• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೂಗಲ್ 'ಇಂಡಿಕ್' ನನ್ನ ನಿರೀಕ್ಷೆಗಳೇನು? : ಬಿ.ಜಿ ಮಹೇಶ್

By Mahesh
|
Google Oneindia Kannada News

ಬೆಂಗಳೂರು, ಫೆ.28: ಜಾಗತಿಕ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ನಿಂದ ನಾವೇನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ 'ಗೂಗಲ್ ಪಕ್ಕಾ ಲೋಕಲ್ ಆಗ್ಬೇಕು ಗುರೂ' ಎಂದು ಒಂದು ಸಾಲಿನ ವಾಕ್ಯ ಹೇಳಿ ಮುಗಿಸಬಹುದು. ಅತ್ಯಧಿಕ ಬಳಕೆಯಲ್ಲಿರುವ ಗೂಗಲ್ ನಿಮ್ಮದೇ ಭಾಷೆಯಲ್ಲಿ ಬಳಸುವಂತಾದರೆ ಪರಸ್ಪರ ಏಳಿಗೆಗೆ ಸಹಕಾರಿ.

ಇತ್ತೀಚೆಗೆ ಮಾತೃಭಾಷೆ ದಿನಾಚರಣೆಯಂದು ಹೀಗೊಂದು ಅರ್ಥಪೂರ್ಣ ಕಾರ್ಯಗಾರ ಬೆಂಗಳೂರಿನಲ್ಲಿ ನಡೆಯಿತು. ಅಂತರ್ಜಾಲ ತಾಣಗಳಲ್ಲಿ ಇಂಡಿಕ್(ಇಂಡೋ ಆರ್ಯನ್ ಭಾಷೆ) ಭಾಷೆ ಹೆಚ್ಚಳದ ಬಗ್ಗೆ ಆಗ್ರಹ ಹೆಚ್ಚಾಯಿತು. ಈ ಕಾರ್ಯಗಾರದಲ್ಲಿ ಒನ್ ಇಂಡಿಯಾ ಸ್ಥಾಪಕ ಬಿ.ಜಿ ಮಹೇಶ್ ಅವರು ಗೂಗಲ್ ಮುಂದಿಟ್ಟ ಕೋರಿಕೆ ಪಟ್ಟಿ ಏನು ? ಎಂಬುದನ್ನು ತಿಳಿಯುವ ಮೊದಲು ಅಂತರ್ಜಾಲದಲ್ಲಿ ಸ್ಥಳೀಯ ಭಾಷೆ ಹೆಚ್ಚಳಕ್ಕಾಗಿ ಆಗಿರುವ ಕೆಲ ಸುಧಾರಣೆಗಳತ್ತ ಸ್ಥೂಲ ನೋಟ ಇಲ್ಲಿದೆ.

ತಂತ್ರಜ್ಞಾನದಲ್ಲಿ ಸ್ಥಳೀಯತೆ: ಪ್ರಾದೇಶಿಕ ಭಾಷೆಗಳ ಹೆಚ್ಚಳಕ್ಕೆ ಒತ್ತು ನೀಡಲು ಗೂಗಲ್ ಕೂಡಾ ಎರಡು ಮೂರು ವರ್ಷಗಳಿಂದ ಯತ್ನಿಸುತ್ತಿದೆ. ಭಾರತದ ಪ್ರಮುಖ ಭಾಷೆಗಳು ಸೇರಿದಂತೆ 63 ಭಾಷೆಗಳಲ್ಲಿ ಟ್ರಾನ್ ಲೇಟ್ ಟೂಲ್ ಬಿಡುಗಡೆ ಮಾಡಿತ್ತು. ಆದರೆ, ಅನೇಕ ಭಾಷೆಗಳು ಆರಂಭದ ಹಂತದ ಭಾಷೆ (alpha language) ಆಗಿತ್ತು.

* ಇಂಡಿಕ್ (ಇಂಡೋ ಆರ್ಯನ್ ಭಾಷೆ) ಇನ್ ಪುಟ್ ಮಾದರಿ ಇನ್ ಸ್ಕಿಪ್ಟ್ ಹಾಗೂ ಫೊನೆಟಿಕ್ ಕೀ ಬಳಸಿ ಟ್ರಾನ್ಸ್ ಲಿಟರೇಷನ್ ಮೂಲಕ ಕೀ ಮಾಡಬಹುದಾದ ಗೂಗಲ್ ಟ್ರಾನ್ ಲೇಟ್ ಬಳಕೆ ದಿನದಿಂದ ದಿನಕ್ಕೆ ಜನಪ್ರಿಯಗೊಂಡರೂ ಇನ್ನೂ ಸಂಪೂರ್ಣವಾಗಿ ದೋಷರಹಿತವಾಗಿಲ್ಲ.
* ಜತೆಗೆ ಗೂಗಲ್ ಟ್ರಾನ್ ಲಿಟರೇಷನ್ ಬಗ್ಗೆ ಅನೇಕ ದೂರುಗಳಿವೆ. ಇದಕ್ಕೆ ಪರಿಹಾರವಾಗಿ ವಿಕಿಮೀಡಿಯಾದ ಇಂಜಿನಿಯರ್ ಗಳು ಇನ್ ಪುಟ್ ಟೂಲ್ ಅಭಿವೃದ್ಧಿ ಪಡಿಸಿದ್ದರು.[ಇಲ್ಲಿದೆ ಉಪಾಯ]
* ಬ್ರೌಸರ್ ಮೆನು ನಲ್ಲಿ ಕನ್ನಡ: ಮೋಝಿಲ್ಲಾ ಫೈರ್ಫಾಕ್ಸ್ ತನ್ನ ಆಡ್ ಆನ್ ಗಳಲ್ಲಿ ಕನ್ನಡ ಸೇರಿದಂತೆ ಭಾರತೀಯ ಭಾಷೆಯಲ್ಲಿ ಒದಗಿಸಲು ಆರಂಭಿಸಿತು.
* ಭಾರತೀಯ ಇಂಟರ್ನೆಟ್ ಬಳಕೆದಾರರ ಅನುಕೂಲಕ್ಕಾಗಿ ಎಪಿಕ್ ಬ್ರೌಸರ್ ಸೇರಿದಂತೆ ಅನೇಕ ದೇಸಿ ಬ್ರೌಸರ್ ಗಳು ಕಾಣಿಸಿಕೊಂಡವು.

* ಒಂದೆರಡು ವರ್ಷಗಳ ಹಿಂದೆ ಮೋಝಿಲ್ಲಾ ಸಂಸ್ಥೆ ಕೂಡಾ ಬೆಂಗಳೂರಿನಲ್ಲಿ ಕಾರ್ಯಗಾರ ನಡೆಸಿ ತನ್ನ ಬ್ರೌಸರ್ ಗಳಲ್ಲಿ ಸರಿಯಾದ ಪದ ಬಳಕೆ ಮಾಡುವುದರ ಬಗ್ಗೆ ಒತ್ತು ನೀಡಿತು. [ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ]
* ಅಂತರ್ಜಾಲದಲ್ಲಿ ಕನ್ನಡ ಬಳಕೆ ಹೆಚ್ಚಳಕ್ಕೆ ಬರಹ, ನುಡಿ, ಪದ ತಂತ್ರಾಂಶಗಳಿವೆ. ಎಲ್ಲವೂ IME ಸೌಲಭ್ಯ ನೀಡುತ್ತಿವೆ. ಇದೆಲ್ಲವೂ ಉಚಿತವಾಗಿದೆ. 'ಪದ' ಇತ್ತೀಚೆಗೆ ಆಂಡ್ರಾಯ್ಡ್ ಮೊಬೈಲ್ ಕ್ಷೇತ್ರಕ್ಕೂ ಕಾಲಿಟ್ಟಿದೆ ಆದರೆ, ಶುಲ್ಕ ತೆತ್ತು ಅಪ್ಲಿಕೇಷನ್ ಪಡೆಯಬೇಕಾಗಿದೆ.
* ವಿಕಿಪೀಡಿಯ ಕನ್ನಡ ವಿಭಾಗ ನಿರಂತರವಾಗಿ ಕಾರ್ಯಗಾರ, ಅಂತರ್ಜಾಲದಲ್ಲಿ ಕನ್ನಡ ಬಳಕೆ ಬಗ್ಗೆ ಅರಿವು ಮೂಡಿಸುತ್ತಾ ಬಂದಿದೆ.

ಇಷ್ಟೆಲ್ಲ ಸೌಲಭ್ಯಗಳಿದ್ದರೂ ಗೂಗಲ್ ನಿಂದ ಕನ್ನಡಿಗರು ಏನು ನಿರೀಕ್ಷಿಸಬಹುದು. ಅಂತರ್ಜಾಲದಲ್ಲಿ ಕನ್ನಡ ಭಾಷೆ ಹೆಚ್ಚಳ ಏಕೆ ಅವಶ್ಯ? ಇದಕ್ಕೆ ಗೂಗಲ್ ಹೇಗೆ ಸಹಕಾರಿ ಎಂಬುದರ ಬಗ್ಗೆ ಸುಮಾರು 7 ಭಾರತೀಯ ಭಾಷೆಗಳಲ್ಲಿ ವೆಬ್ ತಾಣಗಳನ್ನು ಹೊಂದಿರುವ ಒನ್ ಇಂಡಿಯಾ ಸಂಸ್ಥೆ ಸ್ಥಾಪಕ ಬಿ.ಜಿ. ಮಹೇಶ್ ಅವರು ಕಾರ್ಯಾಗಾರದಲ್ಲಿ ಮಾತನಾಡಿದ್ದರು. ಗೂಗಲ್ ಮುಂದೆ ಮಹೇಶ್ ಅವರಿಟ್ಟ ಬೇಡಿಕೆಗಳೇನು ಇಲ್ಲಿದೆ ತಪ್ಪದೇ ಓದಿ

English summary
Indic Android Hackathon – What can Google do for Indic?: Google India recently conducted "Indic Android Hackathon". B.G Mahesh founder of Oneindia Web portal which publishes content in 7 Indic languages has presented his wish list to Google to look into for Indic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion