Rain: ಬೆಂಗಳೂರಿನಲ್ಲಿ ಮತ್ತೆ ಶುರುವಾದ ಮಳೆ: ನವರಾತ್ರಿ ಆರಂಭದ ದಿನ ವರುಣನ ಆಗಮನ

ಬೆಂಗಳೂರು ಅಕ್ಟೋಬರ್ 3: ಬೆಂಗಳೂರಿನಲ್ಲಿಂದು ನವರಾತ್ರಿ ಆರಂಭದ ದಿನ ವರುಣನ ಆಗಮನವಾಗಿದೆ. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದ ಜೊತೆಗೆ ಆಗಾಗ ಬಂದು ಹೋಗುತ್ತಿದ್ದ ಸೂರ್ಯ ಈಗ ಸಂಪೂರ್ಣವಾಗಿ ಮರೆಯಾಗಿದ್ದಾನೆ. ಗುಡುಗು ಮಿಂಚು ಸಹಿತ ಮಧ್ಯಾಹ್ನದ ಹೊತ್ತು ಮಳೆ ಬೀಳಲು ಆರಂಭವಾಗಿದೆ.

ಕಳೆದ ದಿನ ರಾತ್ರಿ ಬೆಂಗಳೂರಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿತ್ತು. ಇಂದೂ ಕೂಡ ಮಳೆಯಾಗುವ ಸೂಚನೆಯನ್ನ ಹವಮಾನ ಇಲಾಖೆ ನೀಡಿತ್ತು. ಅಂತೆಯೇ ಮಧ್ಯಾಹ್ನವೇ ಸಿಲಿಕಾನ್ ಸಿಟಿಯಲ್ಲಿ ಮಳೆ ಜೋರಾಗಿದೆ. ನವರಾತ್ರಿ ಹಬ್ಬದ ಆಚರಣೆಯಲ್ಲಿದ್ದ ಜನರಿಗೆ ಮಳೆ ಸಂತೋಷ ತಂದಿದೆ.

It is raining in Bengaluru on the start of Navratri IMD has warned of heavy rain in 3-4 days

ನಗರದ ವಿಜಯನಗರ, ಮೆಜೆಸ್ಟಿಕ್, ರಾಜಾಜಿನಗರ, ಜಯನಗರ, ಗಾಂಧಿ ಬಜಾರ್, ಕೆಆರ್‌ ಮಾರುಕಟ್ಟೆ, ರಾಜರಾಜೇಶ್ವರಿ ನಗರದ ಹಲವೆಡೆ ಮಳೆ ಬೀಳುತ್ತಿದೆ. ಇನ್ನೂ ಹಲವೆಡೆ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಲಕ್ಷಣವಿದೆ. ನವರಾತ್ರಿ ಹಬ್ಬದ ಆರಂಭದ ದಿನವೇ ಮಳೆ ಜೋರಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಸಂಜೆ ವೇಳೆಗೆ ಅಥವಾ ಸಂಜೆ ನಂತರ ಬೆಂಗಳೂರಿನಲ್ಲಿ ಇನ್ನಷ್ಟು ಮಳೆಯಾಗು ಲಕ್ಷಣಗಳು ಇವೆ.

ಇನ್ನೂ ರಾಜ್ಯದ ಹಲವೆಡೆ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಬೆಳಗಾವಿ, ಚಾಮರಾಜನಗರದ ಹಲವೆಡೆ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಭವಿಷ್ಯ ನುಡಿದಿದೆ.

ಇನ್ನೂ ರಾಯಚೂರು, ಕೊಪ್ಪಳ, ಗುಲ್ಬರ್ಗಾ, ಗದಗ, ಹಾವೇರಿ, ಬಳ್ಳಾರಿ, ಧಾರವಾಡ, ಬಿಜಾಪುರ, ಬೀದರ್, ದಾವಣಗೆರೆ, ಬಾಗಲಕೋಟೆ, ಹಾಸನ, ಚಿತ್ರದುರ್ಗ, ತಮಕೂರು, ಮೈಸೂರು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಸಾಧಾರಣ ಮಳೆಯಾಗಲಿದೆ.

ಅಲ್ಲದೆ ಬೀದರ್, ಕಲಬುರಗಿ, ದಾವಣಗೆರೆ, ದಕ್ಷಿಣ ಕನ್ನಡ, ತುಮಕೂರು, ಶಿವಮೊಗ್ಗ, ಉಡುಪಿ, ಧಾರವಾಡ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಗದಗ, ಬೆಳಗಾವಿ, ಧಾರವಾಡ, ಉಡುಪಿ, ಶಿವಮೊಗ್ಗದಲ್ಲಿ ಅಕ್ಟೋಬರ್ 9ರಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+