ಬೆಂಗಳೂರಿನಲ್ಲಿ ಏನಿಲ್ಲ, ಪುಣೆ ಬಿಟ್ಟು ತಪ್ಪು ಮಾಡಿದೆ: ಐಟಿ ಉದ್ಯೋಗಿ ಪೋಸ್ಟ್ ವೈರಲ್, ಕನ್ನಡಿಗರ ವಿರೋಧ!
ಹೆಚ್ಚು ಸಂಬಳದ ಆಸೆಗೆ ಬೆಂಗಳೂರಿಗೆ ಬರಬಾದಿತ್ತು. ಬೆಂಗಳೂರಿಗೆ ಬಂದು ತಪ್ಪು ಮಾಡಿದೆ. ಮಹಾರಾಷ್ಟ್ರದ ಪುಣೆಯಲ್ಲಿನ ಕೆಲಸವೇ ಚೆನ್ನಾಗಿತ್ತು ಎಂದು ಐಟಿ ಉದ್ಯೋಗಿ ಸೋಷಿಯಲ್ ಮೀಡಿಯಾ Linkedinನಲ್ಲಿ ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ. ಈಚೆಗಷ್ಟೇ ಬೆಂಗಳೂರಿಗಿಂತ ನೋಯ್ಡಾ ಬೆಸ್ಟ್ ಎಂದು ಕಾರ್ಪೋರೇಟ್ ಉದ್ಯೋಗಿ ಮಾಡಿದ್ದ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ, ರಸ್ತೆಗಳು ಸರಿ ಇಲ್ಲ ಹಾಗೂ ಪೂರ್ವ ನಿಯೋಜಿತವಲ್ಲದ ನಗರವಾಗಿ ಇದು ಅಭಿವೃದ್ಧಿಯಾಗಿದೆ ಎನ್ನುವ ಪೋಸ್ಟ್ ಅದಾಗಿತ್ತು. ಆ ಪೋಸ್ಟ್‌ಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಅದನ್ನು ಮೀರಿಸುವ ಪೋಸ್ಟ್ ಕಾಣಿಸಿಕೊಂಡಿದೆ.
ಕಳೆದ 2ರಿಂದ 3 ವರ್ಷಗಳಿಂದ ಬೆಂಗಳೂರಿನ ಬಗ್ಗೆ ಈ ಉತ್ತರ ಭಾರತೀಯರು ಮಾಡುತ್ತಿರುವ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಬೆಂಗಳೂರಿನ ಬಗ್ಗೆ ರೀಲ್ಸ್ ಹಾಗೂ ವಿಡಿಯೋಗಳ ಮೂಲಕ ಅವಹೇಳನ ಮಾಡಲಾಗುತ್ತಿತ್ತು. ಇದರ ವಿರುದ್ಧ ಕನ್ನಡಿಗರು ರೊಚ್ಚಿಗೇಳುತ್ತಿದ್ದಂತೆಯೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದೀಗ ಲಿಂಕ್ಡಿನ್ ಹಾಗೂ ಬೇರೆ ಬೇರೆ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಬಾಡಿಗೆ ಬೆಲೆ ಹೆಚ್ಚಾಗುತ್ತಿದೆ. ಬಾಡಿಗೆ ಹಾಗೂ ಭೋಗ್ಯಕ್ಕೆ ಹೆಚ್ಚು ಅಡ್ವಾನ್ಸ್ ಕೇಳುತ್ತಿದ್ದಾರೆ. ಪ್ರಯಾಣ ದರ ದುಬಾರಿಯಾಗಿದೆ ಹಾಗೂ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಮಿತಿ ಮೀರಿದೆ ಎನ್ನುವ ಆರೋಪಗಳು ಹೆಚ್ಚಾಗಿವೆ. ಇದೀಗ ಇದೇ ರೀತಿಯ ಪೋಸ್ಟ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಪುಣೆಯಲ್ಲಿ ವಾರ್ಷಿಕ 18 ಲಕ್ಷದ ಕೆಲಸ ಮಾಡುತ್ತಿದ್ದೆ. ಬೆಂಗಳೂರಿನಲ್ಲಿ ವಾರ್ಷಿಕ 25 ಲಕ್ಷ ರೂಪಾಯಿ ಆಫರ್‌ಗೆ ಆಸೆ ಬಿದ್ದು ನಾನು ಬೆಂಗಳೂರಿಗೆ ಬಂದೆ. ಇದೇ ನಾನು ಮಾಡಿದ ತಪ್ಪು ಅಂತ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಐಟಿ ಕಂಪನಿಯ ಸಾಫ್ಟ್‌ವೇರ್ ಉದ್ಯೋಗಿ ಮಾಡಿರುವ ಪೋಸ್ಟ್ ವೈರಲ್ ಆಗಿದ್ದು. ಕನ್ನಡಿಗರು ನಿಮಗೆ ಬೆಂಗಳೂರಿಗೆ ಬರುವುದಕ್ಕೆ ಹೇಳಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಭಾರತದ ಐಟಿ ರಾಜಧಾನಿ, ಸಿಲಿಕಾನ್ ವ್ಯಾಲಿ ಎನ್ನುವ ಖ್ಯಾತಿ ಗಳಿಸಿರುವ ಬೆಂಗಳೂರಿನಲ್ಲಿ ವೆಚ್ಚಗಳು ಹೆಚ್ಚಾಗಿವೆ. ಆದರೆ, ಮೂಲಸೌಕರ್ಯ ತೀರ ಕಳಪೆಯಾಗಿದೆ ಎಂದು ಹೇಳಲಾಗಿದೆ.
ಮಾರ್ಕೆಟಿಂಗ್ ತಜ್ಞ ಇಶಾನ್ ಅರೋರಾ ಎನ್ನುವವರು ಲಿಂಕ್ಡಿನ್‌ನಲ್ಲಿ ಈ ಪೋಸ್ಟ್ ಮಾಡಿದ್ದಾರೆ. ಟೈರ್ 1 ಸಿಟಿಯಲ್ಲಿ ಬೆಲೆ ಏರಿಕೆ ಹಾಗೂ ಮೂಲಸೌಕರ್ಯ ಕೊರತೆ ಇದೆ. ಮೆಟ್ರೋ ನಗರಗಳಿಗೆ ಹೋಲಿಕೆ ಮಾಡಿದರೆ ಟೈರ್ -2 ಸಿಟಿಗಳೇ ಉತ್ತಮವೇ ಎಂದು ಪ್ರಶ್ನೆ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ ?
ಪುಣೆಯಲ್ಲಿದ್ದ ನನ್ನ ಸ್ನೇಹಿತನೊಬ್ಬ 18 ಲಕ್ಷ ರೂಪಾಯಿ ತೆಗೆದುಕೊಳ್ಳುತ್ತಿದ್ದ. ಆ ಕೆಲಸವನ್ನು ಬಿಟ್ಟು ಬೆಂಗಳೂರಿನಲ್ಲಿ 25 ಲಕ್ಷ ರೂಪಾಯಿ ಕೊಡುವ ಕಂಪನಿಗೆ ಬಂದೆ. ನಗರಕ್ಕೆ ಬಂದು ಒಂದು ವರ್ಷ ಕಳೆದ ಮೇಲೆ ಬೆಂಗಳೂರಿನಿಂದ ಗೆಳೆಯ ಕರೆ ಮಾಡಿದ್ದ. ಬೆಂಗಳೂರಿನ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾನೆ ಎಂದು ಅವರು ಬರೆದುಕೊಂಡಿದ್ದಾರೆ. ಇಶಾನ್, "ನಾನು ನಗರಗಳನ್ನು ಬದಲಾಯಿಸಬಾರದಿತ್ತು. ಪುಣೆ ತುಂಬಾ ಉತ್ತಮವಾಗಿತ್ತು. ಬೆಂಗಳೂರಿನಲ್ಲಿ ವಾರ್ಷಿಕ 25 ಲಕ್ಷ ಬಂದರೂ. ಇಲ್ಲಿ ಏನೂ ಇಲ್ಲ ಅಂತ ಅನಿಸುತ್ತಿದೆ" ಎಂದು ಅವರ ಗೆಳೆಯ ಹೇಳಿರುವುದಾಗಿ ಅವರು ಬರೆದುಕೊಂಡಿದ್ದಾರೆ.

ಶೇ 40ರಷ್ಟು ವೇತನ ಹೆಚ್ಚಳವು ಯೋಗ್ಯವಾದ ಆಯ್ಕೆಯಾಗಿದೆ. ಇದರಿಂದ ನೀವು ಹೆಚ್ಚು ಹಣವನ್ನು ಉಳಿಸಬಹುದು. ಯಾಕೆ ವಾಪಸ್ ಬರ್ತಿದ್ದೀಯಾ ಅಂತ ನಾನು ಅವನನ್ನು ಪ್ರಶ್ನೆ ಮಾಡಿದೆ. ಈ ವೇತನವು ಬೆಂಗಳೂರಿನಲ್ಲಿ ವಾಸಿಸುವುದಕ್ಕೆ ಏನೇನು ಅಲ್ಲ. ಇಲ್ಲಿ ಬಾಡಿಗೆಗಳು ಹೆಚ್ಚಾಗಿವೆ. ಬೆಂಗಳೂರಿನ ಮನೆ ಮಾಲೀಕರು ಜಿಪುಣರು, 3-4 ತಿಂಗಳ ಅಡ್ವಾನ್ಸ್ ಕೇಳುತ್ತಾರೆ. ಟ್ರಾಫಿಕ್ ಜಾಮ್ ಭಯಾನಕವಾಗಿದೆ. ಸಂಚಾರ ಸಾರಿಗೆ ದುಬಾರಿಯಾಗಿದೆ ಎಂದು ಬೆಂಗಳೂರಿನಲ್ಲಿರುವ ಗೆಳೆಯ ಹೇಳಿರುವುದಾಗಿ ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ.












Click it and Unblock the Notifications