ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವಾರಿಯರ್ಸ್ ಕಾಪಾಡಿಕೊಳ್ಳಲು ಹೊಸ ತಂತ್ರಜ್ಞಾನ

|
Google Oneindia Kannada News

ಬೆಂಗಳೂರು, ಜುಲೈ 24: ಬೆಂಗಳೂರು ಮೂಲದ ಆರೋಗ್ಯ ಉತ್ಪನ್ನ ಅಭಿವೃದ್ಧಿ ಕಂಪನಿ ಐಟಿಐಇ ನಾಲೆಜ್ ಸಲ್ಯೂಷನ್ಸ್ ದಕ್ಷಿಣ ಕೊರಿಯಾ ಮೂಲದ ಎಚ್‌ಡಿಟಿ ಕಂಪನಿ ಜೊತೆ ಸೇರಿ ಪೋರ್ಟೇಬಲ್ ಎಕ್ಸ್‌-ರೇ ಯಂತ್ರವನ್ನು ಸಿದ್ಧಪಡಿಸಿದೆ.

Recommended Video

China launches Mars probe during Pandemic | Oneindia Kannada

ಕೊರೊನಾ ಸೋಂಕನ್ನು ಮೊದಲ ಹಂತದಲ್ಲೇ ಗುರುತಿಸಲು ಹಾಗೂ ರೋಗಿಗಳ ಮೇಲೆ ನಿಗಾ ಇರಿಸಲು ವೈದ್ಯರಿಗೆ ಇದು ಸಹಕಾರಿಯಾಗಲಿದೆ.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 'ಕೋವ್ಯಾಕ್ಸಿನ್' ಲಸಿಕೆಯ ಮೊದಲ ಪ್ರಯೋಗದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 'ಕೋವ್ಯಾಕ್ಸಿನ್' ಲಸಿಕೆಯ ಮೊದಲ ಪ್ರಯೋಗ

ಇಂಟರ್‌ನೆಟ್ ಆಫ್ ಥಿಂಗ್ಸ್(ಐಒಟಿ) ಎಂಬುದು ನಮ್ಮ ನಿತ್ಯ ಜೀವನದಲ್ಲಿ ಈಗಾಗಲೇ ಬಳಕೆಯಲ್ಲಿದೆ. ಐಒಟಿ ತಂತ್ರಜ್ಞಾನ ಬಳಸಿ ವಿವಿಧ ಪ್ಯಾರಾಮೀಟರ್‌ನ ರಿಮೋಟ್ ಮಾನಿಟರಿಂಗ್ ಮಾಡಲು ಅವಕಾಶವಿದೆ.

ITIE Company Develops Digital Portable X-ray Machines

ಕ್ಯಾಮರಾ ಬೇಸ್ಡ್ ಎಕ್ಸ್‌ರೇ: ಇನ್ನೊಂದು ಮುಖ್ಯವಾದ ಸಾಧನವೆಂದರೆ ಕ್ಯಾಮರಾ ಬೇಸ್ ಎಕ್ಸ್‌ರೇ ಯಂತ್ರ. ಸಾಮಾನ್ಯವಾಗಿ ಎಕ್ಸ್‌ರೇ ಮಾಡಬೇಕಾದಾಗ ರೋಗಿಯನ್ನೇ ಎಕ್ಸ್‌ರೇ ಕೊಠಡಿಗೆ ಕೊಂಡೊಯ್ಯಲಾಗುತ್ತದೆ.

ಹತ್ತು ಮಂದಿ ಸೋಂಕಿತರು ಬಂದರೆ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಈ ಪೋರ್ಟೆಬಲ್ ಸಾಧನ ಬಳಸಿದರೆ ರೋಗಿ ಇದ್ದಲ್ಲೇ ಎಕ್ಸ್ ರೇ ಸಾಧ್ಯ.ಆ ಕ್ಷಣದಲ್ಲೇ ವೈಫೈ ಮೂಲಕ ವರದಿ ಬಂದು ಸೇರುತ್ತದೆ.

ಇಲ್ಲಿಯವರೆಗೆ ಕೊರೊನಾ ಸೋಂಕು ಕೇವಲ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಯಂತ್ರದ ಮೂಲಕ ವೈರಸ್‌ ಮೇಲೆ ಬೇರೆಯೇ ರೀತಿಯ ಅಧ್ಯಯನ ಮಾಡಬಹುದಾಗಿದೆ.

ಈ ತಂತ್ರಜ್ಞಾನ ಬಳಕೆ ಮಾಡುವುದರಿಂದ ಪದೇ ಪದೇ ರೋಗಿಯ ಹತ್ತಿರ ಹೋಗುವುದನ್ನು ಕೂಡ ತಪ್ಪಿಸಬಹುದು. ದೂರದಿಂದಲೂ ನಿಗಾ ಇರಿಸಬಹುದಾಗಿದೆ.

ಈ ಕುರಿತು ಸಂಸ್ಥಾಪಕ ಡಾ. ಸಂಜೀವ್ ಕುಬಕಡ್ಡಿ ಮಾತನಾಡಿ, ಈ ಎಕ್ಸ್‌ರೇ ಯಂತ್ರವನ್ನು ಡಾರ್ಕ್‌ ರೂಮಿನಲ್ಲೇ ಇಡಬೇಕೆಂದೇನಿಲ್ಲ, ಆಂಬ್ಯುಲೆನ್ಸ್ ಸೇರಿದಂತೆ ಆಸ್ಪತ್ರೆಯ ಹೊರಗೂ ಕೂಡ ಇರಿಸಬಹುದಾಗಿದೆ.ಈ ಯಂತ್ರವು 1.8 ಕೆಜಿಯಷ್ಟಿರುತ್ತದೆ. ಇದು ವರದಿಯನ್ನು ಮೂರೇ ಸೆಕೆಂಟುಗಳಲ್ಲಿ ಎಐ ತಂತ್ರಜ್ಞಾನದಿಂದ ವಾಟ್ಸಪ್ ಅಥವಾ ಇ-ಮೇಲ್ ಮೂಲಕ ಕಳುಹಿಸುತ್ತದೆ.

English summary
A Bengaluru-based healthcare product development company, ITIE Knowledge Solutions, along with a South Korean-based company HDT has developed a Portable X-Ray, equipped with Artificial Intelligence (AI) analysis to help in the early diagnosis and better monitoring of patients infected from the novel coronavirus (COVID-19) disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X