ಜೈಲಿನಿಂದ ಹೊರ ಬಂದ ಗಾಲಿ ರೆಡ್ಡಿ ಬೆಂಜ್ ನಲ್ಲಿ ಹೊರಟ್ರು
ಬೆಂಗಳೂರು,ಜ.23: ಸುಮಾರು ಮೂರೂವರೆ ವರ್ಷಗಳಿಂದ ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನರೆಡ್ಡಿ ಬಿಡುಗಡೆ ಗೊಂಡಿದ್ದಾರೆ. ಜೈಲಿನಿಂದ ಹೊರ ಬಂದ ಗಾಲಿ ರೆಡ್ಡಿ ಅವರನ್ನು ಸ್ವಾಗತಿಸಲು ಅಭಿಮಾನಿಗಳು, ಆಪ್ತರು, ಸಂಬಂಧಿಕರು ಜೈಲಿನ ಸುತ್ತಾ ಮುತ್ತಾ ನೆರೆದಿದ್ದರು.ಶುಕ್ರವಾರ ಬೆಂಗಳೂರಿನಲ್ಲೇ ಉಳಿಯಲಿರುವ ರೆಡ್ಡಿ ಅವರು ನಾಳೆ ತಿರುಪತಿಗೆ ತೆರಳಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಸುತ್ತಾ ಮುತ್ತಾ ಗುರುವಾರದಿಂದಲೇ ನಿಷೇಧಾಜ್ಞೆ ಹೇರಲಾಗಿತ್ತು. ರೆಡ್ಡಿ ಅಭಿಮಾನಿಗಳ ಅತಿರೇಕದ ವರ್ತನೆ ಹತ್ತಿಕ್ಕಲು ಎಸ್ ಪಿ ರೋಹಿಣಿ ನೇತೃತ್ವದ ಪೊಲೀಸರು ಶ್ರಮಿಸಿದರು. ರೆಡ್ಡಿ ಭಾವಚಿತ್ರವಿರುವ ಪೋಸ್ಟರ್ ಗೆ ಹಾಲಿನ ಅಭಿಷೇಕ ನಡೆದಿದೆ. ಶುಕ್ರವಾರ ಶುಭ ದಿನವಾಗಿದ್ದು, ನಮ್ಮ ಅಣ್ಣನಿಗೆ ಒಳ್ಳೆಯದಾಗಲಿದೆ. ರೆಡ್ಡಿಗೆ ಜೈ ಎಂದು ಅಭಿಮಾನಿಗಳು ಜೈಕಾರ ಹಾಕಿದರು. [ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು ಮಂಜೂರು]

ಯಮಗಂಡಕಾಲದ ವಿಳಂಬ: 3.10 ರಿಂದ 4.29 ರ ತನಕ ಯಮಗಂಡಕಾಲವಿರುತ್ತು. ಈ ವಿಘಳಿಗೆ ಕಳೆದುಕೊಂಡು ಜನಾರ್ದನ ರೆಡ್ಡಿ ಬಿಡುಗಡೆಗೊಂಡರು. ಹೀಗಾಗಿ 4.40ರ ನಂತರ ಜೈಲಿನಿಂದ ಹೊರಬಂದರು. [ಚಿತ್ರಸುದ್ದಿ: ಅಗ್ರಹಾರದಿಂದ ಜರ್ಮನಿ ಕಾರಿನಲ್ಲಿ ಹೊರಬಂದ ರೆಡ್ಡಿ]
ಅವರನ್ನು ಕರೆದೊಯ್ಯಲು ರೆಡ್ಡಿ ಕುಟುಂಬದ ಸದಸ್ಯರು, ಸಂಸದ ಶ್ರೀರಾಮುಲು, ಬಳ್ಳಾರಿಯಿಂದ ಬಂದಿರುವ ಮುನ್ನೂರಕ್ಕೂ ಅಧಿಕ ಅಭಿಮಾನಿಗಳು ಸಂಭ್ರಮದಿಂದ ಕುಣಿದಾಡಿದರು, ಸಿಹಿ ಹಂಚಿ, ಪಟಾಕಿ ಸಿಡಿಸಿದರು.
ಮನೆ ಸಿಕ್ಕಿದೆ: ಜನಾರ್ದನ ರೆಡ್ಡಿ ಅವರು ಬೆಂಗಳೂರಿನಲ್ಲಿರುವ ಬಿ ಶ್ರೀರಾಮುಲು ಅವರ ನಿವಾಸಕ್ಕೆ ತೆರಳಲಿದ್ದು, ಮರ್ಸೀಡಿಸ್ ಬೆಂಜ್ ಕಾರಿನಲ್ಲೇ ಚಿತ್ರದುರ್ಗಕ್ಕೆ ಇಂದೇ ರಾತ್ರಿಯೊಳಗೆ ತಲುಪುವ ನಿರೀಕ್ಷೆಯಿದೆ. ಚಿತ್ರದುರ್ಗದಲ್ಲಿ ನೆಲೆಸುವ ಸುದ್ದಿ ಸಿಕ್ಕಿದೆ. [ಜನಾರ್ದನ ರೆಡ್ಡಿಗೆ 2 BHK ಮನೆ]
ಈ ಹಿಂದೆ ಬಾಡಿ ವಾರೆಂಟ್ ಮೇಲೆ ಹೈದರಾಬಾದಿನ ನಾಂಪಲ್ಲಿ ಜೈಲಿನಿಂಡ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿಗೆ ಗಾಲಿ ರೆಡ್ಡಿ ಅವರನ್ನು ಕರೆ ತಂದಾಗ ನಡೆದಿದ್ದ ಮಾಧ್ಯಮ+ಪೊಲೀಸ್+ವಕೀಲರ ನಡುವಿನ ಜಟಾಪಟಿಯ ದೃಶ್ಯಗಳನ್ನು ಯಾರೂ ಮರೆತಿಲ್ಲ. ಹೀಗಾಗಿ ಪರಪ್ಪನ ಅಗ್ರಹಾರ ಸುತ್ತಾ ಮುತ್ತಾ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. [ಬಳ್ಳಾರಿಯಲ್ಲಿ ಸಂಭ್ರಮವೋ ಸಂಭ್ರಮ]
ಓಬಳಾಪುರಂ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂಕೋರ್ಟ್ ನಿಂದ ಗಾಲಿರೆಡ್ಡಿಗೆ ಜಾಮೀನು ಮಂಜೂರಾಗಿತ್ತು. ಅದರೆ, ಅಧಿಕೃತ ಆದೇಶ ಪ್ರತಿ ಹೈದರಾಬಾದಿನ ವಿಶೇಷ ನ್ಯಾಯಾಲಯ ತಲುಪಿ ನಂತರ ನಗರದ ಕೋರ್ಟಿಗೆ ಬಂದು ಪರಪ್ಪನ ಅಗ್ರಹಾರ ಜೈಲು ತಲುಪುವುದು ವಿಳಂಬವಾಯಿತು.












Click it and Unblock the Notifications