• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುನೈಟೆಡ್ ಬೆಂಗಳೂರು ದೂರು:ಭೂದಾಖಲೆ ಇಲಾಖೆಯಿಂದ ಮಲ್ಲಸಂದ್ರ ಕೆರೆ ಪರಿಶೀಲನೆ

|

ಬೆಂಗಳೂರು, ಅಕ್ಟೋಬರ್ 12: ಬೆಂಗಳೂರಿನ ಕೆರೆಗಳ ಒತ್ತುವರಿ ಮತ್ತು ಮಾಲಿನ್ಯದ ವಿರುದ್ಧ ಯುನೈಟಟೆಡ್ ಬೆಂಗಳೂರು ಲೋಕಾಯುಕ್ತಕ್ಕೆ ನೀಡಿದ್ದ ದೂರಿನ ಮೇರೆಗೆ ಭೂದಾಖಲೆ ಇಲಾಖೆಯ ಅಧಿಕಾರಿಗಳು ಮಲ್ಲಸಂದ್ರ ಕೆರೆ ಪರಿಶೀಲನೆ ನಡೆಸಿದರು.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ನ್ಯಾಯಾಲಯದ ಆದೇಶವಿದ್ದರೂ ನಗರದ ಕೆರೆಗಳ ಸಂರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ನಿರಾಸಕ್ತಿ ತೋರಿಸುತ್ತಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಯುನೈಟೆಡ್ ಬೆಂಗಳೂರು ಲೋಕಾಯುಕ್ತ ಸಂಸ್ಥೆಗೆ ಸ್ವಾತಂತ್ರ್ಯ ಹೋರಾಟಗಾರ ಎಚ್‌ಎಸ್ ದೊರೆಸ್ವಾಮಿ ನೇತೃತ್ವದಲ್ಲಿ ದೂರು ನೀಡಿತ್ತು.

ಯುನೈಟೆಡ್ ಬೆಂಗಳೂರು ದೂರಿನ ಪರಿಶೀಲನೆ ಮಾಡಿದ ಲೋಕಾಯುಕ್ತ ನ್ಯಾಯಮೂರ್ತಿ

ನಗರದ ಕೆರೆಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಿ ವರದಿ ಹಾಗೂ ಕೆರೆಗಳ ರಕ್ಷಣೆ ಕುರಿತು ಹೋರಾಟದ ಮಾಹಿತಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಲಾಯಿತು. ಯುನೈಟೆಡ್ ಬೆಂಗಳೂರು ಸಂಘಟನೆಯು ಸುಮಾರು 27 ಕೆರೆಗಳ ತಪಾಸಣೆ ನಡೆಸಿದ್ದು, ಕೆರೆಗಳ ನಾಶ, ಒತ್ತುವರಿ, ಕಟ್ಟಡ ನಿರ್ಮಾಣ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಸೇರಿದಂತೆ ಹಲವು ಬಗೆಯ ತ್ಯಾಜ್ಯಗಳನ್ನು ಸುರಿದು ಕೆರೆಗಳನ್ನು ಅವಸಾನದ ಸಂಚಿಗೆ ದೂಡಲಾಗುತ್ತಿದೆ.

ನಗರದ ಕೆರೆಗಳ ರಕ್ಷಣೆಗೆ 1985ರಲ್ಲಿ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಎನ್ ಲಕ್ಷ್ಮಣ್ ರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಸಮಿತಿಯ ಅಧ್ಯಯನ ನಡೆಸಿ ವರದಿ ನೀಡಿದೆ. 2011ರಲ್ಲಿ ನ್ಯಾ. ಎನ್‌ಕೆ ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಯಿತು. ಅಲ್ಲದೇ, ನ್ಯಾಯಾಲಯವು ಸಹ ವಿಚಾರಣೆ ನಡೆಸಿ ಕೆರೆಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದೆ. ಆದರೆ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.

ನಗರದ ಅಭಿವೃದ್ಧಿಗೆ ಯುನೈಟೆಡ್ ಬೆಂಗಳೂರಿನಿಂದ 'ಬೆಂಗಳೂರು ಡಿಮ್ಯಾಂಡ್ಸ್' ಚಳವಳಿ

ಕೆರೆಯ ಸಮೀಪ 2015ರಲ್ಲಿ ಒತ್ತುವರಿಯಾಗಿದೆ. 2015ರಿಂದ 18ರವರೆಗೆ ರಸ್ತೆ ನಿರ್ಮಾಣ ಮಾಡಲು, ಲೇಔಟ್ ಮಾಡಲು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಬಿಡಿಎ, ಜಲಮಂಡಳಿ ಯಾವುದೇ ಇಲಾಖೆಗಳು ಕೆರೆಗಳನ್ನು ಸಂರಕ್ಷಣೆ ಮಾಡುವ ಕುರಿತು ಆಲೋಚಿಸುತ್ತಿಲ್ಲ. ಕೆರೆಗಳನ್ನು ಉಳಿಸಲು ಲೋಕಾಯುಕ್ತರು ನೀಡಿದ್ದ ಆದೇಶಕ್ಕೂ ಕೂಡ ಬೆಲೆ ಇಲ್ಲದಂತಾಗಿದೆ.

30 ಮಹಿಳೆಯರನ್ನು ಸ್ವಾವಲಂಬಿಯಾಗಿಸಿದ ಯುನೈಟೆಡ್ ಬೆಂಗಳೂರು

ಅಕ್ಟೋಬರ್ 16ರಂದು ಮತ್ತೊಂದು ಕೆರೆಯ ಸಮೀಕ್ಷೆ ನಡೆಯಲಿದೆ. ಆ ಸಂದರ್ಭದಲ್ಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಹಕಾರ ನೀಡುತ್ತಾರಾ ಎಂದು ಕಾದು ನೋಡಬೇಕಿದೆ ಎಂದು ಯುನೈಟೆಡ್ ಬೆಂಗಳೂರು ಕನ್‌ವೀನರ್ ಸುರೇಶ್ ಎನ್‌.ಆರ್. ತಿಳಿಸಿದ್ದಾರೆ.

English summary
Despite absent from KSPCB and other authorities, joint director of Land Records department has conducted survey at Mallasandra lake following petition filed with Lokayukta by United Bengaluru forum on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X