ಬೆಂಗಳೂರಿನ 50 ಜಂಕ್ಷನ್‌ಗಳಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಅಳವಡಿಕೆ, ಎಲ್ಲೆಲ್ಲಿ ತಿಳಿಯಿರಿ
ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನಲ್ಲಿ ಎಲ್ಲಾ ರೀತಿಯ ರಸ್ತೆ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಹದ್ದಿನ ಕಣ್ಣು ಇರಿಸಿರುವ ನಗರ ಪೊಲೀಸರು ದಟ್ಟಣೆ ಇರುವ 50 ಜಂಕ್ಷನ್‌ಗಳನ್ನು ಐಟಿಎಂಎಸ್ ಕ್ಯಾಮಾರಗಳನ್ನು ಅಳವಡಿಸಿ ಅನುಷ್ಠಾನಕ್ಕೆ ತಂದಿದ್ದಾರೆ.
ಇದು ದಿನದ 24 ಗಂಟೆಗಳು ಹಾಗೂ ವರ್ಷದ 365 ದಿನಗಳು ಎಲ್ಲಾ ರೀತಿಯ ನಿಯಮ ಉಲ್ಲಂಘನೆಗಳಿಗಾಗಿ ಎಲ್ಲಾ ವಾಹನಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಇನ್ನು ರಸ್ತೆ ನಿಯಮ ಉಲ್ಲಂಘಿಸುವವರಿಗೆ ತಕ್ಕ ಪಾಠ ಕಲಿಸಲು ಸಂಚಾರಿ ನಿಯಮಗಳನ್ನು ಕಟ್ಟನಿಟ್ಟಾಗಿ ಜಾರಿಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ಬೆಂಗಳೂರು ಟ್ರಾಫಿಕ್ ಪೋಲೀಸ್ ದಾಖಲೆಗಳ ಪ್ರಕಾರ ನಗರವು ಈಗ ಸಂಪರ್ಕರಹಿತ ಜಾರಿ (ಕಣ್ಗಾವಲು ಕ್ಯಾಮೆರಾಗಳನ್ನು ಬಳಸಿ) ಮೂಲಕ 96% ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡುತ್ತಿದೆ. ಅಂಕಿಅಂಶಗಳು 2014 ರಲ್ಲಿ ಕೇವಲ 38% ಎಂದು ತೋರಿಸುತ್ತವೆ, ಇದು 2020 ರಲ್ಲಿ 75% (ಕೋವಿಡ್-19 ವರ್ಷ), 2021 ರಲ್ಲಿ 83.4% ಮತ್ತು 2022 ರಲ್ಲಿ 92% ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಉಲ್ಲಂಘಿಸುವವರಿಗೆ ಸ್ಮಾರ್ಟ್ ಎನ್‌ಫೋರ್ಸ್‌ಮೆಂಟ್ ಸೆಂಟರ್ ಮೂಲಕ ಚಲನ್‌ಗಳನ್ನು ಕಳುಹಿಸಲಾಗುತ್ತದೆ. ರಸ್ತೆ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ITMS) ಅನ್ನು 2022ರಲ್ಲಿ ಪರಿಚಯಿಸಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾಗಳು ಏಳು ವಿಧದ ಸಂಚಾರ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತದೆ ಮತ್ತು ವಾಹನ ಮಾಲೀಕರಿಗೆ ನಿಯಮ ಉಲ್ಲಂಘನೆಗೆ ದಂಡದ ಚಲನ್‌ಗಳನ್ನು ಕಳುಹಿಸುತ್ತದೆ.
ಈ ವ್ಯವಸ್ಥೆಯು ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳು ಮತ್ತು ಈ ಜಂಕ್ಷನ್‌ಗಳಲ್ಲಿ ಸ್ಥಾಪಿಸಲಾದ 80 ರೆಡ್ ಲೈಟ್ ಉಲ್ಲಂಘನೆ ಪತ್ತೆ (RLVD) ಕ್ಯಾಮೆರಾಗಳೊಂದಿಗೆ ಕೃತಕ ಬುದ್ದಿಮತ್ತೆಯಿಂದ ಕಾರ್ಯ ನಿರ್ವಹಿಸುತ್ತದೆ. ಈ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತದೆ ಮತ್ತು ಚಲನ್‌ಗಳನ್ನು ಉತ್ಪಾದಿಸುತ್ತವೆ. ಬಳಿಕ ಅವುಗಳನ್ನು SMS ಮತ್ತು ಪೇಪರ್ ಚಲನ್‌ಗಳ ಮೂಲಕ ಉಲ್ಲಂಘಿಸುವವರಿಗೆ ಕಳುಹಿಸಲಾಗುತ್ತದೆ.
ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅಳವಡಿಸಿರುವ ಜಂಕ್ಷನ್‌ಗಳೆಂದರೆ, 1.8ನೇ ಮುಖ್ಯ 9ನೇ ಕ್ರಾಸ್ ಜೆಪಿ ನಗರ, 2. ಆಡುಗೋಡಿ ಮುಖ್ಯ ರಸ್ತೆ ಆಡುಗೋಡಿ ಜಂಕ್ಷನ್, 3. ಅಯ್ಯಪ್ಪ ನಗರ - ಬಟ್ಟರಹಳ್ಳಿ ರಸ್ತೆ ಬಸವನಪುರ ಕ್ರಾಸ್, 4.ಬಾಣಸವಾಡಿ 7ನೇ MN ರಸ್ತೆ, 2ನೇ ಕ್ರಾಸ್ ಓಂ ಶಕ್ತಿ ದೇವಸ್ಥಾನ, 5. ಬಾಷಾಯಂ ವೃತ್ತ ರಾಜಾಜಿನಗರ, 6. ಭಾಷ್ಯಂ ವೃತ್ತ, 7. BTM 29ನೇ ಮುಖ್ಯ AXA ಸಿಗ್ನಲ್, 8. CAL ಕ್ರಾಸ್, 9. ಚಾಮರಾಜಪೇಟೆ 5ನೇ ಮುಖ್ಯ ಬಜಾರ್ ಸ್ಟ್ರೀಟ್ ಜಂಕ್ಷನ್,
ಇದಲ್ಲದೆ 10. ಚಂದ್ರಿಕಾ ಹೋಟೆಲ್, 11. ಚಿಕ್ಕಪೇಟೆ ಟಿಪಿಎಸ್ ಜಂಕ್ಷನ್ ಆಲೂರ್ ವೆಂಕಟ ರಾವ್ ರಸ್ತೆ, 12. CMH ಆಸ್ಪತ್ರೆ ಜಂಕ್ಷನ್ JB ನಗರ, 13. ದೊಡ್ಡ ಬಾಣಸವಾಡಿ ಮುಖ್ಯ ರಸ್ತೆ 7ನೇ ಮುಖ್ಯ ರಸ್ತೆ ಜಂಕ್ಷನ್, 14. ದೋಸುಸಾ ಸರ್ಕಲ್, 15.) DR MC ಮೋದಿ ಆಸ್ಪತ್ರೆ ರಸ್ತೆ ಜಂಕ್ಷನ್, 16.) ಡಾ ರಾಜಕುಮಾರ್ ರಸ್ತೆ ಮಣಿ ಕಾಂಪ್ಲೆಕ್ಸ್, 17. ಡಾ.ರಾಜ್‌ಕುಮಾರ್ ಪ್ರತಿಮೆ, ಜಂಕ್ಷನ್, ದೊಮ್ಮಲೂರು,
18. DRV ಜಂಕ್ಷನ್, 19. GPO ಸರ್ಕಲ್ ರಾಜ್ ಭವನ ರಸ್ತೆ, 20. HAL ಹಳೆಯ ವಿಮಾನ ನಿಲ್ದಾಣ ರಸ್ತೆ ಲೀಲಾ ಅರಮನೆ OP ಜಂಕ್ಷನ್, 21. HAL ಹಳೆಯ ವಿಮಾನ ನಿಲ್ದಾಣ RD, ASC ಜಂಕ್ಷನ್, 22. ಹೊಸೂರು ಮುಖ್ಯ ರಸ್ತೆ ಕೋರಮಂಗಲ 80 ಅಡಿ ರಸ್ತೆ ಜಂಕ್ಷನ್, 23. ಹೊಸೂರು ಮುಖ್ಯ ರಸ್ತೆ ತಾವರೆಕೆರೆ ಮುಖ್ಯ ರಸ್ತೆ ಜಂಕ್ಷನ್, 24. ಇಂದಿರಾನಗರ ಕೆಎಫ್‌ಸಿ ಜಂಕ್ಷನ್, 25. ಇಂದಿರಾನಗರ, 12ನೇ ಮುಖ್ಯ ರಸ್ತೆ, HAL 2ನೇ ಹಂತ, ಜಂಕ್ಷನ್, 26. ಜೆಪಿ ನಗರ 35ನೇ ಮುಖ್ಯ ರಸ್ತೆ 15 ಕ್ರಾಸ್ ಜಂಕ್ಷನ್,
27. ಜಯನಗರ 4ನೇ ಬ್ಲಾಕ್ ಜೆಎನ್ ಜಯನಗರ ಬಸ್ ನಿಲ್ದಾಣದ ಹತ್ತಿರ, 28. ಜಯನಗರ 4ನೇ ಮುಖ್ಯ 27ನೇ ಕ್ರಾಸ್, 29. ಕೆ ಎಚ್ ರಸ್ತೆ, ಸಿದ್ದಿಯಾ ರಸ್ತೆ ಜಂಕ್ಷನ್, 30. ಕಲಾಸಿಪಾಳ್ಯ ಮುಖ್ಯ ರಸ್ತೆ ಜಂಕ್ಷನ್, 31. ಕನಕಪುರ ರಸ್ತೆ ವಾಣಿವಿಲಾಸ್ ರಸ್ತೆ ಜಂಕ್ಷನ್, 32.) ಕತ್ರಿಗುಪ್ಪೆ ವೃತ್ತ, 33. ಕೋರಮಂಗಲ ವಿಪ್ರೋ ಪಾರ್ಕ್ ಜಂಕ್ಷನ್, 34.ಕೋರಮಂಗಲ ಐಶ್ವರ್ಯ ಜಂಕ್ಷನ್, 35. ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್, 36. MG ರಸ್ತೆ ಡಿಕನ್ಸನ್ RD, ಜಂಕ್ಷನ್.
37. ಮರಿಯಪ್ಪ ವೃತ್ತ, 38. ನವರಂಗ ವೃತ್ತ, 39. ಹೊಸ ಬೆಲ್ ರಸ್ತೆ ರಾಮಯ್ಯ ಆಸ್ಪತ್ರೆ, 40. ಹಳೆಯ ಮದ್ರಾಸ್ ರಸ್ತೆ 80 ಅಡಿ ಅಡ್ಡ ರಸ್ತೆ, 41. ವಾಯುವಿಹಾರ RD ವೀಲರ್ ರಸ್ತೆ ಜಂಕ್ಷನ್, 42. ಆರ್ ಟಿ ನಗರ ತರಳುಬಾಳು ಜಂಕ್ಷನ್, 43. ಸದಾಶಿವನಗರ ಪಿಎಸ್ ಜಂಕ್ಷನ್, 44. ಸಂಪಿಗೆ ರಸ್ತೆ 18ನೇ ಅಡ್ಡ ರಸ್ತೆ, 45. ಸಂಗಮ್ ಸರ್ಕಲ್ ಜೆಪಿ ನಗರ, 46. ಶಿವಾನಂದ ಸರ್ಕಲ್ ಜಂಕ್ಷನ್, 47. ಶ್ರೀನಿವಾಸಾಗಿಲು MN RD ಗಣಪತಿ ದೇವಸ್ಥಾನ RD ಕ್ರಾಸ್ JN, 48. ಸ್ವಾಮಿ ವಿವೇಕಾನಂದ ರಸ್ತೆ, ಮರ್ಫಿ ಟೌನ್ ಜಂಕ್ಷನ್, 49.) ಟಿ ಸಿ ಪಾಳ್ಯ ಜಂಕ್ಷನ್, 50. ಶಿಕ್ಷಕರ ಕಾಲೇಜ್ ಸರ್ಕಲ್.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ












Click it and Unblock the Notifications