ರೈಲ್ವೆ ದೂರು ದಾಖಲಿಸಲು ವೆಬ್ ಸೈಟ್, ಮೊಬೈಲ್ ಅಪ್ಲಿಕೇಶನ್
ನವದೆಹಲಿ, ಮಾ. 3 : ಭಾರತೀಯ ರೈಲ್ವೆಗೆ ಸಂಬಂಧಿಸಿದ ದೂರು ಮತ್ತು ಸಲಹೆ ಸೂಚನೆಗಳನ್ನು ಪ್ರಯಾಣಿಕರು ಕುಳಿತಲ್ಲಿಂದಲೇ ದಾಖಲಿಸಬಹುದು. ಇಂಥ ವಿನೂತನ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಸೋಮವಾರ ಜಾರಿ ಮಾಡಿದೆ.
ರೈಲ್ವೆ ಪ್ರಯಾಣಿಕರಿಂದ ದೂರು ಮತ್ತು ಸಲಹೆ ಪಡೆದುಕೊಳ್ಳಲು ರೈಲ್ವೆ ಇಲಾಖೆ ಸೋಮವಾರ ಹೊಸ ವೆಬ್ ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.[ರೈಲ್ವೆ ಬಜೆಟ್ ನಲ್ಲಿ ಎಲ್ಲರಿಗೂ ಸುರೇಶ್ ಪ್ರಭು ನೀಡಿದ್ದೇನು?]

ರೈಲ್ವೆ ಸಚಿವ ಸುರೇಶ್ ಪ್ರಭು ವೆಬ್ ಸೈಟ್ (www.coms.indianrailways.gov.in.) ಅನಾವರಣ ಮಾಡಿದ್ದಾರೆ. ಅಲ್ಲದೇ +91 9717630982 ಕ್ಕೆ ಮೆಸೇಜ್ ಕಳಿಸುವ ಮುಖಾಂತರವೂ ದೂರು ದಾಖಲಿಸಬಹುದು ಎಂದು ತಿಳಿಸಿದ್ದಾರೆ.
ಮೊಬೈಲ್ ಅಪ್ಲಿಕೇಶನ್ ನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ ಸುಧಾರಣೆ ಕ್ರಮ ತೆಗೆದುಕೊಳ್ಳಲು ಈ ವ್ಯವಸ್ಥೆ ನೆರವಾಗಲಿದೆ ಎಂದು ಸುರೇಶ್ ಪ್ರಭು ವಿಶ್ವಾಸ ವ್ಯಕ್ತಪಡಿಸಿದ್ದಾರೆ.[ರೈಲ್ವೆ ಬಜೆಟ್ ಬಗ್ಗೆ ಗಣ್ಯರ ಅಭಿಪ್ರಾಯವೇನು?]
ದೂರು ದಾಖಲಿಸುವುದು ಹೇಗೆ?
* ದೂರು ದಾಖಲಿಸಲು ಇಚ್ಛಿಸುವವರು www.coms.indianrailways.gov.in ಮೂಲಕ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬಹುದು.
* ಇಲ್ಲವೇ ಪ್ರಯಾಣಿಕರು www.coms.indianrailways.gov.in. ತಾಣದ ಮೂಲಕವೂ ದೂರು ದಾಖಲಿಸಬಹುದು.
* +91-9717630982 ಮೆಸೇಜ್ ಮಾಡಿದರೂ ನಿಮ್ಮ ದೂರು ದಾಖಲಾಗುತ್ತದೆ.












Click it and Unblock the Notifications