Get Updates
Get notified of breaking news, exclusive insights, and must-see stories!

ಬಿಜೆಪಿ ಕಚೇರಿಯಲ್ಲಿ ಯೋಗದ ಕಸರತ್ತು ನಡೆಸಿದ ಯಡಿಯೂರಪ್ಪ

Recommended Video

      International Yoga Day 2018 : ಬಿಜೆಪಿ ಕಚೇರಿಯಲ್ಲಿ ಯೋಗಾಸನ ಮಾಡಿದ ಬಿ ಎಸ್ ಯಡಿಯೂರಪ್ಪ

      ಬೆಂಗಳೂರು, ಜೂನ್ 21: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ವಿವಿಧ ಮುಖಂಡರು ರಾಜ್ಯ ಬಿಜೆಪಿ ಕಚೇರಿಯಲ್ಲಿ ನಾಲ್ಕನೇ ವಿಶ್ವ ಯೋಗ ದಿನಾಚರಣೆ ಆಚರಿಸಿದರು.

      ಬಿಜೆಪಿ ಮಹಿಳಾ‌ ಘಟಕದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಮಂಜುಳಾ‌ ಸೇರಿದಂತೆ ಪಕ್ಷದ ಹಲವು ಮುಖಂಡರು, ಸದಸ್ಯರು ಭಾಗಿಯಾಗಿದ್ದರು.

      ಪಕ್ಷದ ಹಿರಿಯ ನಾಯಕರು ಮತ್ತು ಕಿರಿಯರು ಜತೆಗೂಡಿ ಸೂರ್ಯನಮಸ್ಕಾರ, ಪ್ರಾಣಾಯಾಮ ಸೇರಿದಂತೆ ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ನಾಲ್ಕನೇ ಯೋಗ ದಿನಾಚರಣೆಯನ್ನು ಆಚರಿಸಿದರು.

      international yoga day: yeddyurappa performs yoga in bjp office

      ಯುವಕರು ನಾಚುವಂತೆ ಹಿರಿಯರು ಅನೇಕ ಕಷ್ಟಕರ ಯೋಗದ ಪಟ್ಟುಗಳನ್ನು ಸಲೀಸಾಗಿ ನಿಭಾಯಿಸಿ ಗಮನ ಸೆಳೆದರು. ಇನ್ನು ಕೆಲವರಿಗೆ ವಯಸ್ಸಿನ ಕಾರಣ ದೇಹ ಸಹಕರಿಸದಿದ್ದರೂ, ಅದರಲ್ಲಿಯೂ ಕಸರತ್ತು ನಡೆಸಿ ಯುವಜನರಿಗೆ ಸ್ಫೂರ್ತಿ ನೀಡಿದರು.

      ಯೋಗ ಪ್ರದರ್ಶನದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ, ಸ್ವಾಮಿ ವಿವೇಕಾನಂದರು ಹೇಳಿದಂತೆ ಯೋಗ ಮನಸ್ಸನ್ನು ಶಕ್ತಿಯುತ ಮತ್ತು ಶಿಸ್ತುಬದ್ಧಗೊಳಿಸುತ್ತದೆ.

      ಯೋಗ ದೈಹಿಕ ವ್ಯಾಯಾಮ ಮಾತ್ರವಲ್ಲ, ಅದು ಶರೀರ, ಬುದ್ಧಿ, ಮನಸ್ಸುಗಳಲ್ಲಿ ಸಮತೋಲನ ಸಾಧಿಸುವ ಜೀವನ ವಿಧಾನವಾಗಿದೆ. ನಮ್ಮಲ್ಲಿನ ಶಕ್ತಿಯನ್ನು ಕಂಡುಕೊಳ್ಳುವುದೇ ಯೋಗ. ಪುರಾತನ ಯೋಗ ಪದ್ಧತಿ ನಮ್ಮ ದೇಶದ ಹೆಮ್ಮೆ ಎಂದರು.

      international yoga day: yeddyurappa performs yoga in bjp office

      ದೇಹವು ದೇವಸ್ಥಾನವಿದ್ದಂತೆ. ಅದನ್ನು ಶುದ್ದಿಯಾಗಿಟ್ಟುಕೊಳ್ಳುವುದೇ ಯೋಗ. ಯೋಗ ಇಂದು ಜಾಗತಿಕ ಮನ್ನಣೆ ಪಡೆದಿದೆ. ಜೂನ್ 21ಅನ್ನು ಅಂತರರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಇದರ ಯಶಸ್ಸು ನರೇಂದ್ರ ಮೋದಿ ಅವರಿಗೆ ಸಲ್ಲಬೇಕು.

      ಯೋಗ ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುವ ಅಗತ್ಯವಿದೆ. ಎಲ್ಲರೂ ದೈಹಿಕ ಮತ್ತು ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕು.

      ಯೋಗಾಸನವು ಯೋಗ ದಿನಾಚರಣೆ ದಿನಗೆ ಮಾತ್ರ ಸೀಮಿತವಾಗಬಾರದು. ಯೋಗ ನಮ್ಮ ಬದುಕಿನ ದೈನಂದಿನ ಕ್ರಿಯೆ, ಆಚರಣೆಯ ಅವಿಭಾಜ್ಯ ಅಂಗವಾಗಬೇಕು. ಪ್ರತಿದಿನವು ಯೋಗ ದಿನವಾಗಿರಬೇಕು ಎಂದು ಹೇಳಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+