• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸ್ ವೃತ್ತಿ ಪುರುಷ ಪ್ರಧಾನ: ರೂಪಾ ಮೌದ್ಗಿಲ್

|

ಬೆಂಗಳೂರು, ಜುಲೈ 20: ಪೊಲೀಸ್ ವೃತ್ತಿಯಲ್ಲಿರುವ ಮಹಿಳೆಯರ ಮನೋಭಾವ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ ಎಂದು ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್ ಹೇಳಿದ್ದಾರೆ.

ಐಐಎಂ-ಬಿ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಐಐಎಂಬ್ಯೂ 2018 ಲೀಡರ್‌ಶಿಪ್ ಸಮಾವೇಶದಲ್ಲಿ ನಡೆದ 'ವೃತ್ತಿ ಸ್ಥಳದಲ್ಲಿ ಮಹಿಳೆಯರು' ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ನಮ್ಮ ಬೆಂಗಳೂರು ಪ್ರಶಸ್ತಿ ಬಗ್ಗೆ ತನಿಖೆ ಆಗಲಿ: ರೂಪಾ ಮೌದ್ಗಿಲ್

ಮಹಿಳೆಯರು ಹೆಚ್ಚು ಧೈರ್ಯ ಮತ್ತು ತೊಂದರೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ರೂಪಾ ಪ್ರತಿಪಾದಿಸಿದರು.

ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲ್ ಜನರಲ್ ದಾನಾ ಕುರ್ಶ್ ಮತ್ತು ಬೆಂಗಳೂರು ವಿಜ್ಞಾನ ಗ್ಯಾಲರಿಯ ಸಂಸ್ಥಾಪಕ ನಿರ್ದೇಶಕಿ ಜಾಹ್ನವಿ ಫಾಲ್ಕೆ ಕೂಡ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪೊಲೀಸ್ ವೃತ್ತಿಯು ಪುರುಷ ಪ್ರಧಾನವಾದುದು. ಮಹಿಳೆಯರು ಇಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಮೊದಲ ಪೀಳಿಗೆಯ ಮಹಿಳಾ ಅಧಿಕಾರಿಗಳು (70-80ರ ದಶಕದಲ್ಲಿ ವೃತ್ತಿಗೆ ಸೇರ್ಪಡೆಯಾದವರು) ತಾವು ಪುರುಷರಂತೆ ವರ್ತಿಸಬೇಕು ಎಂದು ಭಾವಿಸಿದ್ದರು.

ಬಳಿಕ, ಎರಡನೆಯ ಪೀಳಿಗೆಯ ಮಹಿಳಾ ಪೊಲೀಸರು (90ರ ದಶಕದಲ್ಲಿ ಸೇರಿಕೊಂಡವರು) ಈ ವೃತ್ತಿಗೆ ಆಹ್ಲಾದಕರ ಮತ್ತು ಮೃದುತ್ವದ ಸ್ಪರ್ಶ ನೀಡಿದರು ಎಂದು ರೂಪಾ ವಿವರಿಸಿದರು.

'ಈಗ ಈ ವೃತ್ತಿಗೆ ಸೇರುವ ಮಹಿಳೆಯರಲ್ಲಿ ತಮ್ಮಿಂದ ಸಾಧ್ಯವಾದ ಉತ್ತಮವಾದುದ್ದನ್ನು ಮಾಡಬೇಕು ಎಂಬ ಗುರಿ ಇದೆ. ನಿಮ್ಮನ್ನು ನೀವು ಬದಲಿಸಿಕೊಳ್ಳುವ ಅಗತ್ಯವಿಲ್ಲ, ನೀವು ಯಾವುದರಲ್ಲಿ ಮುಂದಿದ್ದೀರೋ ಅದನ್ನು ಮಾಡಿ' ಎಂಬ ಧೋರಣೆ ಅವರಲ್ಲಿದೆ' ಎಂದರು.

ಈ ರೀತಿ ಪತ್ರ ಬರೆಯುವುದರಲ್ಲಿ ಪ್ರಯೋಜನ ಇಲ್ಲ: ರೂಪಾ ಡಿ ಮೌದ್ಗಿಲ್

ಕಚೇರಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದು, ಅದನ್ನು ಒಪ್ಪಿಕೊಳ್ಳತಕ್ಕದ್ದಾಗಿದೆ. ಮಹಿಳೆ ಹೆಚ್ಚು ಧೈರ್ಯ ಹಾಗೂ ತೊಂದರೆಗಳನ್ನು ಎದುರಿಸುವ ಸಾಮರ್ಥ್ಯದೊಂದಿಗೆ ಕೆಲಸ ಮಾಡಬೇಕಿದೆ.

ತೊಂದರೆಗಳನ್ನು ಎದುರಿಸುವುದು ಎಂದರೆ, ಬಹುಶಃ ಲೆಕ್ಕಾಚಾರದ ತೊಂದರೆಗಳು. ಆದರೆ, ಇದು ಸ್ಪರ್ಧೆಯಲ್ಲಿ ಮಾತ್ರ ಪ್ರಯೋಜನಕಾರಿ ಆಗಬಹುದು. ನೀವು ಸರಿಯಾದ ದಾರಿಯಲ್ಲಿದ್ದೇನೆ ಎಂದು ತಿಳಿದಿದ್ದರೆ ಅದರೊಂದಿಗೆ ಮುಂದುವರಿಯಿರಿ ಎಂದರು.

ಜೈಲಿನಲ್ಲಿ ವಿಐಪಿಗಳಿಗೆ ನೀಡಿರುವ ಸೌಲಭ್ಯಗಳ ಕುರಿತು ವರದಿ ನೀಡಿದಾಗ, ಅದಕ್ಕೆ ಆಕ್ಷೇಪಗಳು ಬರುತ್ತವೆ ಎನ್ನುವುದು ತಿಳಿದಿದ್ದೆ.

ಗಾಯಕಿಯಾಗಿ ರೂಪಾ ಮೌದ್ಗಿಲ್, ವಿಡಿಯೋ ಆಲ್ಬಂ ನೋಡಿದ್ರಾ?

ಆದರೆ, ನಾವು ಸಾರ್ವಜನಿಕ ಸೇವೆಯಲ್ಲಿ ಇರುವವರು ಮತ್ತು ಸಾರ್ವಜನಿಕರ ಹಣವನ್ನೇ ವೇತನವಾಗಿ ಪಡೆಯುವುದು ಎನ್ನುವುದು ತಿಳಿದಿತ್ತು. ನಾವು ಜವಾಬ್ದಾರಿತನ ಪ್ರದರ್ಶಿಸಬೇಕಾಗುತ್ತದೆ.

ಮಹಿಳೆಯರು ಹೆಚ್ಚು ಮಾತನಾಡುವ ಧೈರ್ಯ ತೋರಿಸಬೇಕು, ನಾವು ಯಾವುದೇ ನಿರ್ಬಂಧಕ್ಕೆ ಒಳಪಟ್ಟಿಲ್ಲ ಎಂದು ರೂಪಾ ಅಭಿಪ್ರಾಯಪಟ್ಟರು.

ಮಹಿಳೆಯರು ಕೆಲವು ನಿರ್ದಿಷ್ಟ ಮನೋಭಾವಗಳಲ್ಲಿ ಬದಲಾವಣೆಯಾಗಬೇಕು ಎಂದು ಅವರು ಪ್ರಸ್ತಾಪಿಸಿದರು.

ಮಹಿಳೆಯರು ಯಾವಾಗಲೂ ತಮ್ಮನ್ನು ಕೆಳಮಟ್ಟದ ಸ್ಥಾನದಲ್ಲಿ ಇರಿಸಿಕೊಳ್ಳುತ್ತಾರೆ. ವೃತ್ತಿಯಲ್ಲಿರುವ ಮಹಿಳೆಯರು ಕೂಡ ಮನೆಯಲ್ಲಿ ತಮ್ಮ ಗಂಡನ ನಂತರದ ಸ್ಥಾನದ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಪುರುಷರು ಮನೆಯನ್ನು ನಿಭಾಯಿಸುತ್ತಾರೆ, ನಾನು ಅದಕ್ಕೆ ನೆರವು ನೀಡುತ್ತೇನೆ ಎಂದೇ ಅವರು ಹೇಳಿಕೊಳ್ಳುತ್ತಾರೆ ಎಂದರು.

ಪುರುಷರು ಮಾಡುವ ಕೆಲಸಗಳನ್ನು ಅನೇಕ ಮಹಿಳೆಯರು ಇನ್ನೂ ಚೆನ್ನಾಗಿ ಮಾಡಬಲ್ಲರು. ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಆಕೆ ಹೇಳಿಕೊಂಡರೂ, ವೃತ್ತಿ ಸ್ಥಳಗಳಲ್ಲಿ ಅಧಿಕಾರದ ಶ್ರೇಣಿ ವ್ಯವಸ್ಥೆ ಇಂದಿಗೂ ಬಲವಾಗಿದೆ ಎಂದು ಜಾಹ್ನವಿ ಫಾಲ್ಕೆ ಹೇಳಿದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IPS Officer Roopa D Moudgil said that the Police force is still male dominated, and women can get sidelined. She was speaking in a panel discussion at IIMBue 2018 Leadership Conclave.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more