ಜಾರ್ಖಂಡ್‌ನಲ್ಲಿ ಆಸ್ತಿ ವಿವಾದ: ಬೆಂಗಳೂರಿನಲ್ಲಿ ಕೊಲೆ

ಜಾರ್ಖಂಡ್ ಮೂಲದ ಮನೋಜ್(26)ಕೊಲೆಯಾದ ವ್ಯಕ್ತಿ. ರಾಘವೇಂದ್ರ ಕಾಲೊನಿಯಲ್ಲಿ ಈ ಘಟನೆ ನಡೆದಿದ್ದು ಯಶವಂತಪುರ ಪೊಲೀಸರು ಶಾರದವುರ ಎಂಬಾತನನ್ನು ಬಂಧಿಸಿದ್ದಾರೆ.
ಮೆಟ್ರೊದಲ್ಲಿ ಗುತ್ತಿಗೆ ಆಧಾರದ ಮೇಲೆ ಪೇಟಿಂಗ್ ಕೆಲಸ ಮಾಡಿಕೊಂಡಿದ್ದ ಸಹೋದರರು, ತುಮಕೂರು ರಸ್ತೆಯ ರಾಘವೇಂದ್ರ ಲೇಔಟ್ ಶೆಡ್‌ವೊಂದರಲ್ಲಿ ವಾಸವಿದ್ದರು.
ಸಹೋದರರಿಬ್ಬರು ಜಮೀನು ಹಂಚಿಕೆಯ ಸಂಬಂಧ ಮೇ ಮೊದಲ ವಾರ ಜಾರ್ಖಂಡ್‌ಗೆ ಹೋಗಿದ್ದರು. ಒಟ್ಟು ಐದು ಎಕರೆ ಭೂಮಿಯಲ್ಲಿ ಮನೋಜ್‌ಗೆ 3 ಎಕರೆ ಹಾಗೂ ಶಾರದವುರಾಗೆ 2 ಎಕರೆ ಜಮೀನು ಹಂಚಿಕೆಯಾಗಿತ್ತು. ಒಂದು ಎಕರೆ ಭೂಮಿ ಕಡಿಮೆ ನೀಡಿದ್ದಕ್ಕೆ ಸಿಟ್ಟಾಗಿ ಜಗಳ ತೆಗೆದು ಅಣ್ಣನಿಗೆ ದೊಣ್ಣೆಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ.
ಸ್ಥಳೀಯ ನಿವಾಸಿಗಳು ತೀವ್ರಗಾಯಗೊಂಡ ಮನೋಜ್‌ನನ್ನು ತಕ್ಷಣವೇ ನಿಮ್ಹಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಜನರೇ ಮಂಗಳವಾರ ರಾತ್ರಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications