ತಾಯದ ಮೇರೆಗೆ ಸೇರ್ಪಡೆ)
ಜೆಡಿಎಸ್ ಎಂದರೆ ಅಪ್ಪ ಮಕ್ಕಳ ಪಕ್ಷ ಎಂಬ ಟ್ಯಾಗ್ ಬಂದಿದೆ. ಇದನ್ನು ಕಳಚಲು ದೇವೇಗೌಡರ ಅಣತಿಯಂತೆ ಕೋರ್ ಕಮಿಟಿ ರಚಿಸಲಾಗಿದೆ ಜೆಡಿಎಸ್ ಪಕ್ಷದ 40 ಶಾಸಕರೂ ಒಟ್ಟಾಗಿದ್ದೇವೆ, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮುಂಬರುವ ಜಿಲ್ಲಾ ಪಂಚಾಯಿತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳನ್ನು ಸ್ವತಂತ್ರವಾಗಿ ಎದುರಿಸಲು ತೀರ್ಮಾನಿಸಿದ್ದೇವೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಬೆನ್ನಿಗಾನಹಳ್ಳಿ ಭೂ ಹಗರಣದಲ್ಲಿ ಡಿಕೆಶಿ ಜೈಲು ಸೇರುತ್ತಾರೆ ಎಂದು ಭವಿಷ್ಯ ನುಡಿದರು. ಬಂಡಾಯವೆದ್ದಿರುವ ಜಮೀರ್ ಅಹಮದ್ ಜೊತೆ ಮಾತನಾಡುತ್ತೇನೆ ಎಂದರು.












Click it and Unblock the Notifications