ಕೆಂಪೇಗೌಡ ಏರ್‌ಪೋರ್ಟ್‌ನಲ್ಲೇ ಇಂಡಿಗೋ ವಿಮಾನ ದುರಸ್ತಿ ಘಟಕ
ಬೆಂಗಳೂರು, ಫೆಬ್ರವರಿ 1: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ನಿರ್ವಹಣಾ ಘಟಕವನ್ನು ಸ್ಥಾಪನೆ ಮಾಡಲಾಗುತ್ತಿದೆ.
ಕೆಐಎ ಏರ್‌ಪೋರ್ಟ್ ಆವರಣದಲ್ಲಿನ 5 ಎಕರೆ ಜಾಗವನ್ನು 20 ವರ್ಷಗಳ ಅವಧಿಗೆ ಉಪ ಗುತ್ತಿಗೆಗೆ ಕೊಡು ಒಪ್ಪಂದವಾಗಿದೆ. 13 ಸಾವಿರ ಚದರ ಮೀಟರ್ ಜಾಗದಲ್ಲಿ ಸುಸಜ್ಜಿತವಾದ ಈ ಘಟಕದಲ್ಲಿ 2 ಮಾಧಯಮ ಗಾತ್ರದ ವಿಮಾನಗಳನ್ನು ನಿಲುಗಡೆ ಮಾಡಬಹುದು.
ಶೀಘ್ರ ಎಂಜಿನ್ ಬದಲಾವಣೆ ವಿಭಾಗ, ಅದಕ್ಕೆ ಸಂಬಂಇಸಿದ ಗೋದಾಮು, ರಿಪೇರಿ ಮತ್ತು ನಿರ್ವಹಣೆ ಸಂಬಂಧಿಸಿದ ಮೂಲಸೌಕರ್ಯ ಹಾಗೂ ಎಂಜಿನಿಯರಿಂಗ್ ಕಚೇರಿಗಳು ಇರಲಿದೆ.

ಈ ಘಟಕವನ್ನು ಸ್ಥಾಪಿಸಲು ಬಿಐಎಎಲ್ ಮತ್ತು ದೇಶದ ಅತಿ ದೊಡ್ಡ ದೇಶೀಯ ಏರ್‌ಲೈನ್ಸ್ ಕಂಪನಿ ಇಂಡಿಗೋ ಅನ್ನು ನಿರ್ವಹಿಸಲು ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ ನಿರ್ವಹಿಸುವ ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್ ಒಪ್ಪಂದ ಮಾಡಿಕೊಂಡಿದೆ.
ಕೆಐಎ ನಿಲ್ದಾಣವೂ ಪ್ರಮುಖ ಸ್ಥಳವಾಗಿದ್ದು, ವಿಮಾನಯಾನ ಕ್ಷೇತ್ರದ ಬೆಳವಣಿಗೆಯನ್ನು ಮಹತ್ವದ ಪಾತ್ರ ವಹಿಸಲಿದೆ. ಇದೇ ಕಾರಣಕ್ಕೆ ದಕ್ಷಿಣ ಭಾರತದ ಅತ್ಯಂತ ಪ್ರಮುಖವಾದ ನಿರ್ವಹಣೆ ಘಟಕವನ್ನು ಸ್ಥಾಪಿಸುತ್ತಿದ್ದೇವೆ೨೦೨೦ರ ವೇಳೆಗೆ ಈ ಘಟಕ ಆರಂಭಗೊಳ್ಳಲಿದೆ ಎಂದು ಇಂಡಿಗೋ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೋಲ್ಫ್‌ಗ್ರ್ಯಾಂಗ್ ಪ್ರಾಕ್ ಶೂವರ್ ತಿಳಿಸಿದ್ದಾರೆ.












Click it and Unblock the Notifications