ಸಿಎಎಫ್ ಸಲ್ಲಿಸದಿದ್ದರೆ ಕೇಬಲ್ ಕಟ್

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಕರ್ನಾಟಕ-ಕೇರಳ ವಿಭಾಗ ಸಲಹೆಗಾರ ಡಾ. ಸಿಬಿಚ್ಚನ್ ಕೆ.ಮ್ಯಾಥ್ಯೂ, ಗ್ರಾಹಕ ಅರ್ಜಿ ನಮೂನೆ ಅರ್ಜಿಯನ್ನು ಜ.31ರೊಳಗೆ ಸಲ್ಲಿಸದಿದ್ದರೆ, ಕೇಬಲ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. [ಸಿಎಎಫ್ ಸಲ್ಲಿಸಲು ಜ.31 ಅಂತಿಮ ಗಡುವು]
ಗುಡುವು ವಿಸ್ತರಣೆ ಆಗುತ್ತದೆ ಎಂದು ಕಾದು ಕುಳಿತುಕೊಳ್ಳುವ ಹಾಗಿಲ್ಲ. ಏಕೆಂದರೆ, ಸಿಎಎಫ್ ಸಲ್ಲಿಕೆಗೆ ಮೂರು ಬಾರಿ ಗಡುವು ನೀಡಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ಶೇ.80 ಹಾಗೂ ಮೈಸೂರಿನಲ್ಲಿ ಶೇ.90ರಷ್ಟು ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದೆ. ಆದ್ದರಿಂದ ಗ್ರಾಹಕರಿಗೆ ಜ.31ರ ಗಡುವು ನೀಡಿದ್ದು, ನಂತರವೂ ಸಲ್ಲಿಸದಿದ್ದರೆ, ಕೇಬಲ್ ಪ್ರಸಾರ ಸ್ಥಗಿತಗೊಳಿಸಲು ನಿರ್ದೇಶನ ನೀಡಲಾಗಿದೆ. [ಕೇಬಲ್ ಬಿಲ್ ಹೆಚ್ಚಳ]
ನೀವು ನಿಮ್ಮ ಕೇಬಲ್ ಆಪರೇಟರ್ ಗಳನ್ನು ಸಂಪರ್ಕಿಸಿ ಸಿಎಎಫ್ ಭರ್ತಿ ಮಾಡಿ ಕೊಡಬಹುದು. ಪ್ರತಿಯೊಬ್ಬ ಕೇಬಲ್ ಟಿ.ವಿ. ಗ್ರಾಹಕರು ತಮ್ಮ ಹೆಸರು, ವಿಳಾಸ, ಯಾವ ಚಾನೆಲ್‌ಗಳು ಇಷ್ಟ, ಯಾವ ರೀತಿ ಹಣ ಪಾವತಿಸುತ್ತೀರಾ ಮುಂತಾದ ವಿವರಗಳನ್ನು ಕನ್‌ಸ್ಯೂಮರ್ ಅಪ್ಲಿಕೇಷನ್ ಫಾರಂ(ಸಿಎಎಫ್) ಅಲ್ಲಿ ನಮೂದಿಸಬೇಕಾಗುತ್ತದೆ.
ಟ್ರಾಯ್ ಕೇಬಲ್ ಆಪರೇಟರ್ ಗಳಿಗೆ ನೀಡಿರುವ ನಿರ್ದೇಶನದ ಅನ್ವಯ ನೀವು ಸಿಎಎಫ್ ಭರ್ತಿ ಮಾಡಿಕೊಡದಿದ್ದರೆ, ನಿಮ್ಮ ಮನೆ ಕೇಬಲ್ ಸಂಪರ್ಕ ಕಡಿತಗೊಳ್ಳಲಿದೆ ಮತ್ತು ನೀವು ಟಿವಿ ಆನ್ ಮಾಡಿದ ಕೂಡಲೆ ಪರದೆಯ ಮೇಲೆ ನಿಮ್ಮ ಸಿಎಎಫ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿರಿ ಎಂಬ ಸಂದೇಶ ಬರಲಿದೆ.











Click it and Unblock the Notifications