ಜಯಲಲಿತಾಗೆ ಶನಿವಾರ ಬಿಡುಗಡೆ ಭಾಗ್ಯ
ಬೆಂಗಳೂರು, ಅ.17 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಜಯಾ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು 1 ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಪ್ರತಿ ಜೈಲು ತಲುಪಿದ ಕೂಡಲೇ ಜಯಲಲಿತಾ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ವಿಶೇಷ ವಿಮಾನದಲ್ಲಿ ಅವರು ಎಚ್‌ಎಎಲ್ ಏರ್‌ಪೋರ್ಟ್‌ನಿಂದ ಚೆನ್ನೈಗೆ ತೆರಳಲಿದ್ದು, ಅಗತ್ಯ ಭದ್ರತೆ ನೀಡಲು ಬೆಂಗಳೂರು ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ. [ಜಯಲಲಿತಾಗೆ ಜಾಮೀನು ಮಂಜೂರು]

ಜಯಲಲಿತಾ ಅವರ ನೂರಾರು ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿನ ಮುಂದೆ ಜಮಾವಣೆ ಆಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಜೈಲಿನ ಸುತ್ತ-ಮುತ್ತಲಿನ 1 ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಜಯಲಲಿತಾ ಅವರಿಗೆ ಝೆಡ್ ಪ್ಲಸ್ ಭದ್ರತೆ ಮುಂದುವರೆಯಲಿದೆ.
All precautions have been taken. VThere is no need for any panic and public are requested not to pay heed to any rumours(3/3)
— M N Reddi, IPS (@CPBlr) October 17, 2014 ಇಂದು ಬಿಡುಗಡೆ ಸಾಧ್ಯವೇ? : ಜಯಲಲಿತಾಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್ ಆದೇಶ ಪ್ರತಿ ಶುಕ್ರವಾರ ಸಂಜೆ 5.30ರೊಳಗೆ ಪರಪ್ಪನ ಅಗ್ರಹಾರದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಲುಪಿಲ್ಲ. ಆದ್ದರಿಂದ ಅವರ ಬಿಡುಗಡೆ ಪ್ರಕ್ರಿಯೆ ಶನಿವಾರ ನಡೆಯಲಿದೆ.
ಜಯಲಲಿತಾ ಬಿಡುಗಡೆಗೊಂಡರೆ ಚೆನ್ನೈಗೆ ತೆರಳಲು ವಿಶೇಷ ವಿಮಾನವನ್ನು ಈಗಾಗಲೇ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸಿದ್ಧಗೊಳಿಸಲಾಗಿದೆ. ಜಯಲಿತಾ ಅವರಿಗೆ ಜಾಮೀನು ಸಿಕ್ಕ ನಂತರ ಪರಪ್ಪನ ಅಗ್ರಹಾರ ಜೈಲಿನ ಮುಂದೆ ಸಂಭ್ರಮಾಚರಣೆ ಮಾಡುತ್ತಿದ್ದ ಅವರ ಅಭಿಮಾನಿಗಳನ್ನು ನಿಷೇಧಾಜ್ಞೆ ಜಾರಿಗೊಳಿಸಿದ ಕಾರಣ ಪೊಲೀಸರು ಒಂದು ಕಿ.ಮೀ.ದೂರ ಕಳುಹಿಸಿದ್ದಾರೆ.












Click it and Unblock the Notifications