ಯಶವಂತಪುರ, ವಾಸ್ಕೋ-ಡ-ಗಾಮಾ ವಿಶೇಷ ರೈಲು; ವೇಳಾಪಟ್ಟಿ, ನಿಲ್ದಾಣ
ಬೆಂಗಳೂರು, ಆಗಸ್ಟ್ 11; ಶನಿವಾರದಿಂದ ಆರಂಭವಾಗುವ ಸಾಲು ಸಾಲು ರಜೆ, ಸ್ವಾತಂತ್ರ್ಯ ದಿನಾಚರಣೆ 2023ರ ಸಲುವಾಗಿ ಉಂಟಾಗುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ.
ಬೆಂಗಳೂರಿನ ಯಶವಂತಪುರ ಮತ್ತು ವಾಸ್ಕೋ-ಡಾ-ಗಾಮಾ ನಡುವೆ ಸಹ ವಿಶೇಷ ರೈಲು ಓಡಿಸಲಾಗುತ್ತಿದೆ. ಬೆಂಗಳೂರು ನಗರಿಂದ ಹೊರಗೆ ಹೋಗಲು ಯೋಜನೆ ಮಾಡುತ್ತಿರುವವರು ಈ ವಿಶೇಷ ರೈಲಿನ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ಹೇಳಿದೆ.

ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಯಶವಂತಪುರ-ವಾಸ್ಕೋ-ಡಾ-ಗಾಮಾ ನಡುವಿನ 1 ಟ್ರಿಪ್ ವಿಶೇಷ ರೈಲು ಸಂಚಾರದ ಮಾಹಿತಿ ನೀಡಿದೆ. ರೈಲು ಸಂಖ್ಯೆ 07357/ 07358 ಸಂಚಾರ ನಡೆಸಲಿದೆ. ಯಶವಂತಪುರದಿಂದ ವಿಶೇಷ ರೈಲು ಆಗಸ್ಟ್ 11ರಂದು ಮತ್ತು ಆಗಸ್ಟ್ 12ರಂದು ವಾಸ್ಕೋ-ಡಾ-ಗಾಮಾ ನಿಲ್ದಾಣದಿಂದ ಹೊರಡಲಿದೆ.
ವಿಶೇಷ ರೈಲು ವೇಳಾಪಟ್ಟಿ, ನಿಲ್ದಾಣಗಳು
ರೈಲು ಸಂಖ್ಯೆ 07357 ಆಗಸ್ಟ್ 11ರಂದು ಯಶವಂತಪುರ ನಿಲ್ದಾಣದಿಂದ ಸಂಜೆ 6.15 ಗಂಟೆಗೆ ಹೊರಟು ಮರುದಿನ, ವಾಸ್ಕೋ-ಡ-ಗಾಮಾ ನಿಲ್ದಾಣವನ್ನು ಬೆಳಗ್ಗೆ 9.30ಕ್ಕೆ ತಲುಪಲಿದೆ.
ಈ ರೈಲು ತುಮಕೂರು (7:03/7:05 pm), ಅರಸೀಕೆರೆ (8:15/8:20 pm), ಬೀರೂರು (8:58/9:00 pm), ದಾವಣಗೆರೆ (10:20/10:22 pm), ಹರಿಹರ (10:36/10:38 pm), ಹಾವೇರಿ (12:03/12:05 am), ಹುಬ್ಬಳ್ಳಿ (2:00/02:10 am.), ಧಾರವಾಡ (2:38/2:40 am), ಲೋಂಡಾ (4:10/4:12 am), ಕ್ಯಾಸಲ್‌ರಾಕ್ (4:45/5:00 am), ಕುಲೆಮ್ (6:50/7:00 am), ಸ್ಯಾಂವೊರ್ಡೆಮ್ (7:43/ 7:44 am) ಮತ್ತು ಮಡಗಾಂವ (7:55/8:00 am)ಈ ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ.
ರೈಲು ಸಂಖ್ಯೆ 07358 ಆಗಸ್ಟ್ 12 ರಂದು ವಾಸ್ಕೋ-ಡ-ಗಾಮಾ ನಿಲ್ದಾಣದಿಂದ ಮಧ್ಯಾಹ್ನ 2.30ಕ್ಕೆ ಹೊರಟು, ಮರುದಿನ ಬೆಳಗ್ಗೆ 4:30 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಮಡಗಾಂವ (3:15/3:20 pm), ಸ್ಯಾಂವೊರ್ಡೆಮ್ (3:29/3:30 pm), ಕುಲೆಮ್ (4:00/4:05 pm), ಕ್ಯಾಸಲ್‌ರಾಕ್ (5:05/5:15 pm), ಲೋಂಡಾ (5:39/5:40 pm), ಧಾರವಾಡ (7:23/7:25 pm), ಹುಬ್ಬಳ್ಳಿ (8:35/8:45 pm), ಹಾವೇರಿ (9:58/10:00 pm), ಹರಿಹರ (10:43/10:45 pm), ದಾವಣಗೆರೆ (11:13/11:15 pm), ಬೀರೂರು (12:38/12:40 pm), ಅರಸೀಕೆರೆ (01:15/ 01:20 am) ಮತ್ತು ತುಮಕೂರು (2:28/2:30 am) ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ.
ಈ ವಿಶೇಷ ರೈಲುಗಳು ಎಸಿ ಪಸ್ಟ್ ಕ್ಲಾಸ್ 1, ಎಸಿ ಟು ಟೈಯರ್ 2, ಎಸಿ ತ್ರಿ ಟೈಯರ್ 7, ಸ್ಲೀಪರ್ ಕ್ಲಾಸ್ 8 ಮತ್ತು ದಿವ್ಯಾಂಗ್ ಸ್ನೇಹಿ ಬೋಗಿಗಳಿಂದ ಕೂಡಿದ ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು 2 ಸೇರಿದಂತೆ ಒಟ್ಟು 20 ಬೋಗಿ ಹೊಂದಿರಲಿದೆ.
ಬೆಂಗಳೂರು-ಕಲಬುರಗಿ ರೈಲು; ಇದೇ ಮಾದರಿಯಲ್ಲಿ 2 ಟ್ರಿಪ್ ಬೆಂಗಳೂರು ಮತ್ತು ಕಲಬುರಗಿ ನಡುವೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ರೈಲು ನಂಬರ್ 06201/ 06202 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ. ವಿಶೇಷ ರೈಲು ಬೆಂಗಳೂರಿನಿಂದ ಆಗಸ್ಟ್ 11 ಮತ್ತು 14 ರಂದು ಹೊರಡಲಿದೆ. ಆಗಸ್ಟ್ 12 ಮತ್ತು 15ರಂದು ಕಲಬುರಗಿಯಿಂದ ಹೊರಡಲಿದೆ.
ರೈಲು ಸಂಖ್ಯೆ 06201 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ರಾತ್ರಿ 10.25ಕ್ಕೆ ಹೊರಟು, ಮರುದಿನ ಬೆಳಗ್ಗೆ 9 ಗಂಟೆಗೆ ಕಲಬುರಗಿ ತಲುಪಲಿದೆ. ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯ ರೋಡ್, ರಾಯಚೂರು, ಮತ್ತು ವಾಡಿ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ರೈಲು ಸಂಖ್ಯೆ 06202 ಆಗಸ್ಟ್ 12 ಮತ್ತು 15 ರಂದು ಬೆಳಗ್ಗೆ 10 ಗಂಟೆಗೆ ಕಲಬುರಗಿಯಿಂದ ಹೊರಟು, ಅದೇ ದಿನ ರಾತ್ರಿ 9:15 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ತಲುಪಲಿದೆ. ರೈಲು ವಾಡಿ, ರಾಯಚೂರು, ಮಂತ್ರಾಲಯ ರೋಡ್, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ, ಮತ್ತು ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.












Click it and Unblock the Notifications