• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನಾರ್ದನ ರೆಡ್ಡಿಗೆ ಪ್ರತಿ ದೀಪಾವಳಿ ಅಮಾವಾಸ್ಯೆ ಕಂಟಕ ಪ್ರಾಯವೇ? ಹೀಗೊಂದು ಜಿಜ್ಞಾಸೆ

|
   ಜನಾರ್ಧನ ರೆಡ್ಡಿಗೆ ದೀಪಾವಳಿ ಅಮಾವಾಸ್ಯೆ ಆಗಿ ಬರೋದಿಲ್ಲ ಯಾಕೆ? | Oneindia Kannada

   ಬೆಂಗಳೂರು, ನವೆಂಬರ್ 10: ಕೇವಲ ಪೊಲೀಸ್ ಪೇದೆ ಮಗನಾಗಿ ಲಕ್ಷಾಂತರ ಕೋಟಿ ರೂಪಾಯಿಗಳ ವ್ಯವಹಾರದ ಗಣಿ ಉದ್ಯಮಕ್ಕೆ ಕೈಹಾಕಿ ಅಪಾರ ಶ್ರೀಮಂತನೆನಿಸಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರಿಗೆ ಪ್ರತಿ ವರ್ಷದ ದೀಪಾವಳಿಯ ಅಮವಾಸ್ಯೆಯ ವೇಳೆಯೇ ವಿಘ್ನ ಎದುರಾಗುತ್ತಿದೆಯೇ?

   ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ಹಬ್ಬದ ಆಸುಪಾಸಿನಲ್ಲೇ ಪ್ರತಿ ಬಾರಿ ಕಾನೂನು ಕಂಟಕ ಜನಾರ್ದನ ರೆಡ್ಡಿಗೆ ಎದುರಾಗುತ್ತಿದೆಯೇ ಎಂಬ ಜಿಜ್ಞಾಸೆ ಇದೀಗ ರೆಡ್ಡಿ ಆಪ್ತ ವಲಯದಲ್ಲಿ ಉಂಟುಮಾಡಿದೆ.

   ಎಂಇಪಿಯ ನೌಹೀರಾ ಶೇಖ್‌ರಿಂದ ಕೋಟ್ಯಂತರ ಹಣ ಪಡೆದಿದ್ದ ರೆಡ್ಡಿ

   ಕಳೆದ ಒಂದು ದಶಕದಲ್ಲಿ ಜನಾರ್ದನ ರೆಡ್ಡಿ ಕಾನೂನು ಎದುರು ಸಂಕಷ್ಟಕ್ಕೆ ಸಿಲುಕಿರುವ ಘಟನೆಗಳು ದೀಪಾವಳಿ ಅಮವಾಸ್ಯೆ ವೇಳೆಯಲ್ಲೇ ಮರುಕಳಿಸಿರುವುದು ಈ ಜಿಜ್ಞಾಸೆಗೆ ಕಾರಣವಾಗಿದೆ. 2011ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೊದಲ ಬಾರಿಗೆ ಬಂಧನಕ್ಕೆ ಒಳಗಾದಾಗ ದೀಪಾವಳಿ ಅಮವಾಸ್ಯೆಗೆ ಕೆಲಸವೇ ದಿನಗಳು ಬಾಕಿ ಇತ್ತು.

   ಜನಾರ್ದನ ರೆಡ್ಡಿ ನಿವಾಸದಲ್ಲೇ ರೆಡ್ಡಿಯನ್ನು ಖೆಡ್ಡಕ್ಕೆ ತಳ್ಳಿದ್ದರು

   ಜನಾರ್ದನ ರೆಡ್ಡಿ ನಿವಾಸದಲ್ಲೇ ರೆಡ್ಡಿಯನ್ನು ಖೆಡ್ಡಕ್ಕೆ ತಳ್ಳಿದ್ದರು

   ಆ ವೇಳೆ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ಬಳ್ಳಾರಿಯಲ್ಲಿರುವ ಜನಾರ್ದನ ರೆಡ್ಡಿಯವರ ನಿವಾಸ ಕುಟೀರದಲ್ಲಿಯೇ ರೆಡ್ಡಿ ಯವರನ್ನು ಖೆಡ್ಡಕ್ಕೆ ತಳ್ಳಿದ್ದರು.

   ಸೆಪ್ಟೆಂಬರ್ 5 2011ರಂದು ಜೈಲು ಸೇರಿದ ಜನಾರ್ದನ ರೆಡ್ಡಿ ಅಲ್ಲಿಂದ ಇಲ್ಲಿಯವರೆಗೂ ರಾಜಕೀಯವಾಗಿ ಮತ್ತೆ ಪುನರ್ ಜೀವನ ಕಾಣಲೇ ಇಲ್ಲ, ಮೊದಲ ಬಾರಿ ಸಿಬಿಐ ಬಂಧಿಸಿದ ವೇಳೆ ದೀಪಾವಳಿ ಅಮವಾಸ್ಯೆಗೆ ಕೇವಲ 15 ದಿನಗಳ ಅಂತರವಿತ್ತು.

   ಎರಡನೇ ಬಾರಿಯೂ ದೀಪಾವಳಿ ಸಂದರ್ಭದಲ್ಲೇ ಜಾಮೀನಿಗೆ ನಿರಾಕರಣೆ

   ಎರಡನೇ ಬಾರಿಯೂ ದೀಪಾವಳಿ ಸಂದರ್ಭದಲ್ಲೇ ಜಾಮೀನಿಗೆ ನಿರಾಕರಣೆ

   ಇದಾದ ನಂತರ 2ನೇ ಬಾರಿ ಜನಾರ್ದನ ರೆಡ್ಡಿ ದೀಪಾವಳಿ ಸಂದರ್ಭದಲ್ಲೇ ಸಂಕಷ್ಟಕ್ಕೆ ಸಿಲುಕಿದ್ದು 2012ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಓಬಳಾಪುರ ಮೈನಿಂಗ್ ಕಾರ್ಪೊರೇಷನ್‌ನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಲು, ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಲಂಚ ನೀಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಜನಾರ್ದನ ರೆಡ್ಡಿಗೆ 2012ರಲ್ಲಿ ದೀಪಾವಳಿ ಅಮವಾಸ್ಯೆ ಸಂದರ್ಭದಲ್ಲೇ ಮತ್ತೊಂದು ಸಂಕಷ್ಟ ಎದುರಾಗಿತ್ತು.

   ಜನಾರ್ದನ ರೆಡ್ಡಿಗೆ ಆಂಬಿಡೆಂಟ್ 20 ಕೋಟಿ ಕೊಟ್ಟಿದ್ದೇಕೆ? ಡೀಟೇಲ್ಸ್ ಇಲ್ಲಿದೆ

   ಜಡ್ಜ್ ಗೆ ಲಂಚ ನೀಡಿದ ಪ್ರಕರಣ

   ಜಡ್ಜ್ ಗೆ ಲಂಚ ನೀಡಿದ ಪ್ರಕರಣ

   ಜಡ್ಜ್‌ಗೆ ಲಂಚ ನೀಡಿದ ಪ್ರಕರಣದಲ್ಲಿ 2011ರ ಸೆಪ್ಟೆಂಬರ್ ಅಂತ್ಯದಲ್ಲಿ ದೀಪಾವಳಿ ಅಮವಾಸ್ಯೆ ಕೆಲವು ದಿನಗಳು ಮುಂಚಿತವಾಗಿರು ವಾಗಲೇ ರೆಡ್ಡಿಗೆ ನ್ಯಾಯಾಲಯ ಜಾಮೀನು ತಿರಸ್ಕರಿಸಿತ್ತು.ಅದಾದ ನಂತರ 2012ರಲ್ಲಿ ಮತ್ತೆ ದೀಪಾವಳಿ ಅಮವಾಸ್ಯೆ ಸಂದರ್ಭದಲ್ಲೇ ಅಸೋಸಿಯೇಟೆಡ್ ಮೈನಿಂಗ್ ಕಾರ್ಪೊರೇಷನ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನ್ಯಾಯಾಲಯ ಮತ್ತೊಮ್ಮೆ ಜಾಮೀನು ನಿರಾಕರಿಸಿತ್ತು.

   ವಂಚನೆ ಕೇಸ್ : ಇಷ್ಟಕ್ಕೂ ಗಾಲಿ ಜನಾರ್ದನ ರೆಡ್ಡಿ ಬಂಧನದ ಅಗತ್ಯವೇನು?

   ಮೂರು ಪ್ರಕರಣಗಳು ದೀಪಾವಳಿಯಲ್ಲೇ ನಡೆದಿತ್ತು

   ಮೂರು ಪ್ರಕರಣಗಳು ದೀಪಾವಳಿಯಲ್ಲೇ ನಡೆದಿತ್ತು

   ಹೀಗೆ ಸತತ ಮೂರು ಪ್ರಕರಣಗಳಲ್ಲಿ ದೀಪಾವಳಿ ಅಮವಾಸ್ಯೆ ಸಂದರ್ಭದಲ್ಲೇ ಕಾನೂನು ಎದುರು ಸೋತು ಶರಣಾಗಿದ್ದ ಜನಾರ್ದನ ರೆಡ್ಡಿ ಇದೀಗ ನಾಲ್ಕನೇ ಬಾರಿಗೆ ದೀಪಾವಳಿ ಅಮವಾಸ್ಯೆಯ ಸಂದರ್ಭದಲ್ಲೇ ಆಂಬಿಡೆಂಟ್ ಮಾರ್ಕೆಟಿಂಗ್ ಕಂಪನಿ ಪ್ರಕರಣದಲ್ಲಿ ಇಡಿ ಜೊತೆ ಅಕ್ರಮ ಡೀಲ್ ಕುದುರಿಸಿದ ಆರೋಪಕ್ಕೆ ಒಳಗಾಗಿ ಗಂಭೀರ ಆಪಾದನೆ ಎದುರಿಸುತ್ತಿದ್ದಾರೆ.

   ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ರೆಡ್ಡಿಗೆ ಬಂಧನ ಭೀತಿ

   English summary
   In a last one decade former minister Janardhana Reddy has been faced many ups and downs in his political and personal career. But during many Diwali festival he had tough time against legal battle as well. Here is the interesting story about.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X