Darshan Thoogudeepa: 'ನಾನು ನೋಡಿದಾಗ ವಿಗ್‌ ಇತ್ತು': ಜೈಲಿನಲ್ಲಿ ದರ್ಶನ್‌ ತಲೆ ಬೋಳಿಸಿರುವುದು ಸುಳ್ಳಾ?

ಬೆಂಗಳೂರು, ಜುಲೈ 24: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ತಲೆ ಕೂದಲು ಬೋಳಿಸಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇದು ಸತ್ಯನಾ..? ಸುಳ್ಳಾ..? ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಈ ಪ್ರಶ್ನೆಗೆ ಜೈಲಿನಲ್ಲಿ ದರ್ಶನ್‌ ಭೇಟಿಯಾಗಿರುವ ವ್ಯಕ್ತಿಯೊಬ್ಬರು ಉತ್ತರ ನೀಡಿದ್ದಾರೆ.

ತುವನೂರು ಸಿದ್ಧಾರೂಢ ಎನ್ನುವವರು ಇಪ್ಪತ್ತೆರಡು ವರ್ಷಗಳ ಕಾಲ ಜೈಲಿನಲ್ಲಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ಸನ್ನಢತೆ ಆಧಾರದ ಮೇಲೆ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಗೂ ಮುನ್ನ ಸಿದ್ಧಾರೂಢ ಅವರು ದರ್ಶನ್‌ ಭೇಟಿಯಾಗಿದ್ದಾರೆ ಎನ್ನಲಾಗಿದೆ.

Is It True That Darshan Shaved His Head In Jail Released Jailmate Explained Reality

ಈ ಬಗ್ಗೆ ಥರ್ಡ್‌ ಐ ಎನ್ನುವ ಯುಟ್ಯೂಬ್‌ ಚಾನೆಲ್‌ನಲ್ಲಿ ಸಿದ್ಧಾರೂಢ ಮಾತನಾಡಿದ್ದಾರೆ. ನಾನು ಜೈಲಿನಲ್ಲಿ ದರ್ಶನ್‌ ಅವರನ್ನು ನೋಡಿದಾಗ ವಿಗ್‌ ಇತ್ತು. ತುಂಬಾ ಕೂಲ್‌ ಆಗಿ ಎಲ್ಲರನ್ನೂ ಮಾತನಾಡಿಸುತ್ತಾರೆ. ಆದರೆ ಟಿವಿಯಲ್ಲಿ ನೋಡಿದ ರೀತಿ ಇಲ್ಲ. ತುಂಬಾ ಇಳಿದು ಹೋಗಿದ್ದಾರೆ. ಡಲ್ ಆಗಿದ್ದಾರೆ. ಬಹುಶಃ ತಪ್ಪು ಮಾಡಿದ ಬಗ್ಗೆ ಪಶ್ಚಾತ್ತಾಪ ಶುರುವಾಗಿರಬಹುದು.

ದರ್ಶನ್‌ ಬೇರೆ ಆರೋಪಿಗಳ ಜೊತೆ ಜಗಳವಾಡಲು ಎಲ್ಲಾ ಅವಕಾಶವೇ ಇಲ್ಲ. ಏಕೆಂದರೆ ಅವರನ್ನು ಸಿಂಗಲ್‌ ಸೆಲ್‌ನಲ್ಲಿ ಇಟ್ಟಿರುತ್ತಾರೆ. ಒಬ್ಬರನ್ನೇ ಹಾಕಿರುವಾಗ ಬೇರೆಯವರನ್ನು ಭೇಟಿಯಾಗಲು ಸಾಧ್ಯವಿರುವುದಿಲ್ಲ. ಅವರ ಪ್ರಕರಣದ ಆರೋಪಿಗಳನ್ನೇ ಅವರು ಭೇಟಿಯಾಗಲು ಸಾಧ್ಯವಿಲ್ಲ. ಹೀಗಾಗಿ ಕಿತ್ತಾಡಿರುವುದೆಲ್ಲಾ ಅನುಮಾನ ಎಂದರು.

ನನಗೆ ದರ್ಶನ್‌ ಅವರನ್ನು ನೋಡಿದಾಗ ಖುಷಿ ಆಯ್ತು. ಆದರೆ ಆ ಸ್ಥಿತಿಯಲ್ಲಿ ನೋಡಿದಾಗ ಬೇಸರವಾಯ್ತು. ಯಾಕೆಂದರೆ ನಾನು ಕೂಡ ಅವರ ದೊಡ್ಡ ಫ್ಯಾನ್‌. ಈ ಪ್ರಕರಣದಲ್ಲಿ ದರ್ಶನ್‌ ದುಡುಕಿನ ನಿರ್ಧಾರ ತೆಗೆದುಕೊಂಡರು ಅನಿಸಿತು. ಅಂತ ದೊಡ್ಡ ಸ್ಟಾರ್‌ ಈ ರೀತಿ ಆಯ್ಕೆ ಮಾಡಿಕೊಳ್ಳಬಾರದಿತ್ತು. ಅವರ ಎಲ್ಲಾ ಅಭಿಮಾನಿಗಳಿಗೂ ಹೀಗೆ ಅನಿಸಿರುತ್ತದೆ.

ದರ್ಶನ್‌ ಸರ್‌ ಆಗಿಲೀ ಯಾರೇ ಆಗಲಿ ಕ್ರೈಂ ಅನ್ನು ಆಯ್ಕೆ ಮಾಡಿಕೊಳ್ಳಬಾರದು. ಇದು ತಪ್ಪು. ಇದರಿಂದ ಜೀವನನೇ ಹಾಳಾಗುತ್ತದೆ. ಹೆಸರು ಕೆಟ್ಟು ಹೋಗುತ್ತದೆ. ಒಂದು ಸಣ್ಣ ವಿಚಾರ ಯಾವುದೇ ಆಗಲಿ ಬಗೆ ಹರಿಸಿಕೊಳ್ಳಬಹುದಿತ್ತು ಎಂದು ತಮ್ಮ ಅಭಿಪ್ರಾಯವನ್ನು ಹೇಳಿದರು.

ಇನ್ನು ಜೈಲಿನಲ್ಲೇ ಇದ್ದು ಎಲ್‌ಎಲ್‌ಬಿ ಮಾಡಿರುವ ಸಿದ್ಧಾರೂಡ ದರ್ಶನ್‌ ಪ್ರಕರಣದ ಬಗ್ಗೆ ಮಾತನಾಡಿದ್ದು, ಈ ಪ್ರಕರಣದಲ್ಲಿ ದರ್ಶನ್‌ ಅವರಿಗೆ ಬೇಗ ಜಾಮೀನು ಸಿಗುವ ಸಾಧ್ಯತೆ ಇದೆ. ಚಾರ್ಜ್‌ಶೀಟ್‌ ಹಾಕುವವರೆಗೂ ಜೈಲಿನಲ್ಲಿ ಇರಬೇಕಾಗಬಹುದು. ಆದರೆ ಬೇಗ ಅವರಿಗೆ ಜಾಮೀನು ಸಿಗುತ್ತದೆ. ಚಾರ್ಜ್‌ಶೀಟ್‌ ಎಷ್ಟೇ ಸ್ಟ್ರಾಂಗ್‌ ಇದ್ದರೂ ಬೇಲ್ ಆಗುತ್ತದೆ. ಯಾಕೆಂದರೆ ಇಂತಹ ಅನೇಕ ಪ್ರಕರಣಗಳನ್ನು ನಾವು ಜೈಲಿನಲ್ಲಿ ನೋಡಿದ್ದೇವೆ. ಅದರಲ್ಲೂ ಇವರು ಎ-೨. ಹೀಗಾಗಿ ಅವರಿಗೆ ಬೇಲ್ ಸಿಗುತ್ತದೆ ಎಂದು ಹೇಳಿದರು.

ಇನ್ನು ಜೈಲಿನಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಸಹ ಭೇಟಿಯಾಗಿದ್ದೇನೆ. ನಾನು ಜೆಡಿಎಸ್‌ ಕಾರ್ಯಕರ್ತರ ಅಂತಾ ಅವರಿಗೆ ಹೇಳಿದೆ. ಟೀಶರ್ಟ್ ಮೇಲೆ ಸಹಿ ತೆಗೆದುಕೊಂಡು ಬಂದೆ. ಭಾನುವಾರ ಜೈಲಿನಲ್ಲಿ ಉಪ್ಪಿಟ್ಟು ಕೊಡುತ್ತಾರೆ. ಪ್ರಜ್ವಲ್‌ ರೇವಣ್ಣ ನಮ್ಮ ಎದುರೇ ಉಪ್ಪಿಟ್ಟು ತಿಂದರು. ಅವರು ಜೈಲೂಟನೇ ತಿನ್ನುತ್ತಿದ್ದಾರೆ. ಯಾರೇ ಆದರೂ ಜೈಲು ನರಕನೇ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+