ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಚಿ ತಿನ್ನದ ಭ್ರಷ್ಟಾಚಾರ ಜಯಾರನ್ನು ಜೈಲು ಸೇರಿಸಿತೇ?

By ತುರುವೇಕೆರೆ ಪ್ರಸಾದ್
|
Google Oneindia Kannada News

ಜಯಲಿಲಿತಾ ಅವರು ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಕೊಳ್ಳಲಾಗದೆ ತಮ್ಮ ವಿರುದ್ಧ ತಾವೇ ಸಾಕ್ಷಿಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೋದರು.ಸುಮಾರು 18 ವರ್ಷಗಳ ನಂತರ ಜಯಲಲಿತಾ ವಿರುದ್ಧ ತೀರ್ಪು ಬಂದಿದೆ. 2001ಕ್ಕೆ ಮುಂಚೆಯೇ ಈ ತೀರ್ಪು ಬರಬೇಕಿತ್ತು. ಯಾಕೆಂದರೆ ಜಯಲಲಿತಾ ತಮ್ಮ ಅಧಿಕಾರವಾಧಿಯಲ್ಲಿ ಕ್ರಮೇಣ ಮಾಗುತ್ತಾ ನಡೆದಿದ್ದರು. ಮುಂದೆ ಓದಿ

ಜಯಲಲಿತಾ ಅವರದ್ದು ನಿರಂಕುಶ ಧೋರಣೆಯೇ ಆದರೂ ಕಳೆದ 3 ವರ್ಷಗಳಲ್ಲಿ ಜಯಲಲಿತಾ ಆದಷ್ಟೂ ಕಳಂಕ ರಹಿತ ಮಾದರಿಯಲ್ಲಿ ಆಡಳಿತ ನಡೆಸಿದ್ದರು.. ಕಾನೂನು ಸುವ್ಯವಸ್ಥೆ ಉತ್ತಮಗೊಂಡಿತ್ತು. ಗೂಂಡಾಗಿರಿ ಕಡಿಮೆಯಾಗಿತ್ತು. ಕಪ್ಪುಹಣ ಚಲಾವಣೆ ನಿಯಂತ್ರಣಕ್ಕೆ ಬಂದಿತ್ತು. ಸರ್ಕಾರದ ಜನಪ್ರಿಯ ಯೋಜನೆಗಳಿಂದ ಬಡತನದ ರೇಖೆಯ ಕೆಳಗಿದ್ದ ಲಕ್ಷಾಂತರ ಜನರಿಗೆ ನಿಜಕ್ಕೂ ಉಪಯೋಗವಾಗಿತ್ತು.[ಪ್ರಜೆಗಳ ರಕ್ಷಣೆ ಆಯಾ ರಾಜ್ಯಗಳದ್ದೇ ಹೊಣೆ : ಸಿದ್ದು]

ಅಮ್ಮಾ ಕ್ಯಾಂಟೀನ್ ಮೂಲಕ ಒಂದು ರೂಪಾಯಿಗೆಗೆ ಒಂದು ಇಡ್ಲಿ, 3ರೂಗೆ ಮೊಸರನ್ನ, 5 ರೂಪಾಯಿಗೆ ಅನ್ನ ಸಾಂಬಾರ್ ಲಕ್ಷಾಂತರ ಕಾರ್ಮಿಕರ ಹಸಿವು ನೀಗಿತ್ತು. ಕಾಲೇಜು ವಿದ್ಯಾರ್ಥಿನಿಯರಿಗೆ ಲ್ಯಾಪ್ ಟ್ಯಾಪ್ ನೀಡುವ ಉತ್ತಮ ಯೋಜನೆ ಜಾರಿಗೆ ಬಂದಿತ್ತು. ರೂ.340ರ ಬದಲಿಗೆ ಒಂದು ಚೀಲಕ್ಕೆ ರೂ.110ರ ಬೆಲೆಯಲ್ಲಿ ಅಮ್ಮ ಸಿಮೆಂಟ್ ನೀಡಲಾಗುತ್ತಿತ್ತು. ದೇವಾಲಯಗಳಲ್ಲಿ ಭಕ್ತರಿಗೆ ಹಾಗೂ ಭಕ್ತರಿಗೆ ಉಚಿತ ಊಟ ನೀಡಲಾಗುತ್ತಿದೆ.

ವಿಶ್ರಾಂತ ಪೊಲೀಸ್ ಸಿಬ್ಬಂದಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಚೆನ್ನೈನಲ್ಲಿ ಬಡ ಕಾರ್ಮಿಕರಿಗೆಂದೇ ವಿಶೇಷ ಮಿನಿ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಮುಂದೆ ಅಮ್ಮಾ ಫಾರ್ಮೆಸಿಯೂ ಜಾರಿಗೆ ಬರಲಿರುವುದಾಗಿ ಘೋಷಿಸಲಾಗಿತ್ತು. ಒಂದು ವೇಳೆ ಇದಕ್ಕೆಲ್ಲಾ ಅಡೆತಡೆ ಬಂದರೆ ಅಮ್ಮ ಹಿಂದೆಂದೋ ಮಾಡಿದ ತಪ್ಪಿನಿಂದಾಗಿ ತಮಿಳುನಾಡುವಿನ ಮಕ್ಕಳು ಶಿಕ್ಷೆ ಅನುಭವಿಸುವಂತಾಗುತ್ತದೆ. ಅಂತೂ ಅಮ್ಮ ಈ ಮಕ್ಕಳ ಪಾಲಿಗೆ ತಾವೇ ಗುಮ್ಮ ಕರೆದಿದ್ದಾರೆ..!

ಯಾರ ಕೃಪಾ ಕಟಾಕ್ಷವೂ ಉಳಿಸಲಿಲ್ಲ: ಇಷ್ಟೆಲ್ಲ ಜನಪ್ರಿಯತೆಯ ಉತ್ತುಂಗದಲ್ಲಿರುವಾಗ ಜಯಲಲಿತಾ ಅವರಿಗೆ ಶಿಕ್ಷೆಯಾಗಿದೆ. ಆದರೆ ಸಾವಿರಾರು ಕೋಟಿ ರೂಪಾಯಿಗಳ ಮೇವು ಹಗರಣದ ಆರೋಪಿ ಲಾಲೂ ಪ್ರಸಾದ್ ಯಾದವ್, ಸೋನಿಯಾ ಗಾಂಧಿಯವರ ಕೃಪಾಕಟಾಕ್ಷದಿಂದ ಕಾನೂನಿನ ಇಕ್ಕಳದಿಂದ ನುಳುಚಿಕೊಳ್ಳುತ್ತಲೇ ಬಂದರು.[ಜಯಾ ವಿರುದ್ಧ ನ್ಯಾಯಾಂಗ ನಿಂದನೆ ದೂರು]

ಸ್ವತಃ ಜಯಲಲಿತಾ ಅವರ ಕಟ್ಟಾ ಎದುರಾಳಿಗಳ ಮೇಲೂ ಇಂತಹ ಸಾಕಷ್ಟು ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆಯ ಆರೋಪವಿದೆ. ಆದರೆ ಅವರ್ಯಾರೂ ಜೈಲಿಗೆ ಹೋಗಿಲ್ಲ. ಇದರಿಂದ ಭಾರತದ ರಾಜಕೀಯದಲ್ಲಿ ಜಾಣ್ಮೆ ಹಾಗೂ ಬುದ್ದಿವಂತಿಕೆಯ ನಡೆ ಇದ್ದರೆ ಎಂತಹ ಭ್ರಷ್ಟತೆಯನ್ನು ಬೇಕಾದರೂ ಜೀರ್ಣಿಸಿಕೊಳ್ಳಬಹುದು ಎಂಬುದು ಸಾಬೀತಾಗಿದೆ.

Jaya and OPS

ಹಂಚಿ ತಿನ್ನದ ಭ್ರಷ್ಟಾಚಾರ: ಡೌಲಿನ, ಹಂಚಿ ತಿನ್ನದ ಭ್ರಷ್ಟಾಚಾರ (ಬ್ಲಾಟಂಟ್ ಕರೆಪ್ಶನ್) ಮಾತ್ರ ರಾಜಕೀಯ ವ್ಯಕ್ತಿಗಳನ್ನು ಜೈಲು ಪಾಲು ಮಾಡುತ್ತದೆ. ಇದೇ ಕಾರಣಕ್ಕಾಗಿ ‘ಇನ್ ಇಂಡಿಯಾ ಎವೆರಿಥಿಂಗ್ ಗೋಸ್ ಹ್ಯಾಂಡ್ ಇನ್ ಹ್ಯಾಂಡ್' ಎಂದು ಹೇಳುವುದು. ಇಂತಹ ಪರಸ್ಪರ ಕೈ ಕುಲುಕುವ ಜಾಣ್ಮೆ ಇಲ್ಲದಿದ್ದರೆ ಕಾನೂನಿನ ಕಪಿಮುಷ್ಟಿಯೊಳಗೆ ಸಿಲುಕಿಬಿದ್ದಂತೆಯೇ ಸೈ![ಜಯಲಲಿತಾಗೆ ಜೈಲು, ನಿತ್ಯಾನಂದನ ಕಾಲ್ಗುಣವೇ?]

ಏಕೆಂದರೆ ರಾಜಕೀಯ ವ್ಯಕ್ತಿಗಳು ತಮ್ಮ ಮೇಲಿನ ಆರೋಪದ ಮಧ್ಯೆಯೇ ವಿಲಾಸೀ ಜೀವನ ನಡೆಸುತ್ತಿರುತ್ತಾರೆ. ಇಂತಹವರ ವಿರುದ್ಧ ಸಾಮಾನ್ಯರು ದೂರು ನೀಡುವಷ್ಟು ಭಾರತದ ಪ್ರಜಾತಂತ್ರ ರಕ್ಷಣೆ ನೀಡಲಾರದು. ಜೊತೆಗೆ ಈ ರಾಜಕೀಯ ಅಪರಾಧೀಕರಣದ ವಿರುದ್ಧವೇ ಸೆಡ್ಡು ಹೊಡೆದು ನಿಂತು ಸೈದ್ಧಾಂತಿಕಹೋರಾಟ ಮಾಡುವ ಪಕ್ಷಗಳೂ ಪ್ರಬುದ್ಧತೆ ಮೆರೆದಿಲ್ಲ, ಅಂತಹ ಪ್ರಜ್ಞಾವಂತಿಕೆ, ಸಂಯಮ ಬೆಳೆಸಿಕೊಂಡಿಲ್ಲ. ಸುಬ್ರಹ್ಮಣ್ಯ ಸ್ವಾಮಿಯವರು ರಾಜಕೀಯ ದ್ವೇಷಕ್ಕೋ, ರಾಜಕೀಯ ಶುದ್ದೀಕರಣಕ್ಕೋ ಯಾವುದೇ ದೃಷ್ಟಿಯಿಂದ ದೂರು ದಾಖಲಿಸಿರಬಹುದು. ಆದರೆ ಅವರು ಅಭಿನಂದನಾರ್ಹರು!

ಓದುಗರೆ ಗಮನಿಸಿ: ಈ ಲೇಖನ ಈಗಾಗಲೇ ನಿಲುಮೆ.ನೆಟ್ ನಲ್ಲಿ ಪ್ರಕಟಗೊಂಡಿದ್ದು, ಸ್ನೇಹಸೇತುವಾಗಿ ಇಲ್ಲಿ ಪುನರ್ ಪ್ರಕಟಿಸಲಾಗಿದೆ. ಎಲ್ಲಾ ಹಕ್ಕುಗಳು ಲೇಖಕರದ್ದು ಹಾಗೂ ನಿಲುಮೆ ಸಮೂಹಕ್ಕೆ ಸೇರಿರುತ್ತದೆ-ಧನ್ಯವಾದಗಳು.

English summary
How come J Jayalalithaa convicted and jailed in Disproportionate assets case, Is Jayalalithaa is not clever enough to defend her case and what will be the impact on popular schemes she launched which is helpful to public.Is Jaya victim of blatant corruption Here is explainer by Turuvekere Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X