ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಐಸಿಟಿಇ ಹೈಬ್ರಿಡ್ ಕಲಿಕೆಗೆ ಚಾಲನೆ; ಜುಲೈ 29ರಿಂದ ಆರಂಭ

|
Google Oneindia Kannada News

ಬೆಂಗಳೂರು ಜುಲೈ 25: ಭಾರತದ 10,000 ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ 'ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ' ಅಡಿಯಲ್ಲಿ ಜುಲೈ 29ರಿಂದ ಹೈಬ್ರಿಡ್ ಕಲಿಕೆ ಆರಂಭವಾಗಲಿದೆ.

ಈ ಸಂಬಂಧ ಟೆಕ್ ಆವಂತ್ ಗಾರ್ಡೆ ಆಯೋಜಿಸಿದ್ದ 10,000 ಅಖಿಲ ಭಾರತ ಅನುಮೋದಿತ ಸಂಸ್ಥೆಗಳು ಮತ್ತು ಕಾಲೇಜುಗಳಿಗೆ ಹೈಬ್ರಿಡ್ ಕಲಿಕೆಯ ಪೂರ್ವ ಭಾವಿ ಸಮಾರಂಭಕ್ಕೆ ಎಐಸಿಟಿಇ ಅಧ್ಯಕ್ಷ ಪ್ರೊ. ಅನಿಲ್ ದತ್ತಾತ್ರೇಯ ಸಹಸ್ರಬುಧೆ ಸೋಮವಾರ ಚಾಲನೆ ನೀಡಿದರು.

ಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ ಗಣಿತ, ಭೌತಶಾಸ್ತ್ರ ಕಡ್ಡಾಯವಲ್ಲ: ಎಐಸಿಟಿಇಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ ಗಣಿತ, ಭೌತಶಾಸ್ತ್ರ ಕಡ್ಡಾಯವಲ್ಲ: ಎಐಸಿಟಿಇ

ಆಲ್‌ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಷನ್ (ಎಐಸಿಟಿಇ) ತನ್ನ ಎಲ್ಲ ಅನುಮೋದಿತ ಕಾಲೇಜುಗಳಿಗೆ ಹೈಬ್ರಿಡ್ ಕಲಿಕೆಯನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಇದರಿಂದ ಕಾಲೇಜುಗಳ, ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸದೃಢವಾಗಲಿದ್ದಾರೆ.

ಇನ್ನು ಟೆಕ್ ಆವಂತ್ ಗಾರ್ಡೆ (ಟಿಎಜಿ) ಈ ಕಾಲೇಜುಗಳಿಗೆ ನೆರವಾಗುವ ಮೂಲಕ ಅವುಗಳನ್ನು 'ಹೈಬ್ರಿಡ್ ಕಲಿಕೆ'ಯ ತಾಣಗಳಾಗಿ ಈ ಪರಿವರ್ತಿಸಲಿದೆ. ಟೆಕ್ ಆವಂತ್-ಗಾರ್ಡೆ ಮೈಕ್ರೊಸಾಫ್ಟ್ ನ ಜಾಗತಿಕ ಪಾಲುದಾರನಾಗಿದ್ದು, ಮೈಕ್ರೊಸಾಫ್ಟ್ ಎಜುಕೇಷನ್ ಸಹಯೋಗದಲ್ಲಿ ಈ ತರಬೇತಿ ಕಾರ್ಯಕ್ರಮ ಜರುಗಲಿದೆ. ಶೈಕ್ಷಣಿಕ ನಾಯಕರಿಗೆ ಹೈಬ್ರಿಡ್ ಕಲಿಕೆಯ ಹೊಸ ಹೊಸ ಮಾದರಿಗಳ ಮೇಲೆ ತರಬೇತಿ ಕೈಗೊಳ್ಳಲಾಗುತ್ತದೆ.

3ತಂಡಗಳಿಗೆ ತರಬೇತಿ

3ತಂಡಗಳಿಗೆ ತರಬೇತಿ

ಡಿಜಿಟಲ್ ಪರಿವರ್ತನೆಯತ್ತ ಮೊದಲ ಹೆಜ್ಜೆಯಾಗಿ, ಟಿಎಜಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಹೈಬ್ರಿಡ್ ಕಲಿಕೆಯ ಕುರಿತು ಉಚಿತ ಪ್ರಮಾಣ ಪತ್ರ ಸಮಾರಂಭ (ಸರ್ಟಿಫಿಕೇಷನ್ ಪ್ರೋಗ್ರಾಮ್) ನಡೆಸುತ್ತಿದೆ. ಈ ತರಬೇತಿಯನ್ನು ಮೂರು ತಂಡಗಳಲ್ಲಿ ನಡೆಸಲಾಗುತ್ತದೆ. ಈ ಕಾರ್ಯಕ್ರಮಗಳು ಮೂರು ವಾರ ಎರಡು ದಿನದ ಅವಧಿಯಲ್ಲಿ ಆನ್‌ಲೈನ್‌ ಮೂಲಕ ನಡೆಯಲಿದೆ.

ಎಲ್ಲಿಂದ ಬೇಕಾದರೂ ಕಲಿಯಲು ಅವಕಾಶ

ಎಲ್ಲಿಂದ ಬೇಕಾದರೂ ಕಲಿಯಲು ಅವಕಾಶ

ಈ ಸಂದರ್ಭದಲ್ಲಿ ಮಾತನಾಡಿದ ಟೆಕ್ ಆವಂತ್ ಗಾರ್ಡೆಯ ಸಿಇಒ ಆಲಿ ಸೇಟ್ ಅವರು, 'ಹೈಬ್ರಿಡ್ ಕಲಿಕೆ'ಯಲ್ಲಿ ಶಿಕ್ಷಣವನ್ನು ಮರು ಕಲ್ಪಿಸಿಕೊಳ್ಳಲಾಗುತ್ತದೆ. ಶಿಕ್ಷಕರು ತಮ್ಮ ಪೂರ್ಣ ಸಾಮರ್ಥ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕಲಿಕೆ ಎಲ್ಲ ಕಡೆ, ಯಾವುದೇ ಸ್ಥಳದಿಂದ ಯಾವುದೇ ರೂಪದಲ್ಲೂ ಕಲಿಯಬಹುದಾಗಿದೆ. ಕಲಿಕೆ ಮತ್ತು ಶಿಕ್ಷಣದ ನಡುವೆ ತಕ್ಕ ಮಟ್ಟಿನ ಭಿನ್ನತೆ, ವ್ಯತ್ಯಾಸ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಶೈಕ್ಷಣಿಕ ನಾಯಕರು ಪ್ರಮಾಣ ಪತ್ರ ಪಡೆಯುತ್ತಾರೆ. ಕಾಲೇಜುಗಳು ಹೈಬ್ರಿಡ್ ಲರ್ನಿಂಗ್ ನ ಎರಡು ಸೆಷನ್‌ಳಿಗೆ ಮಾತ್ರ ಅರ್ಹತೆ ಪಡೆದಿರುತ್ತವೆ. ತರಬೇತಿ ಕಾರ್ಯಕ್ರಮದ ನೋಂದಣಿಯನ್ನು ಟ್ಯಾಗ್ ಇವೆಂಟ್ ಇನ ಏಕ್ಟೇ ಮೂಲಕ ಮಾಡಿಕೊಳ್ಳಬಹುದಾಗಿದೆ.

ತರಬೇತಿಯ ಅವಧಿ ವಿವರ ಹೀಗಿದೆ

ತರಬೇತಿಯ ಅವಧಿ ವಿವರ ಹೀಗಿದೆ

ಮೊದಲ ಬ್ಯಾಚ್ ಇದೇ ವರ್ಷ (2022) ಜುಲೈ 29ರಿಂದ ಜುಲೈ 30ರಂದು ಶನಿವಾರವರೆಗೆ ನಡೆಯಲಿದೆ. ಇನ್ನು ಎರಡನೇ ಬ್ಯಾಚ್ ಆಗಸ್ಟ್ 5ರ ಶುಕ್ರವಾರ ಆರಂಭವಾಗಿ ಮರುದಿನ ಅಂದರೆ ಆಗಸ್ಟ್ 6 ಶನಿವಾರದವರೆಗೆ ನಡೆಯಲಿದೆ. ಇನ್ನು ವಿದ್ಯಾರ್ಥಿಗಳು ಮೂರನೇ ಬ್ಯಾಚ್ ಆಗಸ್ಟ್ 12ರ ಶುಕ್ರವಾರದಿಂದ ಆಗಸ್ಟ್ 13ರ ಶನಿವಾರ ವರೆಗೆ ಜರುಗಲಿದೆ. ವಾರಾಂತ್ಯಕ್ಕೆ ಹೈಬ್ರೀಡ್ ಕಲಿಕೆ ಕೈಗೊಂಡಿರುವುದನ್ನು ಇಲ್ಲಿ ಕಾಣಬಹುದಾಗಿದೆ.

ತರಬೇತಿಯ ಉದ್ದೇಶವೇನು?

ತರಬೇತಿಯ ಉದ್ದೇಶವೇನು?

ವಿದ್ಯಾರ್ಥಿಗಳು, ಕಾಲೇಜು ಶೈಕ್ಷಣಿಕ ದೂರದೃಷ್ಟಿ ಅಭಿವೃದ್ಧಿಗೊಳಿಸುವ ಜತೆಗೆ ಆ ನಿಟ್ಟಿನಲ್ಲಿ ಸಾಗಲು ನೀಲನಕ್ಷೆ ನಿರ್ಮಿಸಲಾಗುವುದು. ಪಾಲುದಾರರ ಸಜ್ಜುಗೊಳಿಸುವುದು. ಮಾದರಿ ಕಾಲೇಜುಗಳನ್ನಾಗಿ ಅಭಿವೃದ್ಧಿ ಪಡಿಸುವುದು. ಜತೆಗೆ ಕಲಿಕೆ ಮೂಲಕ ಕಾಲೇಜುಗಳ ಜತೆ ನಿರಂತರ ಸಂಪರ್ಕ ಸಾಧಿಸುವುದು ಹಾಗೂ ರಿಯಲ್ ಟೈಮ್ ನಲ್ಲಿ ಅಧ್ಯಯನ ಕೈಗೊಳ್ಳುವ ಉದ್ದೇಶ ಈ ಹೈಬ್ರೀಡ್ ಕಲಿಕೆ ಯೋಜನೆಯ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಶ್ರೀ ಆಲಿ ಸೇಟ್ ಟೆಕ್ ಆವಂತ್ ಗಾರ್ಡೆ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

English summary
All India Council for Technical Education (AICTE) president Prof. Anil Dattatraya Sahasrabudhe launched the hybrid learning offered by AICTE on Monday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X