ಶನಿವಾರಕ್ಕೊಮ್ಮೆ ನಿಗದಿಯಾದ ಸಿಎಂ ಜನತಾ ದರ್ಶನಕ್ಕೆ ಚಾಲನೆ
Recommended Video

ಬೆಂಗಳೂರು, ಸೆಪ್ಟೆಂಬರ್ 1: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರ ಅಧಿಕೃತ ನಿವಾಸ ಜೆಪಿನಗರದಲ್ಲಿ ಮನೆಮುಂದೆ ಪ್ರತಿನಿತ್ಯ ಸಾವಿರಾರು ಜನರ ಸಾರ್ವಜನಿಕರು ಸಿಎಂ ಭೇಟಿ ಮಾಡಲು ಬರುವುದನ್ನು ತಪ್ಪಿಸಲು ಇನ್ನುಮುಂದೆ ಪ್ರತಿ ಶನಿವಾರ ಮಾತ್ರ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಯಲಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿ ಪ್ರತಿದಿನ ಎಚ್‌ಡಿ ಕುಮಾರಸ್ವಾಮಿ ಜನತಾ ದರ್ಶನ ನಡೆಸುವರೆಂದು ರಜ್ಯದ ನಾನಾ ಕಡೆಗಳಿಂದ ಸಾವಿರಾರು ಜನರು ಬರುತ್ತಿದ್ದರು.
ಅನೇಕ ಸಲ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಇಲ್ಲದ ಸಂದರ್ಭದಲ್ಲೂ ಮಹಿಳೆಯರು, ಮಕ್ಕಳು, ಅಂಗವಿಕಲರು, ವೃದ್ಧರು ಹೀಗೆ ಸಾವಿರಾರು ಜನ ಜೆಪಿನಗರದ ನಿವಾಸ ಬಳಿ ಕಾಯುತ್ತಿದ್ದುದನ್ನು ತಪ್ಪಿಸಲು ಸ್ವತಃ ಸಿಎಂ ಕುಮಾರಸ್ವಾಮಿ ಪ್ರತಿದಿನ ಜನತಾ ದರ್ಶನ ಇರುವುದಿಲ್ಲ ಎಂದು ಘೋಷಿಸಿದ್ದರು.

ಜತೆಗೆ ಶನಿವಾರ ಮಾತ್ರ ಗೃಹ ಕಚೇರಿ ಕೃಷ್ಣಾದಲ್ಲಿ ಒಂದು ದಿನ ಜನತಾ ದರ್ಶನ ನಡೆಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಒಂದರಂದು ಶನಿವಾರ ಮೊದಲ ಶನಿವಾರದ ಜನತಾ ದರ್ಶಮ ನಡೆಯಲಿದ್ದು, ಈಗಾಗಲೇ ಬೆಳಗ್ಗೆಯಿಂದಲೇ ಸಾವಿರಾರು ಜನ ಕೃಷ್ಣಾದೆದುರು ಮುಖ್ಯಮಂತ್ರಿಗಳಿಗಾಗಿ ಕಾಯುತ್ತಿದ್ದಾರೆ.
2006ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕುಮಾರಸ್ವಾಮಿ ಜನತಾ ದರ್ಶನ ಆರಂಭಿಸಿದ್ದರು.ಹೀಗಾಗಿ ಜನತಾ ದರ್ಶನಕ್ಕೆ ಹೆಸರಾದ ಕುಮಾರಸ್ವಾಮಿ ಆಡಳಿತ ನಡೆಸಲು ಕಷ್ಟವಾಗುವಷ್ಟರ ಮಟ್ಟಿಗೆ ನಿತ್ಯ ಜನ ಹರಿದುಬರುತ್ತಿದ್ದರು.
ಇನ್ನು ಮುಂದೆ ಶನಿವಾರ ಬೆಳಿಗ್ಗೆ 11 ರಿಂದ ಸಂಜೆ 4:30ರ ವರವರೆಗೆ ಮಾತ್ರ ಸಿಎಂ ಅವರು ಸಾರ್ವಜನಿಕರನ್ನು ಭೇಟಿ ಆಗಲಿದ್ದಾರೆ.
ಹೀಗಾಗಿ ಅದಕ್ಕೊಂದು ಶಿಸ್ತು ತರಲು ಜನತಾ ದರ್ಶನ ದಿನವನ್ನು ನಿಗದಿ ಮಾಡಲಾಗಿದೆ. ಜನತಾದರ್ಶನದ ಕೋಶ ಅಧಿಕಾರಿಗಳು ಹಾಜರಿದ್ದು ಜನರಿಂದ ಸಿಎಂ ಜತೆ ಅಧಿಕಾರಿಗಳು ಖೂಡ ಜನರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.












Click it and Unblock the Notifications