ಇನ್ಮುಂದೆ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಇ-ಕೇಟರಿಂಗ್ ಸೌಲಭ್ಯ-ಐಆರ್‌ಸಿಟಿಸಿ

ಬೆಂಗಳೂರು, ಏಪ್ರಿಲ್ 15 : ಕೊರೊನಾ ಕಡಿಮೆಯಾದ ಬಳಿಕ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಮತ್ತೆ ಪ್ರಯಾಣಿಕರ ಅನೂಕೂಲಕ್ಕಾಗಿ ಇ-ಕೇಟೆರಿಂಗ್ ವ್ಯವಸ್ಥೆಯನ್ನ ಪುನಾರಂಭಿಸಿದೆ. ಆದ್ರೆ ರೈಲ್ವೆ ಪ್ರಯಾಣಿಕರು ಇ-ಕೇಟರಿಂಗ್ ಮೂಲಕ ಫುಡ್ ಆರ್ಡರ್ ಮಾಡಿ ಹಣ ಪಾವತಿಸಿದರೂ ಕೂಡ ಫುಡ್ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಹೀಗಾಗಿ ಈ ಸಮಸ್ಯೆಯನ್ನ ಬಗೆಹರಿಸಲು ಇ-ಕೇಟರಿಂಗ್ ಸೌಲಭ್ಯವನ್ನ ಹೆಚ್ಚಿನ ನಿಲ್ದಾಣಗಳಲ್ಲಿ ವಿಸ್ತರಿಸಲು ಐಆರ್‌ಸಿಟಿಸಿ ನಿರ್ಧರಿಸಿದೆ.

ನೈರುತ್ಯ ರೈಲ್ವೆ ನಿಲ್ದಾಣಗಳಲ್ಲಿ ಇ-ಕೇಟರಿಂಗ್ ವ್ಯವಸ್ಥೆಯನ್ನ ಹೆಚ್ಚಿಸಲು ಐಆರ್‌ಸಿಟಿಸಿ ಮುಂದಾಗಿದೆ. ಇದಕ್ಕಾಗಿ ಎಲ್ಲಾ ನಿಲ್ದಾಣಗಳಲ್ಲಿರುವ ಫುಡ್ ಪ್ಲಾಜಾ ಮತ್ತು ಫಾಸ್ಟ್ ಫುಡ್‌ ಕೇಂದ್ರಗಳಿಗೆ ಇ-ಕೇಟರಿಂಗ್ ಪೋಟರ್ಲ್ ನಲ್ಲಿ ಲೈವ್ ಮಾಡಲು ಸೂಚಿಸಿದ್ದು, ಈ ಮೂಲಕ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಇ-ಕೇಟರಿಂಗ್ ಸೌಲಭ್ಯ ಸಿಗಲಿದೆ ಅಂತ ಐಆರ್‌ಸಿಟಿಸಿ ಹೇಳಿದೆ.

ಪ್ರಸ್ತುತ ಐಆರ್‌ಸಿಟಿಸಿ, ಎಸ್‌ವಿಆರ್‌ ಅಡಿಯಲ್ಲಿ ಈ 10 ರೈಲ್ವೆ ನಿಲ್ದಾಣಗಳಲ್ಲಿ ಲೈವ್ ಕೇಟರಿಂಗ್‌ ಇದೆ. (ಕೃಷ್ಣರಾಜಪುರಂ, ಯಶವಂತಪುರ, ಬೆಂಗಳೂರು ಕಂಟೋನ್ಮೇಂಟ್ ಝೋನ್, ಕೆಎಸ್‌ಆರ್ ಬೆಂಗಳೂರು ನಗರ, ಕೆಂಗೇರಿ, ಮೈಸೂರು, ಅರಸಿಕೆರೆ, ದಾವಣಗೆರೆ, ಹುಬ್ಬಳ್ಳಿ ಮತ್ತು ಬೆಳಗಾವಿ)

IRCTC to Expand e-catering to more railway Stations

ಇನ್ನು ಐಆರ್‌ಸಿಟಿಸಿಯು ರಾಜಧಾನಿ, ಶತಾಬ್ದಿ ಮತ್ತು ಡುರೋಂಟೋ ರೈಲುಗಳಲ್ಲೂ ಕೇಟರಿಂಗ್ ಸೇವೆಯನ್ನ ಒದಗಿಸುತ್ತಿದೆ. ಇದರ ಜೊತೆಗೆ ಸೌತ್ ವೆಸ್ಟರ್ನ್ ರೈಲ್ವೆಯ 7 ವಿಭಾಗಗಳಲ್ಲಿ ನಿಲ್ದಾಣದ ಬಳಿ ಇರುವ ಮಾರಾಟ ಮಳಿಗೆಗಳನ್ನು ಐಆರ್‌ಸಿಟಿಸಿಗೆ ನೀಡಲಾಗಿದೆ. ಇದರಲ್ಲಿ 94 ರೈಲುಗಳನ್ನು ಒಳಗೊಂಡ ಮೂರು ವಿಭಾಗಗಳು ಈಗ ಕಾರ್ಯನಿರ್ವಹಿಸುತ್ತಿವೆ. ಇನ್ನು ಕೆಎಸ್‌ಆರ್ ಬೆಂಗಳೂರು ಸಿಟಿ- ಹುಬ್ಬಳ್ಳಿ, ಸೇಲಂ-ಕೆಎಸ್ಆರ್ ಬೆಂಗಳೂರು ಸಿಟಿ-ಮೈಸೂರು, ಮತ್ತು ಕೆಎಸ್‌ಆರ್ ಬೆಂಗಳೂರು ಸಿಟಿ- ಜೋಲಾರ್‌ಪೇಟ್ ಸೇರಿದಂತೆ ಇತರ ವಿಭಾಗಗಳಿಗೆ ಗುತ್ತಿಗೆದಾರರು ಇಲ್ಲದ ಕಾರಣ ಕೇಟರಿಂಗ್ ಸೇವೆಯನ್ನ ಸ್ಥಗಿತಗೊಳಿಸಲಾಗಿದೆ. ಆದರೆ ಇದನ್ನ ಮತ್ತೆ ಟೆಂಡರ್ ಕರೆದು ಪುನಾರಂಭಿಸಲಾಗುತ್ತದೆ ಅಂತ ಐಆರ್‌ಸಿಟಿಸಿ ತಿಳಿಸಿದೆ.

IRCTC to Expand e-catering to more railway Stations

ಇನ್ನು ಐಆರ್‌ಸಿಟಿಸಿ ಹಲವು ಫಾಸ್ಟ್ ಫುಡ್ ಅಂಗಡಿಗಳು, ರೆಸ್ಟೋರೆಂಟ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರೈಲ್ವೆ ಸ್ಟೇಷನ್ ತಲುಪುವ ಮುನ್ನವೇ ಪ್ರಯಾಣಿಕರು ಆಹಾರವನ್ನು ಬುಕ್‌ ಮಾಡಿಕೊಳ್ಳಬಹುದಾಗಿದೆ. ಸದ್ಯಕ್ಕೆ ಪ್ರಯಾಣಿಕರು ಹಣ ಪಾವತಿ ಮಾಡಿದರೂ ಸಹ ಫುಡ್ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಹಣ ಪಾವತಿಸದರೂ ಫುಡ್ ಸಿಗದ ಪ್ರಯಾಣಿಕರಿಗೆ ಹಣ ಹಿಂತಿರುಗಿಸುವ ಕೆಲಸ ಮಾಡಲಾಗುತ್ತಿದೆ ಅಂತ ಐಆರ್‌ಸಿಟಿಸಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+