ರೈಲ್ವೆ ಸ್ಪೆಷಲ್ : 12 ದಿನಗಳ ಯಾತ್ರೆಗೆ 9,900 ರು
ಬೆಂಗಳೂರು, ಮಾ.15: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಬೇಸಿಗೆ ವಿಶೇಷ ರೈಲುಯಾತ್ರೆ ಏಪ್ರಿಲ್ 11ರಿಂದ ಆರಂಭವಾಗಲಿದೆ. ಇದರ ಜೊತೆಗೆ ದೇಶಿ ಯಾತ್ರಾ ಸ್ಥಳಗಳಿಗೆ ಸಂಪರ್ಕ ಒದಗಿಸುವ ವಿಮಾನ ಯಾತ್ರೆಯನ್ನು ಆಯೋಜಿಸಲಾಗಿದೆ. ಭಾರತ್ ದರ್ಶನ್ ಟೂರಿಸ್ಟ್ ಟ್ರೈನ್ ನಲ್ಲಿ ಸಂಚರಿಸಿ ನಂತರ ದೇಶಿ ವಾಯುಯಾನ ಬಳಸಿ ವಿಶೇಷ ಸೌಲಭ್ಯಗಳನ್ನು ಯಾತ್ರಿಗಳು ಅನುಭವಿಸಬಹುದು.
ಭಾರತ ದರ್ಶನ್ ಯಾತ್ರಾ ರೈಲನ್ನು ಹಿಸ್ಟಾರಿಕಲ್ ಇಂಡಿಯಾ ಎಂದು ಹೆಸರಿಡಲಾಗಿದೆ. ಗೋವಾ, ಪುಷ್ಪರ್, ಜೈಪುರ್, ಅಮೃತ್‌ಸರ್, ಚಂಡೀಗಢ್, ದೆಹಲಿ ಮತ್ತು ಆಗ್ರಾ ಸ್ಥಳಗಳನ್ನು ಸಂದರ್ಶಿಸುವ ಅವಕಾಶವನ್ನು ಯಾತ್ರಾರ್ಥಿಗಳಿಗೆ ನೀಡಿದೆ. [ವೈಷ್ಣೋದೇವಿ ದರ್ಶನಕ್ಕೆ ಒಂದೇ ರೈಲು]
ಈ ರೈಲು ಯಾತ್ರೆ ಸ್ಲೀಪರ್ ದರ್ಜೆಯ ಪ್ರಯಾಣ, ಹವಾನಿಯಂತ್ರಿತ ರಹಿತ, ಉಳಿದುಕೊಳ್ಳುವ ವ್ಯವಸ್ಥೆ, ಧರ್ಮಶಾಲಾ, ಶಾಖಾಹಾರಿ ಊಟ, ಯಾತ್ರಾ ಸ್ಥಳಗಳಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ವಾಹನದ ವ್ಯವಸ್ಥೆ ಮಾಡಲಾಗಿದೆ.

12 ದಿನಗಳ ಯಾತ್ರೆ ಏಪ್ರಿಲ್ 11, 2015ರಿಂದ 22ರ ವರೆಗೆ ನಡೆಯಲಿದೆ. ಒಬ್ಬ ಯಾತ್ರಾರ್ಥಿಗೆ 9,900 ರು.ಗಳನ್ನು ನಿಗದಿಪಡಿಸಲಾಗಿದೆ. ಕರ್ನಾಟಕದ ಯಾತ್ರಾರ್ಥಿಗಳು ಬೆಂಗಳೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ ಇಲ್ಲಿಂದ ರೈಲನ್ನು ಹತ್ತಬಹುದಾಗಿದೆ. ಐಆರ್‌ಸಿಟಿಸಿ ಹಾಗೂ ದೇಶಿ ವಿಮಾನಯಾನ ಸಂಪರ್ಕ ವ್ಯವಸ್ಥೆ ಬೆಂಗಳೂರಿನ ರೈಲು ನಿಲ್ದಾಣದಿಂದಲೂ ಲಭ್ಯವಿದೆ. [ಬಜೆಟ್ ನಲ್ಲಿ ಎಲ್ಲರಿಗೂ ಸುರೇಶ್ ಪ್ರಭು ನೀಡಿದ್ದೇನು?]
ಶಿರಡಿಯಲ್ಲಿ ತಂಗಲು ಅವಕಾಶ: ಯಾತ್ರಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ ನೀಡುವ ಉದ್ದೇಶದಿಂದ ಐಆರ್‌ಸಿಟಿಸಿ ಗುಂಪು ಯಾತ್ರಾ ನಿರ್ಗಮನ ಚಿಂತನೆ ನಡೆಸಿದೆ. ಒಂದು ಗುಂಪಿನಲ್ಲಿ 17 ಯಾತ್ರಾರ್ಥಿಗಳು ಇರುವರು. ಈ ಯೋಜನೆಯು ಏ.12, 19 ಮತ್ತು 24ಕ್ಕೆ ಶಿರಡಿಗೆ ತೆರಳಲಿದೆ.
ಈ ಯಾತ್ರಾ ಗುಂಪು ಶಿರಡಿಯಲ್ಲಿ ಎರಡು ರಾತ್ರಿಗಳಿಗೆ ಉಳಿದುಕೊಳ್ಳುವಂತೆ ರೂಪಿಸಲಾಗಿದೆ. ಹತ್ತಿರದ ಪೂಜಾ ಸ್ಥಳಗಳಾದ ಶನಿಸಿಂಗನಪುರ, ತ್ರಯಂಬಕೇಶ್ವರ ಮತ್ತು ಪಂಚವಟಿ ಸಂದರ್ಶಿಸುವ ಸೌಲಭ್ಯ ಇರುತ್ತದೆ. ಒಬ್ಬ ವ್ಯಕ್ತಿಗೆ 11,542 ರೂ. ದರವಾಗುತ್ತದೆ. [ದೂರು ದಾಖಲಿಸಲು ವೆಬ್ ಸೈಟ್, ಮೊಬೈಲ್ ಅಪ್ಲಿಕೇಶನ್]
ಹೋಗುವ ಮತ್ತು ಹಿಂದಿರುಗುವ ವಿಮಾನ ಪ್ರಯಾಣ ದರ (ಬೆಂಗಳೂರು-ಪುಣೆ-ಬೆಂಗಳೂರು) ಶಿರಡಿಯಲ್ಲಿ ಎರಡು ರಾತ್ರಿ ಹೊಟೇಲ್‌ನಲ್ಲಿ ತಂಗುವ ವ್ಯವಸ್ಥೆ (ಹವಾನಿಯಂತ್ರಿತ ಕೋಣೆ) ಬೆಳಗಿನ ಉಪಹಾರ, ರಾತ್ರಿ ಊಟ, ವಿಮಾನ ನಿಲ್ದಾಣದಿಂದ ನಿಲ್ದಾಣಕ್ಕೆ ಪ್ರಯಾಣ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ನೀಡಲು ಹವಾನಿಯಂತ್ರಿತ ವಾಹನಗಳಲ್ಲಿ ಪ್ರಯಾಣ ವಿಮ ಎಲ್ಲವೂ ಈ ಪ್ಯಾಕೇಜಿನಲ್ಲಿ ಲಭ್ಯವಿದೆ ಎಂದು ಐಆರ್ ಸಿಟಿಸಿ ಪ್ರಕಟಿಸಿದೆ.












Click it and Unblock the Notifications