ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಮೊಬೈಲ್ ಕ್ಯಾಂಟೀನ್: ಜನವರಿ 26 ರಿಂದ ಆರಂಭ

|
Google Oneindia Kannada News

ಬೆಂಗಳೂರು, ಜನವರಿ 05 : ಜಾಗದ ಕೊರತೆಯಿಂದಾಗಿ ಬಿಬಿಎಂಪಿಯ 24 ವಾರ್ಡ್ ಗಳಲ್ಲಿ ಜನವರಿ 26 ರಿಂದ ಇಂದಿರಾ ಮೊಬೈಲ್ ಕ್ಯಾಂಟೀನ್ ಆರಂಭವಾಗಲಿದೆ.

ಶಿರಾದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಸಿದ್ದರಾಮಯ್ಯಶಿರಾದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಬೈಲ್ ಕ್ಯಾಂಟೀನ್ ಉದ್ಘಾಟಿಸಲಿದ್ದಾರೆ. ವಿಧಾನ ಸೌಧದ ಆವರಣದಲ್ಲಿ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇಂದಿರಾ ಮೊಬೈಲ್ ಕ್ಯಾಂಟೀನ್ ಗಳಿಗೆ ಚಾಲನೆ ದೊರೆಯಲಿದೆ. ಬಡವರು, ಕೂಲಿ ಕಾರ್ಮಿಕರಿಗೆ ಅಗ್ಗದ ದರದಲ್ಲಿ ಮೊಬೈಲ್ ಕ್ಯಾಂಟೀನ್ ಗಳಲ್ಲಿ ಊಟ, ತಿಂಡಿ ದೊರೆಯಲಿದೆ.

Indira mobile canteen will launch on Republic day

ಮೊದಲ ಹಂತದಲ್ಲಿ 2017 ರ ಆಗಸ್ಟ್16 ರಂದು 198 ವಾರ್ಡ್ ಗಳ ಪೈಕಿ 101 ಕಡೆ ಇಂದಿರಾ ಕ್ಯಾಂಟೀನ್ ಗಳನ್ನು ಉದ್ಘಾಟಿಸಲಾಯಿತು. ಬಳಿಕ ಅ.2 ರಂದು 50 ಕಡೆ ಪ್ರಾರಂಭಿಸಲಾಯಿತು. ಉಳಿದ49 ವಾರ್ಡ್ ಗಳಲ್ಲಿ 24 ಕಡೆ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗವೇ ದೊರೆತಿಲ್ಲ. ಹೀಗಾಗಿ, ಈ ಪ್ರದೇಶಗಳಲ್ಲಿ ಮೊಬೈಲ್ ಕ್ಯಾಂಟೀನ್ ಗಳನ್ನು ತೆರೆಯಲಾಗುತ್ತಿದೆ. 25 ವಾರ್ಡ್ ಗಳಲ್ಲಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 27 ವಿಧಾನಸಭಾ ಕ್ಷೇತ್ರಗಳ ಪೈಕಿ 14ಕಡೆ ಕೇಂದ್ರೀಕೃತ ಅಡುಗೆ ಮನೆಗಳನ್ನು ನಿರ್ಮಿಸಲಾಗಿದೆ. 6 ಅಡುಗೆ ಮನೆಗಳು ತಿಂಗಳಾಂತ್ಯಕ್ಕೆ ಕಾರ್ಯಾರಂಭಗೊಳ್ಳಲಿದೆ.

ಇಂದಿರಾ ಕ್ಯಾಂಟೀನ್ ಊಟ-ತಿಂಡಿ ಗುಣಮಟ್ಟ ನಿಗಾಕ್ಕೆ ಮೊಬೈಲ್ ಅಪ್ಲಿಕೇಷನ್ಇಂದಿರಾ ಕ್ಯಾಂಟೀನ್ ಊಟ-ತಿಂಡಿ ಗುಣಮಟ್ಟ ನಿಗಾಕ್ಕೆ ಮೊಬೈಲ್ ಅಪ್ಲಿಕೇಷನ್

ಮೊಬೈಲ್ ಕ್ಯಾಂಟೀನ್ ಗೆ 13.50 ಲಕ್ಷ: ರಾಜ್ಯ ಸರ್ಕಾರ ಒಟ್ಟು 24 ಇಂದಿರಾ ಮೊಬೈಲ್ ಕ್ಯಾಂಟೀನ್ ಗಳನ್ನು ಆರಂಭಿಸಲಾಗುತ್ತಿದೆ. ಪ್ರತಿ ವಾಹನ ಖರೀದಿಗೆ 8.50 ಲಕ್ಷ ರೂ. ಮತ್ತು ಊಟ, ತಿಂಡಿಗಳ ವಿತರಣೆಗೆ ಅಗತ್ಯವಿರುವ ವ್ಯವಸ್ಥೆ, ವಿನ್ಯಾಸ ಉಪಕರಣಗಳ ಅಳವಡಿಕೆಗೆ 4.85 ಲಕ್ಷ ರೂ. ವೆಚ್ಚ ಮಾಡಲಾಗಿದೆ.

ಈ ಮೊಬೈಲ್ ಕ್ಯಾಂಟೀನ್ ವಾಹನಗಳು 15 ಅಡಿಯಷ್ಟು ಉದ್ದವಿದ್ದು, ನೆರಳಿಗೆ ವ್ಯವಸ್ಥೆ ಮಾಡಲಾಗಿದೆ. ವಾಹನದ ಮೇಲ್ಭಾಗದಲ್ಲಿ 400-500ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್ ಗಳನ್ನು ಹೊಂದಿರಲಿದೆ.

ಇಂದಿರಾ ಕ್ಯಾಂಟೀನ್ ನಲ್ಲಿ ಅಕ್ರಮ: ಎಸಿಬಿಗೆ ದೂರು ಸಲ್ಲಿಕೆ: ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಬಡವರ ಹೆಸರಿನಲ್ಲಿ ಸುಳ್ಳು ಲೆಕಕ್ ನೀಡಿ ಅಕ್ರಮ ನಡೆಯುತ್ತಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಐವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಗುರುವಾರ ದೂರು ಸಲ್ಲಿಸಲಾಗಿದೆ.

ಪಾಲಿಕೆಯ 100 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದೆ. ಆದರೆ ಒಂದು ಸಮಯಕ್ಕೆ 150ರಿಂದ 200 ಜನಕ್ಕೆ ಊಟ, ತಿಂಡಿ ನೀಡಿ 400 ರಿಂದ 500 ಜನರಿಗೆ ಊಟ ನೀಡಲಾಗಿದೆ ಎಂದು ಬಿಲ್ ಮಾಡಿ ಕೋಟ್ಯಂತರ ರೂ. ಲೂಟಿ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕಾರ್ಮಿಕರ ವೇದಿಕೆ ಅಧ್ಯಕ್ಷ ನಾಗೇಶ್ ಮನವಿ ಮಾಡಿದ್ದಾರೆ.

English summary
Chief minister Siddaramaiah will launch Indira Mobile canteen service on January 26 in Bengaluru. The BBMP has been already installed 101 Indira canteens in respective wards. Another 24 canteens will be installed in the remaining wards on the same day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X